alex Certify ‌ʼಕೊರೊನಾʼ ಆತಂಕದ ಮಧ್ಯೆಯೂ ಇಲ್ಲಿದೆ ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಕೊರೊನಾʼ ಆತಂಕದ ಮಧ್ಯೆಯೂ ಇಲ್ಲಿದೆ ಗುಡ್‌ ನ್ಯೂಸ್

Technical guidance

ದೇಶದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ 78.14 ಲಕ್ಷ ಮುಟ್ಟಿದೆ. ಇದೇ ವೇಳೆ ಸಮಾಧಾನ ತರುವ ಸುದ್ದಿಯೊಂದರಲ್ಲಿ, 70.16 ಲಕ್ಷ ಸೋಂಕಿತರು ಚೇತರಿಕೆ ಕಂಡಿದ್ದಾರೆ ಎಂದು ತಿಳಿದುಬಂದಿದೆ.

ಶುಕ್ರವಾರದಂದು 53,470 ಕೋವಿಡ್-19 ಪಾಸಿಟಿವ್ ಕೇಸುಗಳು ದಾಖಲಾಗಿವೆ. ಕೋವಿಡ್-19 ಸೋಂಕಿತರ ಪೈಕಿ ಶೇ.89.78 ಮಂದಿ ಚೇತರಿಸಿಕೊಂಡಿದ್ದಾರೆ. ಸೋಂಕಿನಿಂದ 1,17,956 ಮಂದಿ ಮೃತಪಟ್ಟಿದ್ದಾರೆ.

ಕೋವಿಡ್-19 ಸೋಂಕಿನಿಂದ ಮರಣದ ಸಾಧ್ಯತೆಯು 1.51 ಪ್ರತಿಶತಕ್ಕೆ ಇಳಿದಿರುವುದು ಮತ್ತೊಂದು ನಿಟ್ಟುಸಿರಿನ ವಿಚಾರವಾಗಿದೆ. ಸದ್ಯ 6,80,680 ಸಕ್ರಿಯ ಕೋವಿಡ್-19 ಪ್ರಕರಣಗಳು ದೇಶದಲ್ಲಿ ಇವೆ ಎನ್ನಲಾಗಿದೆ.

ಅಕ್ಟೋಬರ್‌ 23ರವರೆಗೂ ಒಟ್ಟಾರೆ 10,13,82,564 ಸ್ಯಾಂಪಲ್‌ಗಳನ್ನು ಪರೀಕ್ಷೆ ಮಾಡಲಾಗಿದ್ದು, ಶುಕ್ರವಾರ ಒಂದೇ ದಿನ 12,69,479 ಮಾದರಿಗಳ ಪರೀಕ್ಷೆ ನಡೆದಿದೆ ಎಂದು ICMR ತಿಳಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...