alex Certify ಅಮೆರಿಕ ಸೈನ್ಯದ ಜೊತೆ ಕಬ್ಬಡ್ಡಿಯಾಡಿದ ಭಾರತೀಯ ಯೋಧರು; ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕ ಸೈನ್ಯದ ಜೊತೆ ಕಬ್ಬಡ್ಡಿಯಾಡಿದ ಭಾರತೀಯ ಯೋಧರು; ವಿಡಿಯೋ ವೈರಲ್​

ಇಂಡೋ – ಭಾರತ ಜಂಟಿ ತರಬೇತಿ ವ್ಯಾಯಾಮದ ವೇಳೆ ಭಾರತೀಯ ಹಾಗೂ ಅಮೆರಿಕ ಯೋಧರು ಒಟ್ಟಾಗಿ ಕಬ್ಬಡ್ಡಿ , ಅಮೆರಿಕನ್​ ಫುಟ್​ಬಾಲ್​ ಹಾಗೂ ವಾಲಿಬಾಲ್​ ಆಡಿದ್ದು ಈ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿವೆ. ಅಕ್ಟೋಬರ್​ 16ರಂದು ಐಸ್​ ಬ್ರೇಕಿಂಗ್​ ಚಟುವಟಿಕೆಗಳ ಭಾಗವಾಗಿ ಈ ಆಟಗಳನ್ನು ಆಡಿಸಲಾಗಿತ್ತು.

ಬಾಲ್ಯದ ದಿನಗಳನ್ನು ನೆನಪಿಸುತ್ತೆ ಆನೆ ಮರಿಯ ಈ ಮುದ್ದಾದ ವಿಡಿಯೋ

ಅಮೆರಿಕದ ಅಲಾಸ್ಕಾದ ಜಂಟಿ ಬೇಸ್​ ಎಲ್ಮೆಂಡೋರ್ಫ್​ ರಿಚರ್ಡ್​ ಸನ್​ ಆಂಕರೇಜ್​​ನಲ್ಲಿ ಈ ಸೌಹಾರ್ದ ಪಂದ್ಯವನ್ನು ಆಯೋಜಿಸಲಾಗಿತ್ತು.

ಭಾರತೀಯ ಸೇನೆಯು ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಅಮೆರಿಕ ಹಾಗೂ ಭಾರತೀಯ ಸೈನ್ಯವನ್ನೊಳಗೊಂಡ ನಾಲ್ಕು ಮಿಶ್ರ ತಂಡಗಳು ನಿಜವಾದ ಕ್ರೀಡಾ ಮನೋಭಾವದಿಂದ ಸೌಹಾರ್ದ ಪಂದ್ಯಗಳನ್ನಾಡಿವೆ ಎಂದು ತಿಳಿದು ಬಂದಿದೆ.

ಎರಡೂ ತಂಡಗಳು ಪರಸ್ಪರರ ಆಟಗಳಿಂದ ಕಲಿತಿದ್ದಾರೆ. ಭಾರತೀಯ ಪಡೆಯು ಅಮೆರಿಕ ಫುಟ್​ಬಾಲ್​ನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರೆ ಅಮೆರಿಕ ಯೋಧರು ಕಬ್ಬಡಿಯಲ್ಲೂ ಸಮಾನ ಉತ್ಸಾಹ ತೋರಿದ್ದಾರೆ ಎಂದು ಭಾರತೀಯ ಸೇನೆ ಹೇಳಿದೆ.

— ANI (@ANI) October 17, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...