alex Certify ʼಶಿವಸೇನೆʼ ಸರ್ಕಾರ ಉರುಳಿಸಿ ಬಾಳಾ ಠಾಕ್ರೆ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ‘ಮಹಾ’ಸಿಎಂ ಶಿಂಧೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಶಿವಸೇನೆʼ ಸರ್ಕಾರ ಉರುಳಿಸಿ ಬಾಳಾ ಠಾಕ್ರೆ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ‘ಮಹಾ’ಸಿಎಂ ಶಿಂಧೆ

ಮಹಾರಾಷ್ಟ್ರದ ರಾಜಕೀಯ ಚದುರಂಗದಾಟ ಸಾಕಷ್ಟು ತಿರುವುಗಳನ್ನು ಪಡೆದು ಕೊನೆಗೂ ಒಂದು ಹಂತಕ್ಕೆ ಬಂದು ನಿಂತಿದೆ. ಬಾಳಾ ಠಾಕ್ರೆಯಿಂದ ರಾಜಕೀಯವನ್ನು ಕಲಿತ ಏಕನಾಥ್​ ಶಿಂಧೆ ಅವರ ಪುತ್ರನ ಸರ್ಕಾರವನ್ನೇ ಉರುಳಿಸಿ ತಾವು ಮಹಾರಾಷ್ಟ್ರ ಸಿಎಂ ಗದ್ದುಗೆಯಲ್ಲಿ ಕುಳಿತಿದ್ದಾರೆ.

ನಿನ್ನೆ ರಾಜ ಭವನದಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಕೆಲವೇ ಗಂಟೆಗಳ ಮುನ್ನ ಶಿಂಧೆ ತಮ್ಮ ಟ್ವಿಟರ್​ನ ಪ್ರೊಫೈಲ್​ ಫೋಟೋವನ್ನು ಬದಲಾಯಿಸಿದ್ದಾರೆ.

ಹೊಸ ಪ್ರೊಫೈಲ್​ ಫೋಟೋದಲ್ಲಿ ಏಕನಾಥ್​ ಶಿಂಧೆ ಬಾಳಾ ಠಾಕ್ರೆಯೆದುರು ಮಂಡಿಯೂರಿ ಕುಳಿತು ಅವರನ್ನೇ ದಿಟ್ಟಿಸುತ್ತಿರುವ ಚಿತ್ರವನ್ನು ಶೇರ್​ ಮಾಡಿದ್ದಾರೆ. ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಕೆಲವೇ ಗಂಟೆಗಳ ಮುನ್ನ ಈ ಫೋಟೋವನ್ನು ಶಿಂಧೆ ಅಪ್​ಲೋಡ್​ ಮಾಡಿದ್ದಾರೆ.

ನಿನ್ನೆ ಸಂಜೆಯವರೆಗೂ ಫಡ್ನವಿಸ್​ರೇ ಮಹಾರಾಷ್ಟ್ರದ ಸಿಎಂ ಆಗ್ತಾರೆ ಎಂದು ಹೇಳಲಾಗಿತ್ತು. ಆದರೆ ರಾಜಭವನಕ್ಕೆ ತೆರಳಿ ಮಾತುಕತೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ದೇವೇಂದ್ರ ಫಡ್ನವಿಸ್​ ಏಕನಾಥ್​ ಶಿಂಧೆ ಮಹಾರಾಷ್ಟ್ರದ ಸಿಎಂ ಎಂದು ಘೋಷಣೆ ಮಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಸುದ್ದಿಗೋಷ್ಠಿ ವೇಳೆ ನಾನು ಈ ಸರ್ಕಾರದ ಭಾಗವಾಗಿ ಇರುವುದಿಲ್ಲ ಎಂದ ಫಡ್ನವಿಸ್​ ನಿನ್ನೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...