alex Certify ತಮಿಳುನಾಡಿನಲ್ಲಿ ಅಂಬುಲೆನ್ಸ್ ಓಡಿಸ್ತಿದ್ದಾಳೆ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮಿಳುನಾಡಿನಲ್ಲಿ ಅಂಬುಲೆನ್ಸ್ ಓಡಿಸ್ತಿದ್ದಾಳೆ ಮಹಿಳೆ

ಕೊರೊನಾ ಸಮಯದಲ್ಲಿ ಆಂಬ್ಯುಲೆನ್ಸ್ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಸೂಕ್ತ ಸಮಯದಲ್ಲಿ ಆಂಬ್ಯುಲೆನ್ಸ್ ಸಿಗ್ತಿಲ್ಲ ಎಂಬ ಆರೋಪಗಳು ಕೇಳಿ ಬರ್ತಿವೆ. ಈ ಎಲ್ಲದರ ಮಧ್ಯೆ ತಮಿಳುನಾಡಿನಲ್ಲಿ ಖುಷಿ ಘಟನೆ ನಡೆದಿದೆ.

ತಮಿಳುನಾಡಿನಲ್ಲಿ ಮಹಿಳೆಯೊಬ್ಬರು ಆಂಬ್ಯುಲೆನ್ಸ್ ಚಾಲನೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ದೇಶದಲ್ಲಿ ಮೊದಲ ಬಾರಿ ಮಹಿಳೆ ಆಂಬ್ಯುಲೆನ್ಸ್ ಚಾಲಕಿಯಾಗಿದ್ದಾಳೆಂದು ತಮಿಳುನಾಡು ಸರ್ಕಾರ ಹೇಳಿದೆ.

ಎಂ. ವೀರಲಕ್ಷ್ಮಿ ಎಂಬುವವರು 108 ಆಂಬ್ಯುಲೆನ್ಸ್ ಚಾಲಕಿಯಾಗಿದ್ದಾರೆಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ತಮಿಳುನಾಡಿನಲ್ಲಿ  ಆಂಬ್ಯುಲೆನ್ಸ್ ಸೌಲಭ್ಯವನ್ನು ಹೆಚ್ಚಿಸಲಾಗಿದೆ. 108 ತುರ್ತು ಸೇವೆ ಬಲಪಡಿಸಲು 125 ಕೋಟಿ ವೆಚ್ಚದಲ್ಲಿ 500 ಹೊಸ ಆಂಬ್ಯುಲೆನ್ಸ್ ಖರೀದಿ ಮಾಡುವುದಾಗಿ ಮಾರ್ಚ್ 24ರಂದೇ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದರು. ಇದ್ರ ಅಡಿ ಆರಂಭದಲ್ಲಿ 90 ಆಂಬ್ಯುಲೆನ್ಸ್ ಹಾಗೂ 10 ರಕ್ತ ಸಂಗ್ರಹ ವಾಹನವನ್ನು ವೈದ್ಯಕೀಯ ಸೇವೆಗೆ ನೀಡಲಾಗಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...