alex Certify ISC ಪರೀಕ್ಷೆಯಲ್ಲಿ ಶೇ.98 ಅಂಕ ಪಡೆದ ಅಖಿಲೇಶ್ ಯಾದವ್ ಪುತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ISC ಪರೀಕ್ಷೆಯಲ್ಲಿ ಶೇ.98 ಅಂಕ ಪಡೆದ ಅಖಿಲೇಶ್ ಯಾದವ್ ಪುತ್ರಿ

Akhilesh Yadav's Daughter Aditi Scores 98% in ISC Exams and SP ...

ಲಖನೌ: ಉತ್ತರ ಪ್ರದೇಶದ ಐಎಸ್ಸಿ ಬೋರ್ಡ್ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ.‌
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪುತ್ರಿ ಅದಿತಿ ಅಖಿಲೇಶ್ ಪರೀಕ್ಷೆಯಲ್ಲಿ ಶೇ.98 ರಷ್ಟು ಅಂಕ ಪಡೆದಿದ್ದಾರೆ.‌

ಅಖಿಲೇಶ್ ಯಾದವ್ ಟ್ವೀಟ್ ಮಾಡಿ, ತಮ್ಮ ಮಗಳಿಗೆ ಶುಭ ಕೋರಿದ್ದಾರೆ‌. ಅಲ್ಲದೆ, ಬೋರ್ಡ್ ಎಕ್ಸಾಂ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಕೋರಿದ್ದು, ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದ್ದಾರೆ. ತಮ್ಮ ಪತ್ನಿ ಮತ್ತು ಮಗಳ ಜತೆ ತೆರಳುತ್ತಿರುವ ಫೋಟೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ.

ಅಖಿಲೇಶ್ ದಂಪತಿಗೆ ಅದಿತಿ, ಟಿನಾ ಎಂಬ ಇಬ್ಬರು ಹೆಣ್ಣು ಮಕ್ಕಳು ಅರ್ಜುನ್ ಎಂಬ ಮಗ ಇದ್ದಾರೆ. 10 ನೇ ತರಗತಿ ಹಾಗೂ 12 ನೇ ತರಗತಿ (ಐಎಸ್ಸಿ) ಫಲಿತಾಂಶವನ್ನು ಬೋರ್ಡ್ ಶುಕ್ರವಾರ ಪ್ರಕಟಿಸಿದೆ. ಕೊರೊನಾ ಲಾಕ್‌ಡೌನ್ ಕಾರಣದಿಂದ ಪರೀಕ್ಷೆಗಳು ರದ್ದಾಗಿದ್ದರಿಂದ ಫಲಿತಾಂಶ ಪ್ರಕಟಕ್ಕೆ ಹೊಸ ನಿಯಮಾವಳಿಯನ್ನು ಕಳೆದ ವಾರ ಪ್ರಕಟಿಸಿತ್ತು.

ಬೋರ್ಡ್ ನಡೆಸಿರುವ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ಮೂರು ವಿಷಯಗಳನ್ನು ಆಯ್ದು, ಆಂತರಿಕ ಮೌಲ್ಯಮಾಪನದ ಹಾಗೂ ಪ್ರಾಯೋಗಿಕ ಪರೀಕ್ಷೆಗಳ ಅಂಕ ಸೇರಿಸಿ ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಿತ್ತು. ಬೋರ್ಡ್ ಈ ಬಾರಿ ಟಾಪರ್ ಗಳ ಲಿಸ್ಟ್ ಪ್ರಕಟಿಸಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...