alex Certify ಮದುವೆ ಸಂದರ್ಭದಲ್ಲಿ ʼಚಿನ್ನʼ ಖರೀದಿ ಮೊದಲು ಇದು ನೆನಪಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಸಂದರ್ಭದಲ್ಲಿ ʼಚಿನ್ನʼ ಖರೀದಿ ಮೊದಲು ಇದು ನೆನಪಿಡಿ

ಮದುವೆ  ಋತು ಪ್ರಾರಂಭವಾಗ್ತಿದೆ. ಚಿನ್ನ – ಬೆಳ್ಳಿ ಖರೀದಿಗೆ ಜನರು ಮುಂದಾಗ್ತಿದ್ದಾರೆ. ಚಿನ್ನ – ಬೆಳ್ಳಿ ಖರೀದಿಗೂ ಮುನ್ನ ಕೆಲವೊಂದು ವಿಷ್ಯಗಳನ್ನು ನೆನಪಿಟ್ಟುಕೊಳ್ಳಬೇಕು.

ಚಿನ್ನದ ಬೆಲೆ : ಚಿನ್ನದ ಬೆಲೆ ಅದ್ರ ಗುಣಮಟ್ಟವನ್ನು ಅವಲಂಬಿಸಿರುತ್ತದೆ. 24 ಕ್ಯಾರಟ್ ಚಿನ್ನವು ಶುದ್ಧ ಚಿನ್ನವಾಗಿರುತ್ತದೆ. ಹಾಗಾಗಿ ಅದರ ಬೆಲೆ ಹೆಚ್ಚಿರುತ್ತದೆ. ಚಿನ್ನವನ್ನು ಖರೀದಿಸುವಾಗ, ಚಿನ್ನದ ಪ್ರಸ್ತುತ ಬೆಲೆಯನ್ನು ತಿಳಿದಿರಿ. ಎಲ್ಲ ಆಭರಣ ಮಳಿಗೆಯಲ್ಲಿ ಚಿನ್ನದ ಬೆಲೆಯಿರುತ್ತದೆ. ಅದನ್ನು ಮೊದಲು ಪರಿಶೀಲಿಸಿಕೊಂಡು ನಂತ್ರ ಆಭರಣ ಖರೀದಿಗೆ ಮುಂದಾಗಿ.

ಹಾಲ್‌ಮಾರ್ಕ್ ಆಭರಣ : ಹಾಲ್‌ಮಾರ್ಕ್ ಚಿನ್ನದ ಶುದ್ಧತೆಯನ್ನು ಖಾತರಿಪಡಿಸುತ್ತದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ವ ಹಾಲ್‌ಮಾರ್ಕ್ ಮಾಡಿದ ಚಿನ್ನವನ್ನು ಪ್ರಮಾಣೀಕರಿಸುವ ಸಂಸ್ಥೆಯಾಗಿದೆ. ಹಾಲ್ ಮಾರ್ಕ್ ಇರುವ ಚಿನ್ನ ಖರೀದಿ ಮಾಡಿದ್ರೆ ಅದ್ರ ಮಾರಾಟ ಸುಲಭ. ಹಾಗಾಗಿ ಚಿನ್ನ ಖರೀದಿರುವ ಮೊದಲು ಹಾಲ್ ಮಾರ್ಕ್ ಗೆ ಗಮನ ನೀಡಿ.

ನಿಖರತೆಯ ಮಟ್ಟ : ಚಿನ್ನದ ಶುದ್ಧತೆಯನ್ನು ಕ್ಯಾರೆಟ್‌ಗಳಲ್ಲಿ ವ್ಯಕ್ತಪಡಿಸಲಾಗುತ್ತದೆ. ಏಕೆಂದರೆ 24 ಕ್ಯಾರೆಟ್ ಚಿನ್ನವನ್ನು ಶೇಕಡಾ 99.9ರಷ್ಟು ಶುದ್ಧವೆಂದು ಪರಿಗಣಿಸಲಾಗುತ್ತದೆ. 22 ಕ್ಯಾರೆಟ್ ಚಿನ್ನವು ಶೇಕಡಾ 92ರಷ್ಟು ಶುದ್ಧವಾಗಿದೆ. ಚಿನ್ನ ಅಥವಾ ಯಾವುದೇ ಚಿನ್ನದ ಆಭರಣಗಳನ್ನು ಖರೀದಿಸುವಾಗ ಯಾವಾಗಲೂ ಅದರ ಶುದ್ಧತೆಯನ್ನು ಪರಿಶೀಲಿಸಿ ಮತ್ತು ಅದಕ್ಕೆ ಅನುಗುಣವಾಗಿ ಬೆಲೆಯನ್ನು ಪಾವತಿಸಿ.

ಮೇಕಿಂಗ್ ಚಾರ್ಜ್‌ : ಮೇಕಿಂಗ್ ಚಾರ್ಜ್‌ಗಳು ಚಿನ್ನದ ಆಭರಣಗಳ ಮೇಲೆ ವಿಧಿಸುವ ಕಾರ್ಮಿಕ ಶುಲ್ಕ. ಯಂತ್ರ ನಿರ್ಮಿತ ಚಿನ್ನಾಭರಣಗಳು ಮಾನವ ನಿರ್ಮಿತ ಆಭರಣಗಳಿಗಿಂತ ಅಗ್ಗವಾಗಿರುತ್ತವೆ. ಅನೇಕ ಆಭರಣ ಮಳಿಗೆಗಳು ಮೇಕಿಂಗ್ ಶುಲ್ಕದ ಮೇಲೆ ನಿರ್ದಿಷ್ಟ ರಿಯಾಯಿತಿಯನ್ನು ನೀಡುತ್ತವೆ. ಆಭರಣಗಳನ್ನು ಖರೀದಿಸುವ ಮೊದಲು ಆಫರ್‌ಗಳು ಮತ್ತು ಮೇಕಿಂಗ್ ಚಾರ್ಜ್‌ಗಳನ್ನು ಒಮ್ಮೆ ಪರಿಶೀಲಿಸಿ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...