alex Certify ಧೋನಿ ಅಭಿಮಾನಿಗಳಿಗೊಂದು ಮಹತ್ವದ ಸುದ್ದಿ…! ಕೂಲ್ ಕ್ಯಾಪ್ಟನ್ ನಿವೃತ್ತಿ ಬಗ್ಗೆ CSK ಹೇಳಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿ ಅಭಿಮಾನಿಗಳಿಗೊಂದು ಮಹತ್ವದ ಸುದ್ದಿ…! ಕೂಲ್ ಕ್ಯಾಪ್ಟನ್ ನಿವೃತ್ತಿ ಬಗ್ಗೆ CSK ಹೇಳಿದ್ದೇನು…?

ಐಪಿಎಲ್ 2021ರ ಪಂದ್ಯಗಳಲ್ಲಿ ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ಅಧ್ಬುತ ಪ್ರದರ್ಶನ ನೀಡ್ತಿದೆ. ಈಗಾಗಲೇ ಟೀಂ ಪ್ಲೇಆಫ್ ನಲ್ಲಿ ಸ್ಥಾನ ಪಡೆದಿದೆ. ಐಪಿಎಲ್ ನಲ್ಲಿ ಧೋನಿ ಆಟ ಆನಂದಿಸುತ್ತಿರುವ ಧೋನಿ ಅಭಿಮಾನಿಗಳಿಗೆ ದೊಡ್ಡ ಪ್ರಶ್ನೆಯೊಂದು ಕಾಡಲು ಶುರುವಾಗಿತ್ತು. ಧೋನಿಗೆ ಇದು ಕೊನೆ ಐಪಿಎಲ್ ಆಗಬಹುದಾ ಎಂದು ಅನೇಕರು ಪ್ರಶ್ನಿಸಿದ್ದರು.

2019ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದೆ ಧೋನಿ, 41ನೇ ವರ್ಷಕ್ಕೆ ಕಾಲಿಡ್ತಿದ್ದಾರೆ. ಹಾಗಾಗಿ ಧೋನಿ 2020ರ ಐಪಿಎಲ್ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗ್ತಿದೆ.

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಬಗ್ಗೆ NCB ಅಧಿಕಾರಿಗಳಿಂದ ಮಹತ್ವದ ಮಾಹಿತಿ

ಈಗಾಗಲೇ ಈ ಪ್ರಶ್ನೆಗೆ ಧೋನಿ ಉತ್ತರ ನೀಡಿದ್ದಾರೆ. ಚೆನ್ನೈನಲ್ಲಿ ತನ್ನ ಕೊನೆ ಐಪಿಎಲ್ ಪಂದ್ಯ ಆಡುತ್ತೇನೆಂದು ಧೋನಿ ಹೇಳಿದ್ದಾರೆ. 2021ರ ಯಾವುದೇ ಪಂದ್ಯ ಚೆನ್ನೈನಲ್ಲಿ ನಡೆಯುವುದಿಲ್ಲ. ಹಾಗಾಗಿ ಧೋನಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. 2022ರ ಐಪಿಎಲ್ ಪಂದ್ಯದಲ್ಲಿ ಧೋನಿ ಆಟ ನೋಡಬಹುದೆಂದು ಖುಷಿಯಾಗಿದ್ದಾರೆ.

ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಧೋನಿ 2020ರ ತಂಡದಲ್ಲಿರಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಧೋನಿ ಆಡಲಿದ್ದಾರೆಂದು ಸಿಎಸ್ಕೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಷ್ಟೇ ಅಲ್ಲ, 2020ರ ಪಂದ್ಯ ಧೋನಿಯ ಕೊನೆ ಐಪಿಎಲ್ ಎಂದು ನಾವು ಹೇಳುವುದಿಲ್ಲ. ಅವರು ಮುಂದಿನ ಐಪಿಎಲ್ ಗಳನ್ನೂ ಆಡುವ ಸಾಧ್ಯತೆಯಿದೆ. ಆದ್ರೆ ಅವರ ಕೊನೆ ಪಂದ್ಯ ಮಾತ್ರ ಚೆನ್ನೈನಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...