alex Certify ಸಲ್ಮಾನ್ ಖಾನ್ ಮನೆ ಬಾಡಿಗೆ ಕೇಳಿದ್ರೆ ತಲೆ ಸುತ್ತುತ್ತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಲ್ಮಾನ್ ಖಾನ್ ಮನೆ ಬಾಡಿಗೆ ಕೇಳಿದ್ರೆ ತಲೆ ಸುತ್ತುತ್ತೆ….!

ಬಾಲಿವುಡ್ ನಟ ಸಲ್ಮಾನ್ ಖಾನ್, ಬಾಂದ್ರಾದ ಜನಪ್ರಿಯ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ನಲ್ಲಿ ವಾಸಿಸುತ್ತಾರೆ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಇದಲ್ಲದೆ ಪನ್ವೇಲ್ ಫಾರ್ಮ್ ಹೌಸ್ ನಲ್ಲಿಯೂ ಸಾಕಷ್ಟು ಸಮಯ ಕಳೆಯುತ್ತಾರೆ. ಕೊರೊನಾ ಸಂದರ್ಭದಲ್ಲಿ ಫಾರ್ಮ್ ಹೌಸ್ ನಲ್ಲಿದ್ದ ಸಲ್ಮಾನ್,ಇದಕ್ಕೆ ಅರ್ಪಿತಾ ಫಾರ್ಮ್ಸ್ ಎಂದು ಹೆಸರಿಟ್ಟಿದ್ದಾರೆ. ಇಷ್ಟೇ ಅಲ್ಲ ಮುಂಬೈನಲ್ಲಿ ಹಲವು ಆಸ್ತಿ ಹೊಂದಿರುವ ಸಲ್ಮಾನ್ ಈಗ ಡ್ಯುಪ್ಲೆಕ್ಸ್ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದಾರೆ.

ಸಲ್ಮಾನ್ ಖಾನ್ ಬಾಂದ್ರಾದಲ್ಲಿರುವ ಅವರ ಮನೆ ಬಳಿ ಡ್ಯುಪ್ಲೆಕ್ಸ್ ಬಾಡಿಗೆ ಒಪ್ಪಂದವನ್ನು ಅಂತಿಮಗೊಳಿಸಿದ್ದಾರೆ. ಡ್ಯುಪ್ಲೆಕ್ಸ್ ಬಾಂದ್ರಾದ ಮಕ್ಬಾ ಹೈಟ್ಸ್ ನ 17 ಮತ್ತು 18 ನೇ ಮಹಡಿಯಲ್ಲಿದೆ. ವರದಿಯ ಪ್ರಕಾರ, 11 ತಿಂಗಳಿಗಾಗಿ ಸಲ್ಮಾನ್ ಮನೆ ಬಾಡಿಗೆ ಪಡೆದಿದ್ದಾರಂತೆ. ಎಲ್ಲ ಸೌಲಭ್ಯ ಈ ಮನೆಯಲ್ಲಿದೆ. ಇದಕ್ಕೆ ಪ್ರತಿ ತಿಂಗಳು 8.25 ಲಕ್ಷ ರೂಪಾಯಿ ಬಾಡಿಗೆ ಪಾವತಿ ಮಾಡಲಿದ್ದಾರೆ.

ಸಲ್ಮಾನ್ ಖಾನ್ ಸದ್ಯ ಆಂಟಿಮ್ ಚಿತ್ರದಲ್ಲಿ ಬ್ಯುಸಿಯಿದ್ದಾರೆ. ಚಿತ್ರ ಬಿಡುಗಡೆ ದಿನಾಂಕವನ್ನು ಅವರು ಘೋಷಣೆ ಮಾಡಿದ್ದಾರೆ. ನವೆಂಬರ್ 26 ರಂದು ಚಿತ್ರ ಬಿಡುಗಡೆಯಾಗಲಿದೆ. ಸಲ್ಮಾನ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.  ಟೈಗರ್ 3 ಚಿತ್ರ ಕೂಡ ಸಲ್ಮಾನ್ ಕೈನಲ್ಲಿದೆ. ಮತ್ತೊಮ್ಮೆ ಕತ್ರಿನಾ ಕೈಫ್‌ ಜೊತೆ ಕಾಣಿಸಿಕೊಳ್ಳಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...