alex Certify ವರ್ಷದ ಬಳಿಕ ಅಂತರ್​ ಧರ್ಮೀಯ ವಿವಾಹ ಅಮಾನ್ಯ ಮಾಡಿದ ಚರ್ಚ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಷದ ಬಳಿಕ ಅಂತರ್​ ಧರ್ಮೀಯ ವಿವಾಹ ಅಮಾನ್ಯ ಮಾಡಿದ ಚರ್ಚ್​..!

ಕೇರಳದ ಕೊಚ್ಚಿಯಲ್ಲಿರುವ ಸಿರೋ ಮಲಬಾರ್​ ಚರ್ಚ್​ನಲ್ಲಿ ಮೂವರು ಸದಸ್ಯರುಳ್ಳ ವಿಚಾರಣಾ ಆಯೋಗವು ಮುಸ್ಲಿಂ ಪುರುಷ ಹಾಗೂ ಕ್ಯಾಥೋಲಿಕ್​ ಮಹಿಳೆ ನಡುವೆ ನಡೆದ ಅಂತರ್​ ಧರ್ಮೀಯ ವಿವಾಹವನ್ನ ಅಮಾನ್ಯವೆಂದು ಘೋಷಣೆ ಮಾಡಿದೆ. ಮಾತ್ರವಲ್ಲದೇ ಈ ಮದುವೆಯನ್ನ ನೆರವೇರಿಸಿಕೊಟ್ಟ ಪಾದ್ರಿ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದೆ.

ಕಳೆದ ವರ್ಷ ನವೆಂಬರ್​ 9ರಂದು ಸೇಂಟ್​ ಜೋಸೆಫ್​ ಚರ್ಚ್​ನಲ್ಲಿ ಕೊಚ್ಚಿಯ ಮುಸ್ಲಿಂ ವ್ಯಕ್ತಿ ಹಾಗೂ ಇರಿಂಜಲಕುಡಾದ ಕ್ಯಾಥೋಲಿಕ್​ ಮಹಿಳೆ ನಡುವೆ ವಿವಾಹ ನೆರವೇರಿತ್ತು. ಈ ಮದುವೆಗೆ ಮಧ್ಯಪ್ರದೇಶದ ಬಿಷಪ್​ ಮ್ಯಾಥ್ಯೂ ವನಿಯಾಕಿಝಕ್ಕೆಲ್​​ ಭಾಗಿಯಾಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದ ಬಳಿಕ ಈ ವಿವಾಹ ಸಮಾರಂಭ ಮೊದಲ ಬಾರಿಗೆ ವಿವಾದಕ್ಕೆ ಈಡಾಗಿತ್ತು. ಬಿಷಪ್​ಗಳು ಅಂತರ್​ ಧರ್ಮೀಯ ವಿವಾಹ ಸಮಾರಂಭಗಳಲ್ಲಿ ಭಾಗಿಯಾಗುವಂತಿಲ್ಲ.

ಲವ್​ ಜಿಹಾದ್​ ವಿರುದ್ಧ ಹೋರಾಟ ಜೋರಾಗಿರುವ ಬೆನ್ನಲ್ಲೇ ಈ ಮದುವೆಗೆ ಬಿಷಪ್​ ಪಾಲ್ಗೊಂಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಯ್ತು. ಪತ್ರಿಕೆಗಳಲ್ಲೂ ಈ ಮದುವೆ ಸಮಾರಂಭ ಭಾರೀ ಸದ್ದು ಮಾಡಿತ್ತು. ವಧುವಿನ ಕುಟುಂಬಸ್ಥರ ಜೊತೆ ನಿಕಟ ಸಂಬಂಧ ಹೊಂದಿದ್ದಕ್ಕೆ ಬಿಷಪ್​ ಈ ಮದುವೆಯಲ್ಲಿ ಭಾಗಿಯಾಗಿದ್ದರು ಎಂಬ ಕ್ಷಮಾಪಣಾ ಪ್ರಕಟಣೆಯನ್ನೂ ಹೊರಡಿಸಲಾಗಿತ್ತು. ಇದಾದ ಬಳಿಕ ಅಂತರ್​ಧರ್ಮೀಯ ವಿವಾಹದ ಬಗ್ಗೆ ತನಿಖೆ ನಡೆಸಲು ಸಿರೋ ಮಲಬಾರ್ ಚರ್ಚ್ ಆರ್ಚ್ ಬಿಷಪ್​​ ಮಾರ್​ ಜಾರ್ಜ್​ ಅಲೆನ್ಚೆರಿ ಆದೇಶ ಹೊರಡಿಸಿದ್ದರು. ಇದೀಗ ಮೂವರು ಸದಸ್ಯರ ವಿಚಾರಣಾ ಆಯೋಗ ಈ ಆದೇಶ ಹೊರಡಿಸಿದೆ. ಮಾತ್ರವಲ್ಲದೇ ಮದುವೆ ಮಾನ್ಯ ಮಾಡಲು ಕೆಲ ಸಲಹೆಗಳನ್ನೂ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...