alex Certify ಅದ್ಭುತ ದೃಶ್ಯ: ದ್ವಾರಕಾದ ಮಹಾರಾಸ್‌ನಲ್ಲಿ 37,000 ಕ್ಕೂ ಹೆಚ್ಚು ಮಹಿಳೆಯರಿಂದ ಸಾಂಪ್ರದಾಯಿಕ ಪ್ರದರ್ಶನ | WATCH | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅದ್ಭುತ ದೃಶ್ಯ: ದ್ವಾರಕಾದ ಮಹಾರಾಸ್‌ನಲ್ಲಿ 37,000 ಕ್ಕೂ ಹೆಚ್ಚು ಮಹಿಳೆಯರಿಂದ ಸಾಂಪ್ರದಾಯಿಕ ಪ್ರದರ್ಶನ | WATCH

Incredible India! Over 37,000 women perform in sync at the Maha Raas in Gujarat's Dwarka | WATCH

ಗುಜರಾತ್‌ನ ಪ್ರಸಿದ್ಧ ದ್ವಾರಕಾ ದೇವಸ್ಥಾನದಲ್ಲಿ ನಡೆದ ಮಹಾರಾಸ್‌ನಲ್ಲಿ ಗುಜರಾತ್‌ನ ಅಹಿರ್ ಸಮುದಾಯದ ಸುಮಾರು 37,000 ಮಹಿಳೆಯರು ಒಗ್ಗೂಡಿದ್ದರು. ಶ್ರೀಕೃಷ್ಣನ ಭಕ್ತಿಯಲ್ಲಿ ತಲ್ಲೀನರಾದ ಮಹಿಳೆಯರು ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ವಿಗ್ರಹದ ಸುತ್ತಲೂ ಬೃಹತ್ ವೃತ್ತಗಳಲ್ಲಿ ನಿಂತು ನೃತ್ಯ ಮಾಡಿದರು.

ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿರುವ ಏರಿಯಲ್ ವ್ಯೂ ವಿಡಿಯೋದಲ್ಲಿ, ಬೃಹತ್ ಮೈದಾನದಲ್ಲಿ ವೇದಿಕೆಯ ಸುತ್ತಲೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ಮಹಾರಾಸ್ ಅನ್ನು ಪ್ರದರ್ಶಿಸುತ್ತಿರುವುದನ್ನು ಕಾಣಬಹುದು. ಸಾಂಪ್ರದಾಯಿಕ ಉಡುಗೆಯಲ್ಲಿ ಮಹಿಳೆಯರ ಮಹಾರಾಸ್ ಪ್ರದರ್ಶನ ಹೆಚ್ಚು ಗಮನಸೆಳೆದಿದೆ.

ಮಹಾರಾಸ್ ಎಂಬುದು ದ್ವಾರಕಾದಲ್ಲಿ ಬಾಣಾಸುರನ ಮಗಳು ಮತ್ತು ಭಗವಾನ್ ಕೃಷ್ಣನ ಸೊಸೆಯಾದ ಉಷಾ ಅವರ ನೆನಪಿಗಾಗಿ ನಡೆಯುವ ಎರಡು ದಿನಗಳ ಉತ್ಸವವಾಗಿದೆ.

ಅಖಿಲ ಭಾರತ ಯಾದವ ಸಮಾಜ ಮತ್ತು ಅಹಿರಾಣಿ ಮಹಿಳಾ ಮಂಡಲದ ವತಿಯಿಂದ ನಂದಧಾಮ್ ಕ್ಯಾಂಪಸ್ ಎಂದು ಕರೆಯಲ್ಪಡುವ ಎಸಿಸಿ ಸಿಮೆಂಟ್ ಕಂಪನಿಯ ಕ್ಯಾಂಪಸ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕುತೂಹಲಕಾರಿಯಾಗಿ ಸಾಮಾಜಿಕ ಸಾಮರಸ್ಯ ಮತ್ತು ಮಹಿಳಾ ಸಬಲೀಕರಣದ ಸಂದೇಶವನ್ನು ನೀಡುವುದು ಮಹಾರಾಸ್‌ನ ಉದ್ದೇಶವಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...