alex Certify 2ನೇ ಮದುವೆ ವಿರೋಧಿಸಿದ್ದಕ್ಕೆ ವಿದ್ಯುತ್ ಕಂಬವನ್ನೇರಿದ ವೃದ್ಧ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2ನೇ ಮದುವೆ ವಿರೋಧಿಸಿದ್ದಕ್ಕೆ ವಿದ್ಯುತ್ ಕಂಬವನ್ನೇರಿದ ವೃದ್ಧ…!

ಎರಡನೇ ಮದುವೆಗಾಗಿ ಮನೆಯವರನ್ನ ಒಪ್ಪಿಸಬೇಕು ಅಂತಾ ಸೋಬ್ರನ್​ ಸಿಂಗ್​ ಎಂಬ ವೃದ್ಧ ಎಲೆಕ್ಟ್ರಿಕ್​ ಕಂಬವನ್ನೇರಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಮಾಧಾ ಭಾವ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸಿಂಗ್​ ಎಲೆಕ್ಟ್ರಿಕ್ ಕಂಬವನ್ನೇರುತ್ತಿದ್ದಂತೆಯೇ ಪೊಲೀಸರು, ಮಕ್ಕಳು ಹಾಗೂ ಮೊಮ್ಮಕ್ಕಳು ಆತಂಕಕ್ಕೆ ಈಡಾಗಿದ್ದಾರೆ. ಎಲೆಕ್ಟ್ರಿಕ್ ಕಂಬದ ಕೆಳಗೆ ಜನಸಂದಣಿಯೇ ಸೇರಿದೆ. ಎಲ್ಲರೂ ಸಿಂಗ್​ರನ್ನ ಕೆಳಗಿಳಿಯುವಂತೆ ಮನವಿ ಮಾಡಿದರೂ ಸಹ ಸಿಂಗ್​​ ನಿರಾಕರಿಸಿದ್ದಾನೆ.

ಎರಡನೇ ಮದುವೆಯಾಗಲು ಒಪ್ಪಿಗೆ ನೀಡದೇ ಹೋದಲ್ಲಿ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಸಿಂಗ್​ ಮಕ್ಕಳ ಎದುರು ಬೆದರಿಕೆ ಒಡ್ಡಿದ್ದಾರೆ. ಆದರೆ ಆ ಸಮಯದಲ್ಲಿ ಹೈ ಟೆನ್ಶನ್​ ವೈರ್​ನಲ್ಲಿ ವಿದ್ಯುತ್​ ಪ್ರವಾಹವಾಗುತ್ತಿರಲಿಲ್ಲ. ಸಿಂಗ್​ ಕುಟಂಬಸ್ಥರು ಪೊಲೀಸ್​ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದರಿಂದ ವಿದ್ಯುತ್​ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು.

ಒಂದು ಗಂಟೆಯ ಬಳಿಕ, ಸ್ಥಳೀಯ ಯುವಕನೊಬ್ಬ ಕಂಬವನ್ನೇರಿ ವೃದ್ಧನಿಗೆ ಸಮಾಧಾನ ಮಾಡಿ ಆತನನ್ನ ಕೆಳಗೆ ಇಳಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾನೆ. ಯಾರನ್ನ ಮದುವೆಯಾಗೋಕೆ ಬಯಸಿದ್ದೀಯಾ ಎಂದು ಕೇಳಿದ್ರೆ…..ನನ್ನನ್ನ ಯಾರ ಜೊತೆ ಬೇಕಿದ್ದರೂ ಮದುವೆ ಮಾಡಿ. ಆದರೆ ನನಗೊಂದು ಜೀವನ ಸಂಗಾತಿ ಅವಶ್ಯಕತೆ ಇದೆ ಎಂದು ಸಿಂಗ್​ ಹೇಳಿದ್ದಾರೆ.

4 ವರ್ಷಗಳ ಹಿಂದೆ ಸಿಂಗ್​ ಪತ್ನಿ ಮೃತಪಟ್ಟಿದ್ದರು. ಇದಾದ ಬಳಿ ಸಿಂಗ್ ಮದುವೆಯಾಗಲು ಇಚ್ಛಿಸಿದ್ದರೂ ಸಹ ಮಕ್ಕಳು ಇದಕ್ಕೆ ವಿರೋಧ ಹೇರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...