alex Certify ಕಾರು ಹೊಂದಿರುವವರಿಗೊಂದು ಮಹತ್ವದ ಸುದ್ದಿ: ಮುಂಭಾಗದ ಎರಡೂ ಸೀಟ್‌ ಗಳಿಗೆ ‌ʼಏರ್‌ ಬ್ಯಾಗ್ʼ‌ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರು ಹೊಂದಿರುವವರಿಗೊಂದು ಮಹತ್ವದ ಸುದ್ದಿ: ಮುಂಭಾಗದ ಎರಡೂ ಸೀಟ್‌ ಗಳಿಗೆ ‌ʼಏರ್‌ ಬ್ಯಾಗ್ʼ‌ ಕಡ್ಡಾಯ

ಭಾರತದ ಆಟೋ ಮೊಬೈಲ್​ ಕ್ಷೇತ್ರದಲ್ಲಿ ದಿನಕ್ಕೊಂದು ಉತ್ಪನ್ನಗಳು ಮಾರುಕಟ್ಟೆಗೆ ಪ್ರವೇಶಿಸುತ್ತಲೇ ಇರುತ್ತದೆ. ಗ್ರಾಹಕರನ್ನ ಸೆಳೆಯುವ ವಿಭಿನ್ನ ವಿನ್ಯಾಸದ ಡಿಸೈನ್​ ಹಾಗೂ ಅದ್ಭುತ ಕಾರ್ಯಕ್ಷಮತೆಯನ್ನ ಇಂಜಿನ್​ಗಳನ್ನ ತಯಾರಿಸುವಲ್ಲಿ ಆಟೋ ಮೊಬೈಲ್​ ಕಂಪನಿಗಳು ಇನ್ನಿಲ್ಲದ ಹರಸಾಹಸ ಪಡುತ್ತವೆ.

ಆದರೆ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಗ್ರಾಹಕರ ಸುರಕ್ಷತೆಯ ಕಡೆಗೆ ಗಮನ ಕೊಡುವಲ್ಲಿ ಆಟೊ ಮೊಬೈಲ್​ ಕಂಪನಿಗಳು ಕೊಂಚ ಹಿಂದೆ ಉಳಿದುಬಿಡುತ್ತವೆ.
ಕೇಂದ್ರ ರಸ್ತೆ ಸಾರಿಗೆ & ಹೆದ್ದಾರಿ ಸಚಿವಾಲಯ ದೇಶದಲ್ಲಿ ಮುಂಭಾಗದ ಪಕ್ಕದ ಸೀಟಿಗೂ ಏರ್​ ಬ್ಯಾಗ್​ಗಳನ್ನ ಕಡ್ಡಾಯಗೊಳಿಸಬೇಕು ಎಂಬ ಪ್ರಸ್ತಾವನೆಯನ್ನ ಈ ಹಿಂದೆಯೇ ಸಲ್ಲಿಸಿದೆ.

ಇದೀಗ ಕಾನೂನು ಸಚಿವಾಲಯ ಈ ಪ್ರಸ್ತಾವನೆಯನ್ನ ಅಂಗೀಕರಿಸಿದ್ದು, ಮುಂಭಾಗದ ಎರಡೂ ಸೀಟಿಗೆ ಏರ್​ ಬ್ಯಾಗ್​ ಅಳವಡಿಕೆ ನಿಯಮಕ್ಕೆ ಗ್ರೀನ್​ ಸಿಗ್ನಲ್​ ನೀಡಿದೆ. ಪ್ರಸ್ತುತ ದೇಶದಲ್ಲಿ ಕೇವಲ ಚಾಲಕರ ಸೀಟಿಗೆ ಮಾತ್ರ ಏರ್​ಬ್ಯಾಗ್​ ಕಡ್ಡಾಯವಾಗಿ ಇರಬೇಕು ಎಂದಿದೆ.

ರಸ್ತೆ ಅಪಘಾತಗಳು ಕಡಿಮೆಯಾಗಬೇಕು ಅಂದರೆ ಪ್ರಯಾಣಿಕರ ಸುರಕ್ಷತೆಯ ಕಡೆಗೆ ಗಮನಹರಿಸಲೇಬೇಕು. ಈ ಏರ್​ಬ್ಯಾಗ್​ಗಳು ಅದೆಷ್ಟೋ ಸಾವುಗಳನ್ನ ತಡೆಯುವಲ್ಲಿ ಯಶಸ್ವಿಯಾಗಿದೆ ಅನ್ನೋ ಮಾತನ್ನ ತಳ್ಳಿ ಹಾಕುವಂತಿಲ್ಲ. ದೇಶದಲ್ಲಿ ಏಪ್ರಿಲ್​ 1ರಿಂದ ಏರ್​​ಬ್ಯಾಗ್​ಗಳು ಕಡ್ಡಾಯವಾಗಲಿವೆ. ಇನ್ನು ಮೂರು ದಿನಗಳಲ್ಲಿ ಏರ್​ಬ್ಯಾಗ್​ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಪ್ರಕಟಣೆ ಹೊರಡಿಸಲಿದೆ.

ಈಗಾಗಲೇ ಕಾರನ್ನ ಹೊಂದಿರುವವರಿಗೆ ಪಕ್ಕದ ಸೀಟಿಗೂ ಏರ್​ ಬ್ಯಾಗ್​ ಅಳವಡಿಸಲು ಆಗಸ್ಟ್​ 31ರವರೆಗೆ ಸಮಯಾವಕಾಶವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...