alex Certify ಟೇಕಾಫ್ ಹೊತ್ತಲ್ಲೇ ವಿಮಾನದಲ್ಲಿ ಅನುಚಿತವಾಗಿ ವರ್ತಿಸಿದ ಪ್ರಯಾಣಿಕರಿಬ್ಬರು ವಶಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೇಕಾಫ್ ಹೊತ್ತಲ್ಲೇ ವಿಮಾನದಲ್ಲಿ ಅನುಚಿತವಾಗಿ ವರ್ತಿಸಿದ ಪ್ರಯಾಣಿಕರಿಬ್ಬರು ವಶಕ್ಕೆ

ನವದೆಹಲಿ: ವಿಮಾನದ ಸಿಬ್ಬಂದಿ ಜೊತೆಗೆ ಪ್ರಯಾಣಿಕರಿಬ್ಬರು ಅನುಚಿತ ವರ್ತನೆ ತೋರಿದ ಘಟನೆ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಸ್ಪೈಸ್ ಜೆಟ್ ವಿಮಾನ ಟೇಕಾಫ್ ಆಗುವ ಮೊದಲು ಪ್ರಯಾಣಿಕರಿಬ್ಬರು ಮಹಿಳಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ. ದೆಹಲಿಯಿಂದ ಹೈದರಾಬಾದ್ ಗೆ ತೆರಳಬೇಕಿದ್ದ ವಿಮಾನದಲ್ಲಿ ಘಟನೆ ನಡೆದಿದ್ದು, ಘಟನೆಯ ನಂತರ ಭದ್ರತಾ ಸಿಬ್ಬಂದಿ ಇಬ್ಬರೂ ಪ್ರಯಾಣಿಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇಂದು ದೆಹಲಿ ವಿಮಾನ ನಿಲ್ದಾಣದಲ್ಲಿ ದೆಹಲಿ-ಹೈದರಾಬಾದ್ ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣಿಕರಿಬ್ಬರು ಅಶಿಸ್ತಿನ ಮತ್ತು ಅನುಚಿತ ವರ್ತನೆ ತೋರಿದ್ದು, ಪ್ರಯಾಣಿಕ ಮತ್ತು ಮತ್ತು ಸಹ-ಪ್ರಯಾಣಿಕನನ್ನು ವಿಮಾನ ನಿಲ್ದಾಣದ ಭದ್ರತಾ ತಂಡಕ್ಕೆ ಹಸ್ತಾಂತರಿಸಲಾಯಿತು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...