alex Certify ICICI ಕ್ರೆಡಿಟ್‌ ಕಾರ್ಡ್‌ ಬಳಕೆದಾರರಿಗೆ ಬಿಗ್‌ ಶಾಕ್…! ದುಬಾರಿಯಾಗಲಿದೆ ಈ ಶುಲ್ಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ICICI ಕ್ರೆಡಿಟ್‌ ಕಾರ್ಡ್‌ ಬಳಕೆದಾರರಿಗೆ ಬಿಗ್‌ ಶಾಕ್…! ದುಬಾರಿಯಾಗಲಿದೆ ಈ ಶುಲ್ಕ

ತನ್ನ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ವಿಧಿಸುವ ಶುಲ್ಕದಲ್ಲಿ ಮೇಲ್ಮುಖ ಪರಿಷ್ಕರಣೆ ಮಾಡಿರುವ ಐಸಿಐಸಿಐ ಬ್ಯಾಂಕ್‌ ಫೆಬ್ರವರಿ 10, 2022ರಿಂದ ಈ ಹೊಸ ಶುಲ್ಕಗಳನ್ನು ಅನುಷ್ಠಾನಕ್ಕೆ ತರಲಿದೆ. ಪಾವತಿಗಳ ಡೆಡ್ಲೈನ್ ಮೀರುವ ಹಾಗೂ ಇನ್ನಿತರ ಸೇವೆಗಳನ್ನು ಪಡೆಯಲು ಗ್ರಾಹಕರು ಇನ್ನಷ್ಟು ಹೆಚ್ಚಿನ ಶುಲ್ಕ ಪಾವತಿ ಮಾಡಬೇಕಾಗುತ್ತದೆ.

SHOCKING NEWS: ಮಿನಿ ವಿಧಾನಸೌಧ ಮಾರಾಟಕ್ಕಿಟ್ಟಿದ್ದ ರೈತ ಶವವಾಗಿ ಪತ್ತೆ; ಸಾವಿನ ಸುತ್ತ ಅನುಮಾನದ ಹುತ್ತ

ಉದಾಹರಣೆಗೆ: ಹಿಂದಿರುಗುವ ಚೆಕ್ ಮೇಲಿನ ಶುಲ್ಕದಲ್ಲಿ ಏರಿಕೆ ಮಾಡಿರುವ ಐಸಿಐಸಿಐ ಬ್ಯಾಂಕ್, ಹೀಗೆ ಮರಳಿ ಬಂದ ಚೆಕ್‌ನ ಮೌಲ್ಯದ (ಕನಿಷ್ಠ 500 ರೂ.) 2%ನಷ್ಟನ್ನು ಶುಲ್ಕದ ರೂಪದಲ್ಲಿ ವಿಧಿಸುತ್ತದೆ.

ಇದರೊಂದಿಗೆ, ಕ್ರೆಡಿಟ್ ಕಾರ್ಡ್ ಬಳಕೆದಾರರ ನಗದು ಮುಂಗಡದ ಶುಲ್ಕಗಳನ್ನು ಹೆಚ್ಚಿಸಿದೆ ಐಸಿಐಸಿಐ ಬ್ಯಾಂಕ್. ಫಬ್ರವರಿ 10ರಿಂದ ಅನ್ವಯವಾಗುವಂತೆ, ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಗ್ರಾಹಕರು ನಗದು ಮುಂಗಡವಾಗಿ 2.5%ದಷ್ಟು ಮೊತ್ತವನ್ನು ಪಾವತಿ ಮಾಡಬೇಕು, ಕನಿಷ್ಠ 500 ರೂ.ಗಳು.

ಆಟೋ ಡೆಬಿಟ್ ರಿಟರ್ನ್ ಶುಲ್ಕವನ್ನೂ ಸಹ ಐಸಿಐಸಿಐ ಬ್ಯಾಂಕ್ ಏರಿಸಿದ್ದು, ಆಟೋ ಡೆಬಿಟ್ ಪರಿಸ್ಥಿತಿಯಲ್ಲಿ ಗ್ರಾಹಕರು ಬಾಕಿ ಇರುವ ಮೊತ್ತದ 2%ನಷ್ಟನ್ನು ಪಾವತಿ ಮಾಡಬೇಕಾಗುತ್ತದೆ.

ಇದರೊಂದಿಗೆ ತಡವಾದ ಪಾವತಿ ಶುಲ್ಕದಲ್ಲೂ ಏರಿಕೆ ಮಾಡಿರುವ ಐಸಿಐಸಿಐ ಬ್ಯಾಂಕ್, ಬಾಕಿ ಪಾವತಿ ಮಾಡಬೇಕಾದ ಮೊತ್ತವನ್ನು ಆಧರಿಸಿ ದರಗಳನ್ನು ಹೊಸದಾಗಿ ನಿಗದಿ ಮಾಡಿದೆ. ತಡವಾದ ಪಾವತಿ ಶುಲ್ಕಗಳ ವಿವರಗಳು ಇಂತಿವೆ.

ರೂ. 100 ರಿಂದ ರೂ. 500 – 100 ರೂ.
ರೂ. 501 ರಿಂದ ರೂ. 5000 – 500 ರೂ.
ರೂ 5,001 ರಿಂದ ರೂ. 10,000 – 750 ರೂ.
ರೂ. 10,001 ರಿಂದ ರೂ. 25,000 – 900 ರೂ.
ರೂ. 10,001 ರಿಂದ ರೂ. 25,000 – 1000 ರೂ.
50,000 ರೂ. ಗಿಂತ ಹೆಚ್ಚು – 1200 ರೂ.

ಇದಲ್ಲದೇ, ಗ್ರಾಹಕರು ಮೇಲೆ ತಿಳಿಸಿದ ಶುಲ್ಕಗಳಿಗೆ ಹೆಚ್ಚುವರಿಯಾಗಿ 50 ರೂಪಾಯಿಗಳನ್ನು ಜಿಎಸ್‌ಟಿ ರೂಪದಲ್ಲಿ ಪಾವತಿಸಬೇಕಾಗುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...