alex Certify ಆನ್ಲೈನ್ ಲುಡೋದಲ್ಲಿ ಪತ್ನಿಯಿಂದ ಸೋತ ಪತಿ ಮಾಡಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ಲೈನ್ ಲುಡೋದಲ್ಲಿ ಪತ್ನಿಯಿಂದ ಸೋತ ಪತಿ ಮಾಡಿದ್ದೇನು…?

ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಟೈಂ ಪಾಸ್ ಮಾಡಲು ಜನರು ಆನ್ಲೈನ್ ಗೇಮ್ ಮೊರೆ ಹೋಗಿದ್ದಾರೆ. ಆನ್ಲೈನ್ ಲುಡೋ ಆಡ್ತಿದ್ದ ಮಹಿಳೆಯೊಬ್ಬಳು ಆಸ್ಪತ್ರೆ ಸೇರುವಂತಾಗಿದೆ. ಘಟನೆ ವಡೋದರಾದಲ್ಲಿ ನಡೆದಿದೆ.

ಲಾಕ್ ಡೌನ್ ಹಿನ್ನಲೆಯಲ್ಲಿ ಪತಿ-ಪತ್ನಿ ಆನ್ಲೈನ್ ನಲ್ಲಿ ಲುಡೋ ಆಡ್ತಿದ್ದರು ಎನ್ನಲಾಗಿದೆ. ಸತತ ಮೂರ್ನಾಲ್ಕು ಸುತ್ತು ಪತಿಯನ್ನು ಪತ್ನಿ ಸೋಲಿಸಿದ್ದಾಳೆ. ಇದ್ರಿಂದ ಕೋಪಗೊಂಡ ಪತಿ, ಗಲಾಟೆ ಶುರು ಮಾಡಿದ್ದಾನೆ. ಇಬ್ಬರ ಮಧ್ಯೆ ಗಲಾಟೆ ಜೋರಾಗಿ ಪತ್ನಿ ಬೆನ್ನುಮೂಳೆ ಮುರಿದಿದ್ದಾನೆ ಪತಿ.

ಸಹಾಯವಾಣಿಗೆ ಕರೆ ಮಾಡಿದ ಪತ್ನಿ ಆಸ್ಪತ್ರೆ ಸೇರಿದ್ದಾಳೆ. ಚಿಕಿತ್ಸೆ ಮುಂದುವರೆದಿದೆ. ಪತಿ ಜೊತೆ ವಾಪಸ್ ಆತನ ಮನೆಗೆ ಹೋಗಲು ಪತ್ನಿ ನಿರಾಕರಿಸಿದ್ದಳಂತೆ. ಕೊನೆಯಲ್ಲಿ ಇಬ್ಬರ ಮಧ್ಯೆ ಹೊಂದಾಣಿಕೆ ಮಾಡಲಾಗಿದೆ. ಮಹಿಳೆ ಮನೆ ಪಾಠ ಹೇಳುತ್ತಾಳಂತೆ. ಪತಿ ಎಲೆಕ್ಟ್ರಾನಿಕ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...