alex Certify ಬೆಚ್ಚಿಬೀಳಿಸುವಂತಿದೆ ರಾಜ್ಯದಲ್ಲಿ ‘ಕೊರೊನಾ’ದಿಂದ ಸಾವನ್ನಪ್ಪುತ್ತಿರುವವರ ಪ್ರಮಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ರಾಜ್ಯದಲ್ಲಿ ‘ಕೊರೊನಾ’ದಿಂದ ಸಾವನ್ನಪ್ಪುತ್ತಿರುವವರ ಪ್ರಮಾಣ

ಮಹಾಮಾರಿ ಕೊರೊನಾ ದೇಶದಲ್ಲಿ ಆರ್ಭಟ ನಡೆಸುತ್ತಿದ್ದು ರಾಜ್ಯದಲ್ಲೂ ರಣಕೇಕೆ ಹಾಕುತ್ತಿದೆ. ಗಾಬರಿ ಹುಟ್ಟಿಸುವ ರೀತಿಯಲ್ಲಿ ಕೊರೊನಾ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಸಾವಿನ ಪ್ರಮಾಣವೂ ಹೆಚ್ಚಾಗತೊಡಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನ ಸೋಂಕಿತರ ಸಂಖ್ಯೆ ಆತಂಕ ಸೃಷ್ಟಿಸಿದೆ.

ರಾಜ್ಯದಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 10,94,912 ಕ್ಕೆ ತಲುಪಿದ್ದು, ಮೃತಪಟ್ಟವರ ಸಂಖ್ಯೆ 13,046 ಮುಟ್ಟಿದೆ. ಪ್ರಸ್ತುತ 85,480 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 506 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಸ್ಕ್​ ಧರಿಸದ ಪೊಲೀಸ್​ ಸಿಬ್ಬಂದಿಗೆ ಬಿತ್ತು ‌ʼಫೈನ್ʼ

ಕಳೆದ ಒಂದು ವಾರದಲ್ಲಿ ಆತಂಕ ಹುಟ್ಟಿಸುವ ರೀತಿ ಸಾವಿನ ಪ್ರಮಾಣ ಆಗಿದ್ದು, ಏಪ್ರಿಲ್ 6ರಂದು ರಾಜ್ಯದಲ್ಲಿ 39 ಮಂದಿ ಸಾವನ್ನಪ್ಪಿದ್ದರೆ ಏಪ್ರಿಲ್ 7ರಂದು 35, ಏಪ್ರಿಲ್ 8ರಂದು 36, ಏಪ್ರಿಲ್ 9ರಂದು 46, ಏಪ್ರಿಲ್ 10ರಂದು 36, ಏಪ್ರಿಲ್ 11ರಂದು 40, ಏಪ್ರಿಲ್ 12ರಂದು 52, ಏಪ್ರಿಲ್ 13ರಂದು 67 ಹಾಗೂ ಏಪ್ರಿಲ್ 14ರಂದು 38 ಮಂದಿ ಸಾವನ್ನಪ್ಪಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...