alex Certify ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಪಾರ್ವತಿ ಮೆನನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಪಾರ್ವತಿ ಮೆನನ್

ನಟಿ ಪಾರ್ವತಿ ಮೆನನ್ ಇಂದು ತಮ್ಮ 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪಾರ್ವತಿ ಮೆನನ್ 2006 ರಲ್ಲಿ ಮಲಯಾಳಂನ ‘ಔಟ್ ಆಫ್ ಸಿಲೆಬಸ್’ ಎಂಬ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು.

ಕನ್ನಡದಲ್ಲಿ ಮಿಲನ, ಮಳೆ ಬರಲಿ ಮಂಜೂ ಇರಲಿ, ಹಾಗೂ ಪೃಥ್ವಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 2007ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಇವರು ನಟಿಸಿದ್ದ ‘ಮಿಲನ’ ಚಿತ್ರ 1 ವರ್ಷ ಕ್ಕೂ ಹೆಚ್ಚು ದಿನಗಳ ಕಾಲ ಪ್ರದರ್ಶನ ಕಾಣುವ ಮೂಲಕ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿತ್ತು.

ಸೋಶಿಯಲ್​ ಮೀಡಿಯಾದಲ್ಲಿ ಫ್ಯಾನ್ಸ್​ಗೆ ಟಾಸ್ಕ್​ ಕೊಟ್ಟ ಅರ್ಜುನ್​ ಕಪೂರ್​..! ಜಾನ್ವಿ ಕಪೂರ್​ರಿಂದ ಬಂತು ಫನ್ನಿ ಕಮೆಂಟ್​

ನಟಿ ಪಾರ್ವತಿ ಮೆನನ್ ತಮಿಳು, ಮಲಯಾಳಂ ಹಾಗೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿನಿತಾರೆಯರು ಇಂದು ಪಾರ್ವತಿ ಮೆನನ್ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಪಾರ್ವತಿ ಮೆನನ್ 1988 ಏಪ್ರಿಲ್ 7ರಂದು ಕೇರಳದ ಕೊಜ್ಜಿಕೊಡೆಯಲ್ಲಿ ಜನಿಸಿದ್ದು ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...