alex Certify ಹಣದಾಸೆಗಾಗಿ ಸ್ನೇಹಿತನನ್ನೇ ಕಿಡ್ನಾಪ್​ ಮಾಡಿದ ಭೂಪರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣದಾಸೆಗಾಗಿ ಸ್ನೇಹಿತನನ್ನೇ ಕಿಡ್ನಾಪ್​ ಮಾಡಿದ ಭೂಪರು ಅರೆಸ್ಟ್

ಯುವಕ ಕಿಡ್ನಾಪ್​ ಆದ 12 ಗಂಟೆಗಳಲ್ಲಿ ಆತನನ್ನು ರಕ್ಷಿಸಿದ್ದು ಮಾತ್ರವಲ್ಲದೇ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.‌

ವಿಚಾರಣೆ ವೇಳೆ ಯುವಕನ ಸ್ನೇಹಿತರೇ ಆತನನ್ನು ಕಿಡ್ನಾಪ್​ ಮಾಡಿದ್ದರು ಎಂದು ತಿಳಿದುಬಂದಿದೆ.
ಮಧ್ಯ ಪ್ರದೇಶ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ರೇವಾ ನಿವಾಸಿಯಾದ ಶಿವಂ ಕೌಲ್​ ಎಂಬಾತನನ್ನು ಬುಧವಾರ ಸಂಜೆ ಅಪಹರಣ ಮಾಡಲಾಗಿತ್ತು.
ಕೌಲ್​​ನನ್ನು ಅಪಹರಣ ಮಾಡಿದವರು ಆತನ ತಾಯಿಗೆ ಕರೆ ಮಾಡಿ 8 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಹಣದ ಸಮೇತ ಡೊಡೋನ್​ ಕಾಡಿಗೆ ಬರುವಂತೆ ತಾಯಿಗೆ ಬೆದರಿಕೆಯೊಡ್ಡಿದ್ದರು ಎಂದು ರೇವಾ ಸೂಪರಿಟೆಂಡೆಂಟ್​ ನವನೀತ್​ ಭಾಸಿನ್ ಹೇಳಿದ್ದಾರೆ.

ಕೌಲ್​ ಅಪಹರಣಕಾರರು ಕರೆ ಮಾಡುತ್ತಿದ್ದಂತೆ ತಾಯಿ ತನ್ನ ಪತಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕೌಲ್​ ತಂದೆ ಜಾವಾ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು ಮಾತ್ರವಲ್ಲದೇ ಕಿಡ್ನಾಪರ್​ಗಳು ಕರೆ ಮಾಡಿದ್ದ ಮೊಬೈಲ್​ ಸಂಖ್ಯೆಯನ್ನು ಪೊಲೀಸರಿಗೆ ನೀಡಿದ್ದರು.

ಅಪಹರಣಕಾರರು ಕರೆ ಮಾಡಿದ್ದ ಮೊಬೈಲ್ ಸಂಖ್ಯೆಯನ್ನು ಸೈಬರ್ ಸೆಲ್​ ಹಾಗೂ ಟೆಕ್ನಿಕಲ್​ ಟೀಂಗೆ ಪೊಲೀಸರು ನೀಡಿದರು. ಟೆಕ್ನಿಕಲ್​ ಟೀಂ ಈ ಮೊಬೈಲ್​ ಸಂಖ್ಯೆಯನ್ನು ಟ್ರ್ಯಾಕ್​ ಮಾಡುವಲ್ಲಿ ಯಶಸ್ವಿಯಾಗಿತ್ತು. ಕೂಡಲೇ ಸ್ಥಳಕ್ಕೆ ತೆರಳಿದ್ದ ಪೊಲೀಸರು ಕೌಲ್​ನನ್ನು ರಕ್ಷಣೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಮೂವರು ಆರೋಪಿಗಳು ಅಪ್ರಾಪ್ತರು ಎಂದು ತಿಳಿದುಬಂದಿದೆ.

ವಿಚಾರಣೆ ವೇಳೆ ಅಪ್ರಾಪ್ತರು ಹಣ ಸಿಗುತ್ತೆ ಎಂಬ ಕಾರಣಕ್ಕೆ ಸ್ನೇಹಿತನನ್ನೇ ಅಪಹರಣ ಮಾಡಿದ್ದೆವು ಎಂದು ತಪ್ಪೊಪ್ಪಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...