alex Certify ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ ಜಿಹಾದಿಗಳ ಅಟ್ಟಹಾಸ ಮಿತಿ ಮೀರಿದೆ : ಬಿಜೆಪಿ ವಾಗ್ಧಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ ಜಿಹಾದಿಗಳ ಅಟ್ಟಹಾಸ ಮಿತಿ ಮೀರಿದೆ : ಬಿಜೆಪಿ ವಾಗ್ಧಾಳಿ

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ ಜಿಹಾದಿಗಳ ಅಟ್ಟಹಾಸ ಮಿತಿ ಮೀರಿದೆ ಎಂದು ಬಿಜೆಪಿ ಎಕ್ಸ್ ನಲ್ಲಿ ವಾಗ್ಧಾಳಿ ನಡೆಸಿದೆ.

ತೈಲಪ ಹೊಯ್ಸಳರಾಳಿದ ನಾಡು, ಡಂಕಣ ಜಕಣರ ನೆಚ್ಚಿನ ಬೀಡಾಗಿದ್ದ ಕರ್ನಾಟಕವನ್ನು, ಭಯೋತ್ಪಾದಕರ ಸ್ವರ್ಗವನ್ನಾಗಿಸುತ್ತಿದೆ ಕಾಂಗ್ರೆಸ್.ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ, ರಾಜ್ಯದಲ್ಲಿ ಜಿಹಾದಿಗಳ ಅಟ್ಟಹಾಸ ಮಿತಿ ಮೀರಿದ್ದು, ಮಲಗಿದ್ದ ಸ್ಲೀಪರ್ ಸೆಲ್ಗಳೆಲ್ಲಾ ಎದ್ದು ನಿಂತಿವೆ. ಈ ನೆಲದ ಕಾನೂನಿಗೂ ಗೌರವ ನೀಡದೆ, ಪೊಲೀಸರನ್ನು ಕಂಡರೂ ಭಯವಿಲ್ಲದೆ ರಾಜಾರೋಷವಾಗಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಆದರೆ ಇವುಗಳಿಗೆ ಕಡಿವಾಣ ಹಾಕಬೇಕಿದ್ದ “ಕೈ” ಸರ್ಕಾರ ಜಿಹಾದಿಗಳ ಗುಲಾಮರಂತೆ ವರ್ತಿಸುತ್ತಿರುವುದು ಆರು ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ಮಹಾಮೋಸ ಎಂದು ಬಿಜೆಪಿ ಎಕ್ಸ್ ನಲ್ಲಿ ವಾಗ್ಧಾಳಿ ನಡೆಸಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಾಲ ಮುದುರಿಕೊಂಡು ಕೂತಿದ್ದ ಜಿಹಾದಿ ಶಕ್ತಿಗಳು, ಕಾಂಗ್ರೆಸ್ ಸರ್ಕಾರ ಬಂದಿದೆ ಎಂಬ ಕಾರಣಕ್ಕೆ ಸಂಪೂರ್ಣ ಬಾಲ ಬಿಚ್ಚಿದ್ದು, ರಾಜ್ಯಾದ್ಯಂತ ಶಾಂತಿ ಕದಡುವ ಕೆಲಸಗಳನ್ನು ಈ ನಾಲ್ಕು ತಿಂಗಳಿನಿಂದ ಮಾಡುತ್ತಲೇ ಬಂದಿವೆ. ರಾಮನಗರದಲ್ಲಿ ತಮ್ಮವರೇ ಶಾಸಕರು, ತಮ್ಮವರೇ ಸಚಿವರು ಎಂಬ ಕಾರಣಕ್ಕೆ ಜಿಹಾದಿಗಳ ಅಟ್ಟಹಾಸ ವ್ಯಾಪಕವಾಗಿದ್ದು, ಹಾಡುಹಗಲೇ ಹಿಂದೂಗಳ ಮನೆ ಮುಂದಿರುವ ಗೋವುಗಳನ್ನು ಕದ್ದು, ವಧಿಸಿ, ಗೋ ಮಾಂಸದ ತ್ಯಾಜ್ಯವನ್ನು ಹಿಂದೂಗಳ ಜಮೀನಿನಲ್ಲಿಯೇ ಸುರಿಯುವಷ್ಟು ದಾರ್ಷ್ಟ್ಯತನ ಪ್ರದರ್ಶಿಸಿದ್ದಾರೆ. ರಾಮನಗರದ ಟಿಪ್ಪು ನಗರಕ್ಕೆ ಕರೆಂಟ್ ಬಿಲ್ ನೀಡಲು ಹೋದ ಬೆಸ್ಕಾಂ ಸಿಬ್ಬಂದಿಗಳ ಮೇಲೆ, ಅಲ್ಲಿನ ಜನರಿಂದ ಗುಂಪು ಹಲ್ಲೆ ನಡೆಸಿರುವುದೂ ಸರ್ಕಾರ ತಮ್ಮ ಬೆನ್ನಿಗಿದೆ ಎಂಬ ಕಾರಣಕ್ಕೇ ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.

ಹಿಂದೂಗಳಿಗೆ ಚೌತಿ ಸಮಯದಲ್ಲಿ ಗಣೇಶ ಪ್ರತಿಷ್ಠಾಪನೆಗೆ ನೂರೆಂಟು ಕಂಡಿಷನ್ಗಳು ವಿಧಿಸುವ, ಬಾಂಡ್ಗಳನ್ನು ಕೇಳುವ ಕಾಂಗ್ರೆಸ್ ಸರ್ಕಾರ, ಶಿವಮೊಗ್ಗ ಮತ್ತು ಕೋಲಾರದಲ್ಲಿ ದ್ವೇಷಪೂರಿತ ಬರಹಗಳನ್ನು ಹೊಂದಿರುವ ತಲ್ವಾರ್ ಮಾದರಿಯ ಕಮಾನ್ಗಳು, ಟಿಪ್ಪು, ಔರಂಗಜೇಬನಂತಹ ಹಿಂದೂ ವಿರೋಧಿಗಳ ಕಟೌಟ್ಗಳನ್ನು ನಿರ್ಮಿಸಲು ಬೇಷರತ್ ಅನುಮತಿ ನೀಡುತ್ತದೆ. ಇದು ಸಿದ್ದರಾಮಯ್ಯ ಅವರ ಸರ್ಕಾರದ ಹಿಂದೂ ವಿರೋಧಿ ರಾಜಕಾರಣಕ್ಕೆ ಸ್ಪಷ್ಟ ಉದಾಹರಣೆ. ಅಸಲಿಗೆ ಜಿಹಾದಿಗಳಿಗೆ ಈ ಪರಿ ಕಾನೂನನ್ನು ಕೈಗೆತ್ತಿಕೊಳ್ಳುವ “ಶಕ್ತಿ” ಒದಗಿಸಿದ್ದೇ ಕಾಂಗ್ರೆಸ್ ಸರ್ಕಾರ. ಜಿಹಾದಿಗಳು ಎಂತಹ ದೇಶದ್ರೋಹಿ ಕೃತ್ಯಗಳಲ್ಲಿ ಭಾಗಿಯಾದರೂ, ಅವರಿಗೆ ಅಮಾಯಕ ಎಂಬ ಪಟ್ಟ ಕಟ್ಟಲು ಕಾಂಗ್ರೆಸ್ ಸರ್ಕಾರದ ಸಚಿವರೊಳಗೇ ಪೈಪೋಟಿ ಆರಂಭವಾಗುತ್ತದೆ. ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಸಂಚು ರೂಪಿಸಿ ಸಿಕ್ಕಿಬಿದ್ದ ಭಯೋತ್ಪಾದಕರಿಗೆ, ಡಿಸಿಎಂ ಅವರು “ದೆ ಆರ್ ಮೈ ಬ್ರದರ್ಸ್” ಎನ್ನುತ್ತಾರೆ, ಗೃಹ ಸಚಿವರಂತೂ ಉಗ್ರರಿಗೆ ಅಮಾಯಕರು ಎಂಬ ಸರ್ಟಿಫಿಕೇಟ್ ನೀಡುವ ಏಜನ್ಸಿ ನಡೆಸುತ್ತಿರುವಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...