alex Certify ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳೆದುಕೊಂಡ ಮಹಿಳೆ; ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿದ ಪೊಲೀಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳೆದುಕೊಂಡ ಮಹಿಳೆ; ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿದ ಪೊಲೀಸ್…!

ಮಹಿಳೆಯೊಬ್ಬರು ಆಟೋ ರಿಕ್ಷಾದಲ್ಲಿ ಪ್ರಯಾಣಿಸುವಾಗ 1.5 ಲಕ್ಷ ರೂಪಾಯಿ ನಗದು ಮತ್ತು ಚಿನ್ನಾಭರಣಗಳಿರುವ ಬ್ಯಾಗ್ ಕಳೆದುಕೊಂಡ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮಹಿಳೆಯ ದೂರಿನ ಮೇರೆಗೆ ಹೈದರಾಬಾದ್‌ನ ಭವಾನಿ ನಗರ ಪೊಲೀಸರು ಕಳೆದುಹೋದ ಬ್ಯಾಗನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿದ್ದಾರೆ.

ಕಳೆದ ಭಾನುವಾರ ಮಹಿಳೆ ತನ್ನ ಬ್ಯಾಗ್ ಅನ್ನು ಕಳೆದುಕೊಂಡಿದ್ದಾರೆ.‌ ಭಾನುವಾರದಂದು, ಮಹಿಳೆಯು ಆಟೋರಿಕ್ಷಾದಲ್ಲಿ ಚಾರ್ಮಿನಾರ್‌ನಿಂದ ಭವಾನಿ ನಗರಕ್ಕೆ ಪ್ರಯಾಣಿಸಿದರು. ಅವರು ರಾತ್ರಿ 8.20 ರ ಸುಮಾರಿಗೆ ಚಾಚಾ ಗ್ಯಾರೇಜ್ ಬಳಿ ಇಳಿದರು, ಆದರೆ ಆತುರದಲ್ಲಿದ್ದ ಅವರು ಆಟೋರಿಕ್ಷಾದಲ್ಲಿ ನಗದು ಮತ್ತು ಚಿನ್ನಾಭರಣಗಳಿದ್ದ ಬ್ಯಾಗ್ ಅನ್ನು ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ಅರಿವಾಗುತ್ತಿದ್ದಂತೆ, ಸುಮಾರು ರಾತ್ರಿ 9:30ರ ಸುಮಾರಿಗೆ ಪೊಲೀಸ್ ಠಾಣೆಗೆ ಬಂದ ಆಕೆ ಬ್ಯಾಗ್ ಕಳೆದುಕೊಂಡಿರುವ ಬಗ್ಗೆ ದೂರು ನೀಡಿದರು ಎಂದು ಠಾಣಾಧಿಕಾರಿಗಳು ತಿಳಿಸಿದ್ದಾರೆ.

ತನ್ನ ಪ್ರಯಾಣಿಕರು ಬೆಲೆಬಾಳುವ ವಸ್ತುಗಳನ್ನು ಒಳಗೊಂಡಿರುವ ಬ್ಯಾಗ್ ಅನ್ನು ತನ್ನ ಆಟೋದಲ್ಲೆ ಮರೆತಿರುವ ಬಗ್ಗೆ ಸ್ವಲ್ಪವೂ ತಿಳಿದಿರದ ಆಟೋರಿಕ್ಷಾ ಚಾಲಕನನ್ನು,‌ ತೀವ್ರಗತಿ ಹಾಗೂ ವ್ಯಾಪಕ ಹುಡುಕಾಟ ನಡೆಸಿ ಪೊಲೀಸರು ಪತ್ತೆಹಚ್ಚಿದ್ದಾರೆ.‌ ಆಟೋ ಚಾಲಕ ಎಂದಿನಂತೆ ತಮ್ಮ ನಿತ್ಯದ ಪ್ರವಾಸಗಳಲ್ಲಿ ನಿರತರಾಗಿದ್ದರು.

ಊಟ ಬಡಿಸಲು ವಿಳಂಬ ಮಾಡಿದ್ದಕ್ಕೆ ಕಲ್ಯಾಣ ಮಂಟಪದಲ್ಲೇ ಮದುವೆ ಮುರಿದುಕೊಂಡ ವರ..!

ಮಹಿಳೆಯ ಕೋರಿಕೆಯ ಮೇರೆಗೆ ಬ್ಯಾಗ್ ಪತ್ತೆ ಹಚ್ಚಲು ಎರಡು ತಂಡಗಳು ಕಾರ್ಯನಿರ್ವಹಿಸಿದವು. ವ್ಯಾಪಕ ಮತ್ತು ತ್ವರಿತ ಕಾರ್ಯಾಚರಣೆಯು ಆಟೋರಿಕ್ಷಾ ಚಾಲಕನನ್ನ ಹುಡುಕಲು ಸಹಾಯ ಮಾಡಿತು.‌ ತಕ್ಷಣವೇ ಕಾರ್ಯನಿರತರಾದ ಎರಡೂ ತಂಡಗಳು ತನಿಖೆ ಶುರು ಹಚ್ಚಿಕೊಂಡರು.‌ ಮೊದಲು ಚಾಚಾ ಗ್ಯಾರೇಜ್ ಮತ್ತು ಸುತ್ತಮುತ್ತಲಿನ ಸಿಸಿಟಿವಿ ಫುಟೇಜ್ ಮೂಲಕ ಆಟೋ ಚಾಲಕನ ಮಾಹಿತಿ ಪಡೆಯಲಾಯಿತು.

ನಂತರ ಆತನ ಆಟೋರಿಕ್ಷಾದ ನೋಂದಣಿ ಸಂಖ್ಯೆ ಮೂಲಕ ಚಾಲಕನ ವಿಳಾಸ,‌‌ ನಂಬರ್ ಸೇರಿದಂತೆ ಎಲ್ಲಾ ಮಾಹಿತಿ ಕಲೆ ಹಾಕಲಾಯ್ತು. ಆದರೆ ಫೋನ್ ಮಾಡಿದಾಗ ಆತನ ನಂಬರ್ ಸ್ವಿಚ್ ಆಫ್ ಬರುತ್ತಿತ್ತು.‌ ಇನ್ನು ಆತನ ವಿಳಾಸ ಹಳೆಯದಾಗಿತ್ತು. ಈ ಸಂದರ್ಭದಲ್ಲಿ ಆಟೋರಿಕ್ಷಾ ಚಾಲಕರ ಸಂಘದ ಸದಸ್ಯರನ್ನು ಸಂಪರ್ಕಿಸಿದ ಪೊಲೀಸರು ಆಟೋರಿಕ್ಷಾವನ್ನು ರಾತ್ರಿ 11.30 ರ ಸುಮಾರಿಗೆ ಪತ್ತೆಹಚ್ಚಿದ್ದಾರೆ. ತನ್ಮ ನಿತ್ಯದ ಪ್ರವಾಸಗಳಲ್ಲಿ ನಿರತರಾಗಿದ್ದ ಅವರಿಗೆ ಈ ಬಗ್ಗೆ ಸಣ್ಣ ಸುಳಿವು ಇರಲಿಲ್ಲ. ಇನ್ನು ಆಟೋದಲ್ಲಿದ್ದ ಬೆಲೆಬಾಳುವ ವಸ್ತು ಹಾಗೂ ನಗದನ್ನು ಮಹಿಳೆಗೆ ಹಸ್ತಾಂತರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...