alex Certify ಎಣ್ಣೇಯೇಟಿನಲ್ಲಿ ನಡುರಸ್ತೆಯಲ್ಲೇ ಮಹಿಳಾಮಣಿಗಳ ಬಿಗ್‌ ಫೈಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಣ್ಣೇಯೇಟಿನಲ್ಲಿ ನಡುರಸ್ತೆಯಲ್ಲೇ ಮಹಿಳಾಮಣಿಗಳ ಬಿಗ್‌ ಫೈಟ್

ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವಳು ಗಂಡು…… ದಶಕಗಳ ಹಿಂದಿನ ಹಾಡು ಇಂದಿಗೂ ಪ್ರಸ್ತುತವಾಗಿದೆ. ಮದ್ಯವ್ಯಸನಿಗಳಿಗೆ ಗುಂಡು ಒಳಗೆ ಹೋದರೆ ಸಾಕು ಎಲ್ಲಿಲ್ಲದ ಧೈರ್ಯ, ಆಕ್ರೋಶ ಹೊರ ಬರುತ್ತದೆ. ಆ ಸಂದರ್ಭದಲ್ಲಿ ಜಗಳಕ್ಕಿಳಿದರೆ ತಾವು ಏನು ಮಾಡುತ್ತಿದ್ದೇವೆ ಎಂಬ ಪ್ರಜ್ಞೆಯೂ ಅವರಿಗಿರುವುದಿಲ್ಲ. ಹೀಗಾಗಿ ಜಗಳಗಳು ಹಾದಿ ರಂಪ ಬೀದಿ ರಂಪವಾಗಿ ಬಿಡುತ್ತವೆ.

ಇಂತಹದ್ದೇ ಹಾದಿ-ಬೀದಿ ರಂಪಕ್ಕೆ ಇಬ್ಬರು ಮಹಿಳೆಯರು ಕಾರಣರಾಗಿದ್ದಾರೆ. ಭೋಪಾಲ್ ನ ಹೊಶಂಗಾಬಾದ್ ರಸ್ತೆಯ ಬಾರ್ ವೊಂದರಲ್ಲಿ ಕಂಠಪೂರ್ತಿ ಕುಡಿದ ಮಹಿಳೆಯರು ಬಾರ್ ನಿಂದ ಹೊರ ಬಂದು ನಡು ರಸ್ತೆಯಲ್ಲಿ ಜಗಳ ಶುರುವಿಟ್ಟುಕೊಂಡಿದ್ದಾರೆ. ಈ ಜಗಳ ಅತಿರೇಕಕ್ಕೆ ಹೋಗಿ ಪರಸ್ಪರ ಒಬ್ಬರಿಗೊಬ್ಬರು ಹಲ್ಲೆ ಮಾಡಿಕೊಂಡಿದ್ದಾರೆ.

ಬಾಳಾ ಠಾಕ್ರೆ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ‘ಮಹಾ’ಸಿಎಂ ಶಿಂಧೆ

ಈ `ಗುಂಡಿನ’ ಜಗಳದ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿವೆ. ಬಾಯ್ ಫ್ರೆಂಡ್ ವಿಚಾರದಲ್ಲಿ ಜಗಳವಾಡಿಕೊಂಡು ಈ ಮಹಿಳೆಯರು ತಲೆ ಹಿಡಿದು ಎಳೆದಾಡಿಕೊಂಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಜಗಳ ಮಾಡುತ್ತಿದ್ದ ಮಹಿಳೆಯರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದ್ದಾರೆ. ಅಂದಹಾಗೆ, ಈ ರಸ್ತೆಯಲ್ಲಿ ಹೆಜ್ಜೆಗೊಂದು ಬಾರ್ ಇದ್ದು, ಇಲ್ಲಿಗೆ ಹೆಚ್ಚಿನ ಮಹಿಳೆಯರು ಬಂದು ಕಂಠಪೂರ್ತಿ ಕುಡಿದು ನಡು ರಸ್ತೆಯಲ್ಲಿ ಜಗಳವಾಡುವುದು ಸಾಮಾನ್ಯವಾಗಿದೆಯಂತೆ…!

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...