alex Certify BIG NEWS: ನಟ ಶರತ್ ಕುಮಾರ್ ಹಾಗೂ ಪತ್ನಿ ರಾಧಿಕಾ ಶರತ್ ಕುಮಾರ್ ಗೆ ಜೈಲು ಶಿಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಟ ಶರತ್ ಕುಮಾರ್ ಹಾಗೂ ಪತ್ನಿ ರಾಧಿಕಾ ಶರತ್ ಕುಮಾರ್ ಗೆ ಜೈಲು ಶಿಕ್ಷೆ

ಚೆನ್ನೈ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಸ್ಟಾರ್ ದಂಪತಿಗಳಾದ ಶರತ್ ಕುಮಾರ್ ಹಾಗೂ ನಟಿ ರಾಧಿಕಾ ಶರತ್ ಕುಮಾರ್ ಅವರಿಗೆ ವಿಶೇಷ ನ್ಯಾಯಾಲಯ 1 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.

ರಾಜಕಾರಣಿ, ನಟ ಶರತ್ ಕುಮಾರ್ ಹಾಗೂ ಪತ್ನಿ ರಾಧಿಕಾ ಶರತ್ ಕುಮಾರ್ ಅವರ ನಿರ್ಮಾಣ ಸಂಸ್ಥೆ 2015ರಲ್ಲಿ ‘ಇದು ಎನ್ನಮಾಯಂ’ ಎಂಬ ಚಿತ್ರ ನಿರ್ಮಾಣಕ್ಕಾಗಿ ರೇಡಿಯಂಟ್ ಗ್ರೂಪ್ ನಿಂದ ಸಾಲ ಪಡೆದುಕೊಂಡಿತ್ತು.

ವಿಕ್ರಂ ಪ್ರಭು ಹಾಗೂ ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಈ ಚಿತ್ರವನ್ನು ಎ.ಎಲ್. ವಿಜಯ್ ನಿರ್ದೇಶಿಸಿದ್ದರು. ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಶರತ್ ಕುಮಾರ್ ವಿರುದ್ಧ 7 ಪ್ರಕರಣಗಳು ದಾಖಲಾಗಿದ್ದವು. ಪತ್ನಿ ರಾಧಿಕಾ ವಿರುದ್ಧ 2 ಪ್ರಕರಣ ದಾಖಲಾಗಿತ್ತು.

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಪಾರ್ವತಿ ಮೆನನ್

ಈ ನಡುವೆ ರೇಡಿಯಂಟ್ ಗ್ರೂಪ್ ಗೆ ಸಾಲ ಮರುಪಾವತಿಗಾಗಿ ಶರತ್ ಹಾಗೂ ರಾಧಿಕಾ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಈ ಬಗ್ಗೆ 2018ರಲ್ಲಿ ರೇಡಿಯಂಟ್ ಗ್ರೂಪ್ ಕೋರ್ಟ್ ಮೆಟ್ಟಿಲೇರಿತ್ತು. ನಾಲ್ಕು ವರ್ಷಗಳ ವಿಚಾರಣೆ ಬಳಿಕ ಇದೀಗ ನ್ಯಾಯಾಲಯ ನಟ ಶರತ್ ಕುಮಾರ್ ಹಾಗೂ ರಾಧಿಕಾ ದಂಪತಿಗೆ 1 ವರ್ಷ ಜೈಲುಶಿಕ್ಷೆ ವಿಧಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...