alex Certify ತ್ರಿವರ್ಣ ಧ್ವಜದ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತ್ರಿವರ್ಣ ಧ್ವಜದ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

75ನೇ ಸ್ವಾತಂತ್ರ‍್ಯೋತ್ಸವದ ಆಚರಣೆ ದೇಶಾದ್ಯಂತ ಜೋರಾಗಿ ಸಾಗುತ್ತಿದೆ. ಕೋವಿಡ್ ನಿರ್ಬಂಧಗಳ ನಡುವೆಯೇ ಇತಿಮಿತಿಗಳಲ್ಲೇ ದೇಶವಾಸಿಗಳು ಆಚರಿಸುತ್ತಿದ್ದಾರೆ.

ಒಂದು ವೇಳೆ ನೀವೇನಾದರೂ ಸ್ವತಂತ್ರ‍್ಯ ದಿನಾಚರಣೆಯಂದು ತ್ರಿವರ್ಣ ಧ್ವಜ ಹಾರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಕೆಳಗಿನ ಕೆಲ ನಿಯಮಗಳ ಬಗ್ಗೆ ಅರಿವಿರಲಿ.

ಜನವರಿ 26, 2002ರಲ್ಲಿ ಭಾರತೀಯ ಧ್ವಜ ಕಾನೂನಿಗೆ ಮಾರ್ಪಾಡುಗಳನ್ನು ಮಾಡಲಾಗಿದ್ದು, ನಾಗರಿಕರು ತಮ್ಮ ಮನೆ, ಕಾರ್ಖಾನೆ ಮತ್ತು ಕಚೇರಿಗಳ ಮೇಲೆ ರಾಷ್ಟ್ರಧ್ವಜ ಹಾರಿಸಲು ಅನುಮತಿ ನೀಡಲಾಗಿದೆ.

ಮಹಿಳೆಯರು ಮೆಹಂದಿ ಹಾಕುವ ಹಿಂದಿದೆ ಈ ಪ್ರಮುಖ ಕಾರಣ

* ಖಾದಿ/ರೇಷ್ಮೆ/ಉಣ್ಣೆ/ಹತ್ತಿಯಿಂದ ರಾಷ್ಟ್ರಧ್ವಜವನ್ನು ಕೈಯಲ್ಲಿ ನೇಯ್ದಿರಬೇಕು. ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳು ಆಯತಾಕಾರದಲ್ಲಿ ಸಮನಾದ ಅನುಪಾತದಲ್ಲಿರಬೇಕು.

* ಧ್ವಜವು ಆಯತಾಕಾರದಲ್ಲಿ, 3:2ರ ಅನುಪಾತದಲ್ಲಿ ಇರಬೇಕು.

* ಡ್ಯಾಮೇಜ್ ಆದ ಧ್ವಜವನ್ನು ತೋರುವಂತಿಲ್ಲ.

* ಯಾವುದೇ ಜಾಗದಲ್ಲಿ ಧ್ವಜವನ್ನು ಹಾರಿಸಿದರೆ, ಅದನ್ನು ಗೌರವಯುತವಾಗಿ ಇಡಬೇಕು.

* ಸೂರ್ಯಾಸ್ತದ ಬಳಿಕ ಹಾಗೂ ಅರ್ಧ-ಎತ್ತರದಲ್ಲಿ ಸರ್ಕಾರದ ಅನುಮತಿ ಇಲ್ಲದೇ ಧ್ವಜ ಹಾರಿಸುವಂತಿಲ್ಲ.

* ಯಾವುದೇ ರೀತಿಯ ಸಿಂಗಾರಕ್ಕೆ ಧ್ವಜವನ್ನು ಬಳಸುವಂತಿಲ್ಲ.

* ಧ್ವಜ ನೆಲ ಮುಟ್ಟದಂತೆ, ಧೂಳು ಅಥವಾ ತೇವವಾಗದಂತೆ ಹಾರಿಸಬೇಕು.

* ಹಾನಿಯಾದ, ಮಣ್ಣಾದ ಧ್ವಜವನ್ನು ಸಂಪೂರ್ಣವಾಗಿ ಸುಡುವ ಮೂಲಕ ನಾಶಪಡಿಸಬೇಕು.

* ಒಂದೇ ಸ್ಥಂಭದಲ್ಲಿ ರಾಷ್ಟ್ರಧ್ವಜದೊಂದಿಗೆ ಬೇರೊಂದು ಧ್ವಜವನ್ನು ಹಾರಿಸಬಾರದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...