alex Certify ವಿದ್ಯಾರ್ಥಿ ಶಾಲೆ ತಲುಪಲು ತಡವಾಗುತ್ತೆ ಅಂತಾ ಬಸ್​ ವೇಳಾಪಟ್ಟಿಯನ್ನೇ ಬದಲಿಸಿದ ಸಾರಿಗೆ ಸಂಸ್ಥೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿ ಶಾಲೆ ತಲುಪಲು ತಡವಾಗುತ್ತೆ ಅಂತಾ ಬಸ್​ ವೇಳಾಪಟ್ಟಿಯನ್ನೇ ಬದಲಿಸಿದ ಸಾರಿಗೆ ಸಂಸ್ಥೆ….!

ಬಸ್​ ಸೇವೆಗಳ ಪರಿಷ್ಕೃತ ವೇಳಾಪಟ್ಟಿಯಿಂದಾಗಿ ತಮಗೆ ಸರಿಯಾದ ಸಮಯಕ್ಕೆ ಶಾಲೆಗೆ ಬರಲು ಸಾಧ್ಯವಾಗುತ್ತಿಲ್ಲ ಅಂತಾ ಒಡಿಶಾದ ಸಾಯಿ ಅನ್ವೇಶ್​ ಪ್ರಧಾನ್​ ಎಂಬ ವಿದ್ಯಾರ್ಥಿ ಟ್ವಿಟರ್​ನಲ್ಲಿ ಹೇಳುವ ಮೂಲಕ ಅಧಿಕಾರಿಗಳ ಗಮನ ಸೆಳೆದಿದ್ದಾನೆ.

ನಾನು ಭುವನೇಶ್ವರ ಎಂಬಿಎಸ್​ ಸಾರ್ವಜನಿಕ ಶಾಲೆಯ ವಿದ್ಯಾರ್ಥಿಯಾಗಿದ್ದೇನೆ. ನಾನು ಪ್ರತಿದಿನ ಶಾಲೆಗೆ ತೆರಳಲು ಮೊ ಬಸ್​ ಬಳಕೆ ಮಾಡುತ್ತಿದ್ದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಬಸ್​ನ ವೇಳಾಪಟ್ಟಿ ಬದಲಾಗಿದೆ ಎಂದು ಟ್ವೀಟ್​ ಮಾಡಿದ್ದ.

ನನ್ನ ಶಾಲೆಗೆ ನಾನು 7.30 ರ ಒಳಗಾಗಿ ಹಾಜರಾತಿ ನೀಡಬೇಕು. ಆದರೆ ದುರದೃಷ್ಟವಶಾತ್​ ಮಾರ್ಗ್​ 13ರ ಮೊದಲ ಬಸ್​ ಲಿಂಗೀಪುರದಿಂದ ಬೆಳಗ್ಗೆ 7:40 ಕ್ಕೆ ಹೊರಡುತ್ತಿದೆ. ಇದರ ಪರಿಣಾಮವಾಗಿ ನಾನು ಶಾಲೆಗೆ ತಡವಾಗಿ ತಲುಪುತ್ತಿದ್ದು ಸಂಕಷ್ಟ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ. ವಿದ್ಯಾರ್ಥಿಯ ಈ ಟ್ವೀಟ್​ಗೆ ಪ್ರತಿಕ್ರಿಯಿಸಿದ ಕ್ಯಾಪಿಟಲ್​ ರೀಜನ್​ ಅರ್ಬನ್​ ಟ್ರಾನ್ಸ್​ಪೋರ್ಟ್, ಸಾಯಿ, ನಿಮ್ಮ ವಿನಂತಿಯನ್ನ ನಾವು ಗಮನಿಸಿದ್ದೇವೆ ಎಂದು ಟ್ವೀಟ್​ ಮಾಡಿತ್ತು.

ಇತ್ತ ಸಿಆರ್​ಯುಟಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಐಪಿಎಸ್​ ಅಧಿಕಾರಿ ಅರುಣ್​ ಬೋತ್ರಾ ಕೂಡ ಟ್ವೀಟ್ ಮಾಡಿ, ಬಸ್​ ಸಮಯವನ್ನ ಬದಲಾಯಿಸಲಾಗುವುದು. ಹಾಗೂ ಇದರಿಂದ ನಿಮಗೆ ಶಾಲೆಗೆ ಹೋಗೋಕೆ ತಡವಾಗೋದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ

 

.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...