alex Certify ಭಾರತದಲ್ಲಿ ʼಚೀತಾʼ ಅಳಿವು ಹೇಗಾಯ್ತು ? ಇಲ್ಲಿದೆ ಕುತೂಹಲಕರ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ʼಚೀತಾʼ ಅಳಿವು ಹೇಗಾಯ್ತು ? ಇಲ್ಲಿದೆ ಕುತೂಹಲಕರ ಮಾಹಿತಿ

ಭಾರತವು ನಮೀಬಿಯಾದಿಂದ ಎಂಟು ಚೀತಾಗಳನ್ನು ದೇಶಕ್ಕೆ ಸ್ಥಳಾಂತರಿಸಿದ ಇತಿಹಾಸವನ್ನು ಪುನಃ ಬರೆದಿದೆ. ದೇಶದ ವನ್ಯಜೀವಿಗಳು ಮತ್ತು ಆವಾಸಸ್ಥಾನಗಳನ್ನು ಪುನರುಜ್ಜೀವನಗೊಳಿಸುವ ಮತ್ತು ವೆೈವಿಧ್ಯಗೊಳಿಸುವ ಪ್ರಧಾನ ಮಂತ್ರಿಯವರ ಪ್ರಯತ್ನದ ಭಾಗವಾಗಿ ಈ ಕಾರ್ಯ ನಡೆದಿದೆ.

ದೇಶದಲ್ಲಿ ಅಳಿವಿನಂಚಿನಲ್ಲಿದೆ ಎಂದು ಘೋಷಿಸಿ 70 ವರ್ಷಗಳ ನಂತರ ಚೀತಾಗಳನ್ನು ಮತ್ತೆ ಪರಿಚಯಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಐಎಫ್​ಎಸ್​ ಅಧಿಕಾರಿ ಪರ್ವೀನ್​ ಕಸ್ವಾನ್​ ಈ ಭವ್ಯವಾದ ಚೀತಾಗಳು ಅಳಿವಿನ ಮೊದಲು ಹೇಗೆ ಬೇಟೆಯಾಡಿ ಹಿಂಸಿಸಲ್ಪಟ್ಟವು ಎಂಬುದರ ಕುರಿತು ಆಸಕ್ತಿದಾಯಕ ಮತ್ತು ಮಾಹಿತಿಯುಕ್ತ ಪೋಸ್ಟ್​ ಹಂಚಿಕೊಂಡಿದ್ದಾರೆ.

ಕಸ್ವಾನ್​ ಅವರು ಚಿರತೆಗಳನ್ನು ಹೇಗೆ ಸಾಕುಪ್ರಾಣಿಗಳಾಗಿ ಇರಿಸಲಾಗಿತ್ತು, ಬೇಟೆಯಾಡಲು ಮತ್ತು ಇತರ ಕ್ರೀಡೆಗಳಿಗೆ ಹೇಗೆ ಬಳಸುತ್ತಾರೆ ಎಂಬುದನ್ನು ತೋರಿಸುವ ಕ್ಲಿಪ್​ಗಳನ್ನು ಹಂಚಿಕೊಂಡಿದ್ದಾರೆ.

ಹೇಗೆ ಬೇಟೆಯಾಡಲಾಯಿತು, ಗಾಯಗೊಳಿಸಲಾಯಿತು ಮತ್ತು ಪಳಗಿಸಲಾಯಿತು ಎಂಬುದರ ಕುರಿತು ಒಂದು ನೋಟವನ್ನು ಹಂಚಿಕೊಂಡಿದ್ದು, ಅದನ್ನು 1939 ರಲ್ಲಿ ಮಾಡಿದ ವಿಡಿಯೊ ಎಂದು ಶೀರ್ಷಿಕೆಯಲ್ಲಿದೆ.

ಚಿರತೆ ಮಾತ್ರವಲ್ಲದೆ ಹೆಚ್ಚಿನ ಬಲಶಾಲಿ ಪ್ರಾಣಿಗಳನ್ನು ಆ ದಿನಗಳಲ್ಲಿ ರಾಜರು ಮತ್ತು ಬ್ರಿಟಿಷರು ಬೇಟೆಯಾಡುತ್ತಿದ್ದರು. ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ಜಾರಿಗೆ ಬರುವುದರೊಳಗೆ ತುಂಬಾ ತಡವಾಗಿತ್ತು.

ಟ್ವಿಟರ್​ ಥ್ರೆಡ್​ ನೆಟ್ಟಿಗರ ಗಮನ ಸೆಳೆದಿದೆ. ಈ ಹಿಂದೆ ಪ್ರಾಣಿಗಳನ್ನು ನಡೆಸಿಕೊಳ್ಳುತ್ತಿದ್ದ ರೀತಿಯನ್ನು ನೋಡಿ ಜನರು ಅಚ್ಚರಿಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...