alex Certify ಮದುವೆಯಾದ ಎರಡೇ ತಿಂಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದೆ ಬಾಲಿವುಡ್‌ ನ ಈ ಸ್ಟಾರ್‌ ಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ಎರಡೇ ತಿಂಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದೆ ಬಾಲಿವುಡ್‌ ನ ಈ ಸ್ಟಾರ್‌ ಜೋಡಿ

ಆಲಿಯಾ ಭಟ್‌ ಹಾಗೂ ರಣಬೀರ್‌ ಕಪೂರ್‌ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಎರಡು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಈ ಜೋಡಿಗೆ ಈಗ ಪ್ರಮೋಷನ್‌ ಸಿಗ್ತಾ ಇದೆ. ಆಲಿಯಾ ಭಟ್‌ ಗರ್ಭಿಣಿಯಾಗಿದ್ದು, ಅಮ್ಮನಾಗಿ ಬಡ್ತಿ ಪಡೆಯುತ್ತಿದ್ದಾರೆ.

ಖುದ್ದು ಆಲಿಯಾ ತಮ್ಮ ಪ್ರೆಗ್ನೆನ್ಸಿ ಸ್ಕ್ಯಾನಿಂಗ್‌ ಫೋಟೋವನ್ನು ಇನ್‌ಸ್ಟಾಗ್ರಾಮ್ನಲ್ಲಿ ಅಪ್ಲೋಡ್‌ ಮಾಡಿದ್ದಾರೆ. ತಾವು ತಾಯಿಯಾಗ್ತಿರೋದಾಗಿ ಘೋಷಿಸಿದ್ದಾರೆ. ಈ ಫೋಟೋದಲ್ಲಿ ಪಕ್ಕದಲ್ಲೇ ರಣಬೀರ್‌ ಕಪೂರ್‌ ಕೂಡ ಕುಳಿತುಕೊಂಡಿರೋದನ್ನು ನೀವು ನೋಡಬಹುದು.

ಇಬ್ಬರೂ ಸ್ಕ್ರೀನ್‌ನಲ್ಲಿ ಸ್ಕ್ಯಾನಿಂಗ್‌ ದೃಶ್ಯಗಳನ್ನು ಖುಷಿಯಿಂದ ವೀಕ್ಷಿಸುತ್ತಿದ್ದಾರೆ.

ಎರಡು ತಿಂಗಳ ಹಿಂದೆ, ಅಂದರೆ ಏಪ್ರಿಲ್ 14 ರಂದು ಆಲಿಯಾ ಮತ್ತು ರಣಬೀರ್ ಮದುವೆಯಾಗಿದ್ದರು. ಅದ್ಧೂರಿ ಮದುವೆಯ ಫೋಟೋಗಳು ಸಾಕಷ್ಟು ವೈರಲ್‌ ಆಗಿದ್ದವು. ಅಭಿಮಾನಿಗಳು ಮದುವೆ ಖುಷಿಯಿಂದ ಹೊರಬರುವಷ್ಟರಲ್ಲಿ ಮತ್ತೊಂದು ಹೊಸ ಸುದ್ದಿಯನ್ನು ಈ ಜೋಡಿ ನೀಡಿದೆ.

ಇವರಿಬ್ಬರ ಪ್ರೇಮಕಥೆ ಶುರುವಾಗಿದ್ದು ‘ಬ್ರಹ್ಮಾಸ್ತ್ರ’ ಚಿತ್ರದ ಸೆಟ್‌ನಿಂದ. ಸಾಕಷ್ಟು ಸಮಯ ಡೇಟಿಂಗ್‌ ಮಾಡಿದ್ದ ಇವರು, ಕೊನೆಗೂ ಸಪ್ತಪದಿ ತುಳಿದಿದ್ದರು. ಮದುವೆ ಬೆನ್ನಲ್ಲೇ ತಂದೆ ತಾಯಿಯಾಗಿ ಪ್ರಮೋಟ್‌ ಆಗ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...