alex Certify ಫೇಸ್ಬುಕ್ ನಲ್ಲಿ ಸದಾ ಸಕ್ರಿಯವಾಗಿರುವವರು ಇದನ್ನು ಓದ್ಲೇ ಬೇಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೇಸ್ಬುಕ್ ನಲ್ಲಿ ಸದಾ ಸಕ್ರಿಯವಾಗಿರುವವರು ಇದನ್ನು ಓದ್ಲೇ ಬೇಕು

ಫೇಸ್ಬುಕ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಲಾಕ್ ಡೌನ್ ನಂತ್ರ ಜನರು ಹೆಚ್ಚಿನ ಸಮಯವನ್ನು ಫೇಸ್ಬುಕ್ ನಲ್ಲಿ ಕಳೆಯುತ್ತಿದ್ದಾರೆ. ನೀವೂ ಫೇಸ್ಬುಕ್ ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರೆ ಅಪಾಯ ಆಹ್ವಾನಿಸಿಕೊಳ್ಳುತ್ತಿದ್ದೀರಿ ಎಂದರ್ಥ. ಫೇಸ್ಬುಕ್ ಅತಿಯಾದ ಬಳಕೆ ಅನಾರೋಗ್ಯಕ್ಕೆ ಕಾರಣವಾಗ್ತಿದೆ. ಫೇಸ್ಬುಕ್ ಬಳಕೆದಾರನಲ್ಲಿ ಅತೃಪ್ತಿ ಹೆಚ್ಚು ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಈ ಬಗ್ಗೆ ಅಧ್ಯಯನ ನಡೆಸಿದೆ. ಅಧ್ಯಯನದಲ್ಲಿ  ಜನರು 50 ನಿಮಿಷಕ್ಕೂ ಹೆಚ್ಚು ಸಮಯ ಫೇಸ್ಬುಕ್ ನಲ್ಲಿ ಕಳೆಯುತ್ತಾರೆಂಬುದು ಗೊತ್ತಾಗಿದೆ. ಅಧ್ಯಯನದ ಫಲಿತಾಂಶಗಳ ಪ್ರಕಾರ, ಫೇಸ್‌ಬುಕ್ ಯೋಗ ಕ್ಷೇಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಮಯ ಕಳೆಯುವುದರಿಂದ, ಅಹಿತಕರ ಭೀತಿ ಶುರುವಾಗುತ್ತದೆ.

ಫೇಸ್ಬುಕ್‌ನಲ್ಲಿ ಇತರರ ಪೋಸ್ಟ್ ಗಳನ್ನು ನಿರಂತರವಾಗಿ ಇಷ್ಟಪಡುವುದು, ಅಲ್ಲಿನ ವೈರಲ್ ಪೋಸ್ಟ್ ಗಳ ಲಿಂಕ್‌ ಮೇಲೆ ಕ್ಲಿಕ್ ಮಾಡುವುದರಿಂದ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ ಕ್ಷೀಣಿಸುತ್ತದೆ. ಅಸಮಾಧಾನದ ಭಾವನೆ ಹೆಚ್ಚಾಗುತ್ತದೆ. ಫೇಸ್‌ಬುಕ್‌ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಒಳ್ಳೆ ಹವ್ಯಾಸ, ನೆಮ್ಮದಿ ಕಡಿಮೆಯಾಗುತ್ತದೆ ಎಂದು ಅಧ್ಯಯನವು ಕಂಡು ಹಿಡಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...