alex Certify ಶ್ರೀನಗರದ ‘ಟ್ಯೂಲಿಪ್’ ಉದ್ಯಾನವನಕ್ಕೆ ಬರೋಬ್ಬರಿ 50 ಸಾವಿರ ಮಂದಿ ಭೇಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೀನಗರದ ‘ಟ್ಯೂಲಿಪ್’ ಉದ್ಯಾನವನಕ್ಕೆ ಬರೋಬ್ಬರಿ 50 ಸಾವಿರ ಮಂದಿ ಭೇಟಿ

ಶ್ರೀನಗರದ ಜಬರ್ವಾನ್​​ ಪರ್ವತ ಶ್ರೇಣಿಯಲ್ಲಿರುವ ಏಷ್ಯಾದ ಅತಿದೊಡ್ಡ ಟ್ಯುಲಿಪ್​ ಉದ್ಯಾನವನವು ಭಾರೀ ಫೇಮಸ್​ ಆಗಿದೆ. ಕಳೆದ ಐದು ದಿನಗಳಲ್ಲಿ ಈ ಉದ್ಯಾನವನಕ್ಕೆ ಸರಿ ಸುಮಾರು 50 ಸಾವಿರ ಜನರು ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

35 ಎಕರೆ ವಿಸ್ತೀರ್ಣ ಹೊಂದಿರುವ ಈ ಉದ್ಯಾನವನದಲ್ಲಿ 15 ಲಕ್ಷ ವೈವಿಧ್ಯದ ಟ್ಯೂಲಿಪ್​ ಹೂಗಳಿವೆ. ಈ ಉದ್ಯಾನವನ್ನ ಲೆಫ್ಟಿನಂಟ್​ ಜನರಲ್​​ ಸಲಹೆಗಾರ ಅಹಮದ್ ಖಾನ್​ ಮಾರ್ಚ್ 25ರಂದು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದ್ರು.

ಮೊದಲ ದಿನವೇ ಈ ಉದ್ಯಾನವನಕ್ಕೆ 4500 ಮಂದಿ ಭೇಟಿ ನೀಡಿದ್ದರು. ಕಳೆದ 5 ದಿನಗಳಲ್ಲಿ ಒಟ್ಟು 48 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ. ಇದರಲ್ಲಿ ದೇಶಿ ಹಾಗೂ ವಿದೇಶಿ ಪ್ರಜೆಗಳು ಸೇರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏಪ್ರಿಲ್​ ಮೊದಲ ವಾರದಲ್ಲಿ ಟ್ಯುಲಿಪ್​ ಹಬ್ಬವನ್ನ ಮಾಡೋಕೆ ಪ್ರವಾಸೋದ್ಯಮ ಇಲಾಖೆ ನಿರ್ಧಾರ ಕೈಗೊಂಡಿದೆ. ಈ ಸಮಯದಲ್ಲಿ ಟ್ಯುಲಿಪ್​ ಹೆಚ್ಚಿನ ಸಂಖ್ಯೆಯಲ್ಲಿ ಅರಳೋದ್ರಿಂದಾಗಿ ಪ್ರವಾಸಿಗರ ಕಣ್ಣಿಗೆ ಇನ್ನಷ್ಟು ಮಜಾ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...