alex Certify ಕ್ರಿಕೆಟ್​ ಲೋಕದಲ್ಲಿ ಹಣದ ಪಾತ್ರದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಹಾರ್ದಿಕ್​ ಪಾಂಡ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್​ ಲೋಕದಲ್ಲಿ ಹಣದ ಪಾತ್ರದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಹಾರ್ದಿಕ್​ ಪಾಂಡ್ಯ

ಬರೋಡಾದ ಸಣ್ಣ ಅಪಾರ್ಟ್​ಮೆಂಟ್​ ಒಂದರಲ್ಲಿ ವಾಸವಿದ್ದ ಟೀಂ ಇಂಡಿಯಾ ಆಟಗಾರ ಹಾರ್ದಿಕ್​ ಪಾಂಡ್ಯ ಇಂದು ಮುಂಬೈನ ಐಷಾರಾಮಿ ಮನೆಯಲ್ಲಿ ವಾಸವಿದ್ದಾರೆ ಅಂದರೆ ಅದಕ್ಕೆ ಕ್ರಿಕೆಟ್​ ಕಾರಣ ಎಂದು ಹೇಳಿದರೆ ತಪ್ಪಾಗಲಾರದು. ತಮ್ಮ ಕ್ರಿಕೆಟ್​ ಚಾಕಚಕ್ಯತೆಯಿಂದ ಹಾರ್ದಿಕ್​ ಟೀಂ ಇಂಡಿಯಾದಲ್ಲಿ ಹಾಗೂ ಮುಂಬೈ ಇಂಡಿಯನ್ಸ್​ ತಂಡದಲ್ಲಿ ಪ್ರಮುಖ ಆಟಗಾರ ಎನಿಸಿಕೊಂಡಿದ್ದಾರೆ.

ಕ್ರಿಕೆಟ್​ ಜೀವನದಲ್ಲಿ ಸಾಧನೆಯ ಶಿಖರವನ್ನೇರಿರುವ ಹಾರ್ದಿಕ್​ ಪಾಂಡ್ಯ ತಮ್ಮ ಬಾಲ್ಯದ ಜೀವನವನ್ನು ಹಾಗೂ ತಾವು ಸಾಗಿ ಬಂದ ಹೋರಾಟದ ಹಾದಿ ಹಾಗೂ ತಂದೆಯ ಪರಿಶ್ರಮವನ್ನು ಹಂಚಿಕೊಂಡಿದ್ದಾರೆ.

ಅಮೆರಿಕ ಸೈನ್ಯದ ಜೊತೆ ಕಬ್ಬಡ್ಡಿಯಾಡಿದ ಭಾರತೀಯ ಯೋಧರು; ವಿಡಿಯೋ ವೈರಲ್​

ಇದೇ ವೇಳೆ ಪಾಂಡ್ಯ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಆಟಗಾರರಿಗೆ ನೀಡಲಾಗುವ ಭಾರೀ ಮೊತ್ತದ ಹಣ ಹಾಗೂ ಇದರಿಂದ ಯಾರ್ಯಾರ ಜೀವನ ಹೇಗೆ ಬದಲಾಗಿದೆ ಎಂಬುದನ್ನೂ ವಿವರಿಸಿದ್ದಾರೆ. ಐಪಿಎಲ್​ ಹರಾಜು ಪ್ರಕ್ರಿಯೆ ಮೂಲಕ ನೀಡಲಾಗುವ ಹಣವು ಆಟಗಾರರನ್ನು ವಿಚಲಿತರನ್ನಾಗಿಸುತ್ತದೆಯೇ..? ಆಟಗಾರರು ನಾನು ಇಷ್ಟು ಮೊತ್ತಕ್ಕೆ ಅರ್ಹನಿದ್ದೇನೆ ಎಂದು ಭಾವಿಸಲು ಆರಂಭಿಸುತ್ತಾರೆಯೇ ಎಂದು ಸಂದರ್ಶನದಲ್ಲಿ ಹಾರ್ದಿಕ್​ ಪಾಂಡ್ಯಗೆ ಪ್ರಶ್ನೆಯನ್ನು ಕೇಳಲಾಗಿತ್ತು.

ಇಲ್ಲಿ ಏನು ನಡೆಯುತ್ತಿದೆ ಎಂದು ಅರ್ಥ ಮಾಡಿಕೊಳ್ಳಲು ನೀವು ಸದೃಢವಾದ ತಲೆಯನ್ನು ಹೊಂದಿರಬೇಕು. ನಾನು ಹಾಗು ಕೃನಾಲ್​ ಆ ರೀತಿಯೇ ಇದ್ದೇವೆ. ಅಲ್ಲಿ ಹಣ ಸಿಗುತ್ತೆ ಎಂಬ ಸತ್ಯವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಆದರೆ ನಿಮ್ಮ ಕಾಲು ಎಂದಿಗೂ ನೆಲದ ಮೇಲೆಯೇ ಇರುವಂತೆ ನೋಡಿಕೊಳ್ಳಿ. ನಿಮಗೆ ನಾನು ಆಕಾಶದಲ್ಲಿ ಹಾರುತ್ತಿದ್ದೇನೆ ಎನಿಸಬಹುದು. ಆದರೆ ಕೊನೆಯಲ್ಲಿ ನಿಮ್ಮ ಕಾಲು ಎಂದಿಗೂ ನೆಲದ ಮೇಲೆಯೇ ಇರಬೇಕು. ಹಣ ಒಳ್ಳೆಯದೇ. ಇದು ಅನೇಕ ವಿಚಾರಗಳನ್ನು ಬದಲಾಯಿಸಿಬಿಡುತ್ತೆ. ಇದಕ್ಕೆ ನಾನೇ ಒಂದು ಉತ್ತಮ ಉದಾಹರಣೆ. ನಾನು ತಮಾಷೆ ಮಾಡುತ್ತಿಲ್ಲ. ಆದರೆ ಕ್ರಿಕೆಟ್​ ಅಲ್ಲದೇ ಇದ್ದರೆ ನಾನು ಬಹುಶಃ ಪೆಟ್ರೋಲ್​ ಪಂಪ್​ನಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

ಸಲ್ಮಾನ್ ಖಾನ್ ಮನೆ ಬಾಡಿಗೆ ಕೇಳಿದ್ರೆ ತಲೆ ಸುತ್ತುತ್ತೆ….!

ಅಲ್ಲದೇ ಕ್ರಿಕೆಟ್​ನಲ್ಲಿ ಹಣದ ಪಾತ್ರ ಎಷ್ಟು ಮುಖ್ಯ ಎಂಬುದರ ಬಗ್ಗೆಯೂ ಹಾರ್ದಿಕ್​ ವಿವರಣೆ ನೀಡಿದ್ದಾರೆ. ಆಟಗಾರರು ಸರಿಯಾಗಿ ಆಡಬೇಕು ಅಂದರೆ ಅಲ್ಲಿ ಹಣ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತೆ. ಹಣ ಹೆಚ್ಚಿಗೆ ಸಿಗುತ್ತೆ ಎಂಬ ಕಾರಣಕ್ಕೆ ಆಟಗಾರರು ಕಷ್ಟಪಟ್ಟು ಆಡುತ್ತಾರೆ. ಇದರಿಂದ ಕುಟುಂಬವನ್ನು ಚೆನ್ನಾಗಿ ಇಡಬಹುದು ಎಂಬ ಕನಸು ಎಲ್ಲರಿಗೂ ಇರುತ್ತೆ. ನನ್ನ ಪ್ರಕಾರ ಕ್ರಿಕೆಟ್​ನಲ್ಲಿ ಹಣ ಸಿಗುವುದಿಲ್ಲವಾಗಿದ್ದರೆ ಬಹುಶಃ ಈಗ ಇರುವವರಲ್ಲಿ ಅನೇಕ ಕ್ರಿಕೆಟಿಗರು ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಲೇ ಇರಲಿಲ್ಲ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...