alex Certify ಒಂದು ತಿಂಗಳ ಮಗುವನ್ನು ಕಚ್ಚೊಯ್ದ ನಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ತಿಂಗಳ ಮಗುವನ್ನು ಕಚ್ಚೊಯ್ದ ನಾಯಿ

ಕಾನ್ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ.ಒಂದು ತಿಂಗಳ ಮಗು ಬೀದಿ ನಾಯಿಗೆ ಬಲಿಯಾಗಿದೆ. ಮನೆಯಲ್ಲಿ ಮಲಗಿದ್ದ ಮಗುವನ್ನು ನಾಯಿ ಹೊತ್ತೊಯ್ದಿದೆ. ಘಟನೆ ನಡೆದ ಒಂದು ಗಂಟೆ ನಂತ್ರ ಮಗುವಿನ ಶವ ಸಿಕ್ಕಿದೆ.

ನೀರಜ್ ಎಂಬಾತ ಕಾರ್ಖಾನೆಯೊಂದರ ಕ್ಲೀನಿಂಗ್ ಕೆಲಸ ಮಾಡ್ತಾನೆ. ಒಂದು ತಿಂಗಳ ಹಿಂದೆ ಆತನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಒಂದು ತಿಂಗಳಾದ ಕಾರಣ ಮನೆಯಲ್ಲಿ ಪೂಜೆ ಕಾರ್ಯಕ್ರಮ ನಡೆಯಬೇಕಿತ್ತು. ಬೆಳಿಗ್ಗೆ ಮಗುವಿಗೆ ಸ್ನಾನ ಮಾಡಿಸಿ ಹಾಸಿಗೆ ಮೇಲೆ ಮಲಗಿಸಿ ತಾಯಿ ಸ್ನಾನಕ್ಕೆ ಹೋಗಿದ್ದಳಂತೆ.

ಆದ್ರೆ ಸ್ನಾನದಿಂದ ಹೊರ ಬರುವ ವೇಳೆಗೆ ಮಗುವನ್ನು ನಾಯಿ ಕಚ್ಚಿಕೊಂಡು ಹೋಗ್ತಿರುವುದು ಕಾಣಿಸಿದೆ. ಕೂಗ್ತಾ ನಾಯಿ ಬೆನ್ನು ಹತ್ತಿದ್ದಾಳೆ. ಆದ್ರೆ ನಾಯಿ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ಸುತ್ತಮುತ್ತಲ ಜನರು ನಾಯಿಗಾಗಿ ಹುಡುಕಾಟ ನಡೆಸಿದ್ದಾರೆ. ಆದ್ರೆ ನಾಯಿ ಬದಲು ಮಗುವಿನ ಶವ ಸಿಕ್ಕಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...