alex Certify BIG BREAKING: ದೇಶ ವಿರೋಧಿ ಪ್ರಚಾರ ಮಾಡಿದ ಪಾಕ್ ಮೂಲದ 35 ಯೂಟ್ಯೂಬ್ ಚಾನೆಲ್ ಗಳಿಗೆ ನಿರ್ಬಂಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ದೇಶ ವಿರೋಧಿ ಪ್ರಚಾರ ಮಾಡಿದ ಪಾಕ್ ಮೂಲದ 35 ಯೂಟ್ಯೂಬ್ ಚಾನೆಲ್ ಗಳಿಗೆ ನಿರ್ಬಂಧ

ನವದೆಹಲಿ: ಡಿಜಿಟಲ್ ಮೀಡಿಯಾ ಪ್ಲಾಟ್‌ ಫಾರ್ಮ್‌ಗಳಲ್ಲಿ ಸಂಘಟಿತ ರೀತಿಯಲ್ಲಿ ಭಾರತ ವಿರೋಧಿ ನಕಲಿ ಸುದ್ದಿಗಳನ್ನು ಹರಡುವಲ್ಲಿ ತೊಡಗಿರುವ ಎರಡು ವೆಬ್‌ಸೈಟ್‌ ಗಳ ಜೊತೆಗೆ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ 35 ಯೂಟ್ಯೂಬ್ ಸುದ್ದಿ ಚಾನೆಲ್‌ಗಳನ್ನು ನಿರ್ಬಂಧಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ(MI&B) ಆದೇಶಿಸಿದೆ.

ಸಚಿವಾಲಯವು ನಿರ್ಬಂಧಿಸಿದ ಯೂಟ್ಯೂಬ್ ಖಾತೆಗಳ ಒಟ್ಟು ಚಂದಾದಾರರ ಸಂಖ್ಯೆ 1.20 ಕೋಟಿ ಮತ್ತು ಅವರ ವಿಡಿಯೋಗಳು 130 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಹೆಚ್ಚುವರಿಯಾಗಿ, ಎರಡು ಟ್ವಿಟರ್ ಖಾತೆಗಳು, ಎರಡು ಇನ್‌ ಸ್ಟಾಗ್ರಾಮ್ ಖಾತೆಗಳು ಮತ್ತು ಒಂದು ಫೇಸ್‌ಬುಕ್ ಖಾತೆಯನ್ನು ಸಹ ಸರ್ಕಾರವು ಅಂತರ್ಜಾಲದಲ್ಲಿ ಸಂಘಟಿತ ಭಾರತ ವಿರೋಧಿ ತಪ್ಪು ಮಾಹಿತಿಯನ್ನು ಹರಡಲು ತೊಡಗಿಸಿಕೊಂಡಿದ್ದಕ್ಕಾಗಿ ನಿರ್ಬಂಧಿಸಿದೆ.

ಸಚಿವಾಲಯವು ಮಾಹಿತಿ ತಂತ್ರಜ್ಞಾನ(ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ) ನಿಯಮಗಳು, 2021 ರ ನಿಯಮ 16 ರ ಅಡಿಯಲ್ಲಿ ಹೊರಡಿಸಲಾದ ಐದು ಪ್ರತ್ಯೇಕ ಆದೇಶಗಳನ್ನು ಅನುಸರಿಸಿ ಈ ಪಾಕಿಸ್ತಾನ ಮೂಲದ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ವೆಬ್‌ ಸೈಟ್‌ ಗಳನ್ನು ನಿರ್ಬಂಧಿಸಲು ಆದೇಶಿಸಿದೆ.

ಭಾರತೀಯ ಗುಪ್ತಚರ ಸಂಸ್ಥೆಗಳು ಈ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ವೆಬ್‌ ಸೈಟ್‌ ಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿವೆ. ತಕ್ಷಣದ ಕ್ರಮಕ್ಕಾಗಿ ಸಚಿವಾಲಯಕ್ಕೆ ಮಾಹಿತಿ ನೀಡಿವೆ. ಸಚಿವಾಲಯವು ನಿರ್ಬಂಧಿಸಿದ 35 YouTube ಖಾತೆಗಳನ್ನು ಪಾಕಿಸ್ತಾನದಿಂದ ನಿರ್ವಹಿಸಲಾಗುತ್ತಿದೆ. 4 ಸಂಘಟಿತ ತಪ್ಪು ಮಾಹಿತಿ ನೆಟ್‌ ವರ್ಕ್‌ ಗಳ ಭಾಗವೆಂದು ಗುರುತಿಸಲಾಗಿದೆ. ಇವುಗಳಲ್ಲಿ ಅಪ್ನಿ ದುನಿಯಾ ನೆಟ್‌ ವರ್ಕ್ 14 ಯೂಟ್ಯೂಬ್ ಚಾನೆಲ್‌ ಗಳನ್ನು ನಿರ್ವಹಿಸುತ್ತಿದೆ. ತಲ್ಹಾ ಫಿಲ್ಮ್ಸ್ ನೆಟ್‌ವರ್ಕ್ 13 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ವಹಿಸುತ್ತಿದೆ.

4 ಚಾನೆಲ್‌ಗಳ ಒಂದು ಸೆಟ್ ಮತ್ತು ಇತರ ಎರಡು ಚಾನಲ್‌ಗಳ ಒಂದು ಸೆಟ್ ಸಹ ಪರಸ್ಪರ ಸಿಂಕ್ರೊನೈಸೇಶನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ.

ಸಚಿವಾಲಯದ ಪ್ರಕಾರ, ಈ ಎಲ್ಲಾ ನೆಟ್‌ ವರ್ಕ್‌ ಗಳು ಭಾರತೀಯ ಪ್ರೇಕ್ಷಕರ ಕಡೆಗೆ ನಕಲಿ ಸುದ್ದಿಗಳನ್ನು ಹರಡುವ ಏಕೈಕ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿವೆ. ನೆಟ್‌ ವರ್ಕ್‌ ನ ಭಾಗವಾಗಿರುವ ಚಾನಲ್‌ ಗಳು ಸಾಮಾನ್ಯ ಹ್ಯಾಶ್‌ ಟ್ಯಾಗ್‌ ಗಳು ಮತ್ತು ಎಡಿಟಿಂಗ್ ಶೈಲಿಗಳನ್ನು ಬಳಸಿದವು.

ಸಚಿವಾಲಯವು ನಿರ್ಬಂಧಿಸಿರುವ ಯೂಟ್ಯೂಬ್ ಚಾನೆಲ್‌ಗಳು, ವೆಬ್‌ ಸೈಟ್‌ ಗಳು ಮತ್ತು ಇತರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪಾಕಿಸ್ತಾನವು ಭಾರತಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳ ಬಗ್ಗೆ ಭಾರತ ವಿರೋಧಿ ನಕಲಿ ಸುದ್ದಿಗಳನ್ನು ಹರಡಲು ಬಳಸಿಕೊಂಡಿದೆ.

ಇವುಗಳಲ್ಲಿ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ, ಮತ್ತು ಇತರ ದೇಶಗಳೊಂದಿಗೆ ಭಾರತದ ಸಂಬಂಧಗಳಂತಹ ವಿಷಯಗಳು ಸೇರಿವೆ.

ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಅವರ ನಿಧನದ ಕುರಿತು ಯೂಟ್ಯೂಬ್ ಚಾನೆಲ್‌ ಗಳ ಮೂಲಕ ವ್ಯಾಪಕವಾದ ಸುಳ್ಳು ಸುದ್ದಿಗಳನ್ನು ಹರಡುವುದನ್ನು ಗಮನಿಸಲಾಗಿದೆ. ಈ ಯೂಟ್ಯೂಬ್ ಚಾನೆಲ್‌ ಗಳು 5 ರಾಜ್ಯಗಳಲ್ಲಿ ಮುಂಬರುವ ಚುನಾವಣೆಗಳ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ದುರ್ಬಲಗೊಳಿಸುವ ವಿಷಯವನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದ್ದವು.

ಪ್ರತ್ಯೇಕತಾವಾದವನ್ನು ಪ್ರೋತ್ಸಾಹಿಸಲು, ಭಾರತವನ್ನು ಧರ್ಮದ ಆಧಾರದ ಮೇಲೆ ವಿಭಜಿಸಲು, ಭಾರತೀಯ ಸಮಾಜದ ವಿವಿಧ ವರ್ಗಗಳ ನಡುವೆ ದ್ವೇಷವನ್ನು ಸೃಷ್ಟಿಸಲು ಚಾನೆಲ್‌ ಗಳು ವಿಷಯವನ್ನು ಪ್ರಚಾರ ಮಾಡಿದೆ ಎಂದು ಸಚಿವಾಲಯ ಹೇಳಿದೆ. ಅಂತಹ ಮಾಹಿತಿಯು ದೇಶದ ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇತ್ತು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...