alex Certify SHOCKING: ಆರು ವರ್ಷಗಳಲ್ಲಿ ಸಶಸ್ತ್ರಪಡೆಗಳ 800 ಯೋಧರು ಆತ್ಮಹತ್ಯೆಗೆ ಶರಣು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಆರು ವರ್ಷಗಳಲ್ಲಿ ಸಶಸ್ತ್ರಪಡೆಗಳ 800 ಯೋಧರು ಆತ್ಮಹತ್ಯೆಗೆ ಶರಣು

ಸಶಸ್ತ್ರ ಪಡೆಗಳಲ್ಲಿ ಕೆಲಸ ಮಾಡುವ ಯೋಧರಿಗೆ ತಮ್ಮ ಕಾರ್ಯದೊತ್ತಡ ತಗ್ಗಿಸಲು ಇನ್ನಷ್ಟು ಅನುವಾಗುವಂತೆ ಅನೇಕ ಸುಧಾರಣೆಗಳನ್ನು ತರುವ ಕೂಗು ವರ್ಷಗಳಿಂದಲೂ ಕೇಳಿ ಬರುತ್ತಿದೆ.

ಕಳೆದ ಆರು ವರ್ಷಗಳಲ್ಲಿ ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆಯ 800 ರಷ್ಟು ಯೋಧರು ಆತ್ಮಹತ್ಯೆಯಿಂದ ಮೃತಪಟ್ಟಿದ್ದು, 20ರಷ್ಟು ಯೋಧರು ಸಹೋದ್ಯೋಗಿಗಳಿಂದ ಕೊಲ್ಲಲ್ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

12 ಲಕ್ಷಕ್ಕೂ ಅಧಿಕ ಯೋಧರಿರುವ ಭೂಸೇನೆಯಲ್ಲಿ 591 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ವಾಯುಪಡೆಯ 160 ಹಾಗೂ ನೌಕಾಪಡೆಯ 36 ಯೋಧರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರಾಜ್ಯಸಭೆಗೆ ಸಲ್ಲಿಸಿದ ಲಿಖಿತ ಉತ್ತರದಲ್ಲಿ ಕೇಂದ್ರ ರಕ್ಷಣಾ ಖಾತೆಯ ಸಹಾಯಕ ಸಚಿವ ಶ್ರೀಪಾದ್ ನಾಯಕ್ ತಿಳಿಸಿದ್ದಾರೆ.

’ಜನತಾ ಕರ್ಫ್ಯೂಗೆ’ ವರ್ಷ: ಚಪ್ಪಾಳೆ, ತಟ್ಟೆ-ಜಾಗಟೆಗಳ ಭರಾಟೆ ನೆನೆದು ನಗೆಗಡಲಲ್ಲಿ ತೇಲಿದ ನೆಟ್ಟಿಗ ಸಮುದಾಯ

“ತುಕಡಿಗಳಲ್ಲಿ ಒತ್ತಡ ನಿರ್ವಹಣೆಗೆಂದು ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮನಃಶಾಸ್ತ್ರಜ್ಞರ ನಿಯೋಜನೆ, ಆಹಾರ ಹಾಗೂ ವಸ್ತ್ರಗಳ ಗುಣಮಟ್ಟದಲ್ಲಿ ಸುಧಾರಣೆ, ಒತ್ತಡ ನಿರ್ವಹಣೆಗೆ ತರಬೇತಿ, ಮನರಂಜನೆಗೆ ಉತ್ತೇಜನ, ರಜೆಗಳ ಸಮರ್ಪಕ ಲಭ್ಯತೆ, ಗಡಿಗಳಿಂದ ತುಕಡಿಗಳ ರವಾನೆ ಸಲೀಸು ಮಾಡಲು ಕ್ರಮಗಳು ಹಾಗೂ ತೋಂದರೆಗಳನ್ನು ಆಲಿಸಲು ಇನ್ನಷ್ಟು ಸೌಲಭ್ಯ ಸೇರಿದಂತೆ ಅನೇಕ ವ್ಯವಸ್ಥೆಗಳನ್ನು ತೆಗೆದುಕೊಳ್ಳಲಾಗುತ್ತಿದೆ,” ಎಂದ ನಾಯಕ್, “ಸೇನೆಯು ತನ್ನ ಸಿಬ್ಬಂದಿಯ ಒತ್ತಡ ನಿರ್ವಹಣೆಗೆಂದು ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಒತ್ತಡ ನಿರ್ವಹಣೆಯ ವಿಚಾರವನ್ನು ಕಮಾಂಡರ್‌ಗಳ ಮಟ್ಟದಲ್ಲಿ ಅನೇಕ ಹಂತಗಳಲ್ಲಿ ಪರಿಹರಿಸಲು ನೋಡಲಾಗುತ್ತಿದೆ ” ಎಂದಿದ್ದಾರೆ.

ದೂರದ ಗಡಿಭಾಗಗಳಲ್ಲಿ ಕೆಲಸ ಮಾಡುವ ಯೋಧರಿಗೆ ತಮ್ಮ ಕುಟುಂಬದ ಅಗತ್ಯತೆಗಳನ್ನು ಪೂರೈಸದೇ ಇರುವ ಒತ್ತಡಗಳು ಹೆಚ್ಚಿದ್ದು, ಆರ್ಥಿಕ, ಕೌಟುಂಬಿಕ ಹಾಗೂ ಸಮಾಜ ವಿರೋಧಿ ಶಕ್ತಿಗಳಿಂದ ಕಿರುಕುಳ ಸೇರಿದಂತೆ ನಾನಾ ವಿಧದ ಹಿಂಸೆಗಳನ್ನು ಒಳಗೊಳಗೆ ಅನುಭವಿಸಿಕೊಂಡೇ ಕೆಲಸದಲ್ಲಿ ಇರುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...