alex Certify 2ಜಿ, 3ಜಿ, 4ಜಿ ಮೂಲಕ ಪ್ರತಿಪಕ್ಷಗಳಿಗೆ ಅಮಿತ್ ಶಾ ಲೇವಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2ಜಿ, 3ಜಿ, 4ಜಿ ಮೂಲಕ ಪ್ರತಿಪಕ್ಷಗಳಿಗೆ ಅಮಿತ್ ಶಾ ಲೇವಡಿ

2G, 3G, 4G': Amit Shah Makes Sarcastic Remark on Congress, DMK at Puducherry Rally

ಕಾಂಗ್ರೆಸ್‌ ಹಾಗೂ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ತಮಿಳುನಾಡು ರಾಜಕೀಯದ ಬಹುತೇಕ ಪಕ್ಷಗಳ ನಾಯಕರು ಅನೇಕ ಹಗರಣಗಳಲ್ಲಿ ಸಿಲುಕಿ ಹೆಸರು ಮಾಡಿದ್ದಾರೆ ಎಂದು ಅಣಕವಾಡಿದ್ದಾರೆ.

ಪುದುಚೆರಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, “2ಜಿ ಎಂದರೆ ಮಾರನ್ ಕುಟುಂಬದ ಎರಡು ತಲೆಮಾರುಗಳು ಎಂದರ್ಥ, 3ಜಿ ಎಂದರೆ ಕರುಣಾನಿಧಿ ಕುಟುಂಬದ ಮೂರು ತಲೆಮಾರುಗಳು ಎಂದರ್ಥ ಹಾಗೂ 4ಜಿ ಗಾಂಧಿ ಕುಟುಂಬದ ನಾಲ್ಕು ತಲೆಮಾರುಗಳು ಎಂದರ್ಥ” ಎಂದು 2ಜಿ ಹಗರಣದಲ್ಲಿ ಸಿಲುಕಿದ್ದ ಕಾಂಗ್ರೆಸ್ ಹಾಗೂ ಡಿಎಂಕೆ ಪಕ್ಷದ ನಾಯಕರನ್ನು ಅಣಕ ಮಾಡಿದ್ದಾರೆ.

ನಾನು ಕಾಂಗ್ರೆಸ್ ಪಕ್ಷದಲ್ಲಿ ಉಳಿವುದನ್ನು ಕಾಲವೇ ನಿರ್ಧರಿಸಲಿದೆ: ಸಿ.ಎಂ. ಇಬ್ರಾಹಿಂ

“ಸ್ಟಾಲಿನ್‌ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದನ್ನು ನೋಡಿದಾಗ ನನಗೆ ನಗು ಬರುತ್ತೆ. 2ಜಿ ಹಗರಣ ಮಾಡಿದ್ದು ಯಾರು..? 12 ಲಕ್ಷ ಕೋಟಿ ರೂ. ಮೌಲ್ಯದ ಹಗರಣದಲ್ಲಿ ಕಾಂಗ್ರೆಸ್ ಭಾಗಿಯಾಗಿತ್ತು, ಆ ವೇಳೆ ಡಿಎಂಕೆ ಅದರ ಪಾಲುದಾರನಾಗಿತ್ತು” ಎಂದು ಅಮಿತ್‌ ಶಾ ಲೇವಡಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...