alex Certify ಅನ್ಯಜಾತಿ ವಿವಾಹ: ಕುಟುಂಬಸ್ಥರಿಂದಲೇ ಕೊಲೆಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ- ಸಿಜೆಐ ಕಳವಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನ್ಯಜಾತಿ ವಿವಾಹ: ಕುಟುಂಬಸ್ಥರಿಂದಲೇ ಕೊಲೆಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ- ಸಿಜೆಐ ಕಳವಳ

ಮುಂಬೈ: ಮಕ್ಕಳು ತಮ್ಮ ಇಷ್ಟಕ್ಕೆ ಬಂದವರನ್ನು ಮದುವೆಯಾಗುತ್ತಿದ್ದಾರೆ ಎನ್ನುವ ಕಾರಣಕ್ಕೆ ಕೊಲೆಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ ಎಂದು ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಕಳವಳ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಮರ್ಯಾದಾ ಹತ್ಯೆ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಬೇರೆ ಜಾತಿಯವರನ್ನು ಪ್ರೀತಿಸಿ ಮದುವೆಯಾಗುತ್ತಾರೆ ಅಥವಾ ಕುಟುಂಬಕ್ಕೆ ವಿರುದ್ಧವಾಗಿ ಮದುವೆಯಾಗುತ್ತಾರೆ ಎನ್ನುವ ಕಾರಣಕ್ಕೆ ಭಾರತದಲ್ಲಿ ನೂರಾರು ಯುವ ಜನರು ಕೊಲೆಯಾಗುತ್ತಿದ್ದಾರೆ ಎಂದು ಅವರು ಹೇಳಿದರು.

ಮುಂಬೈನಲ್ಲಿ ಶನಿವಾರ ಬಾಂಬೆ ವಕೀಲರ ಪರಿಷತ್ತು ಆಯೋಜಿಸಿದ್ದ ಕಾನೂನು ಮತ್ತು ನೈತಿಕತೆ ಕುರಿತ ಅಶೋಕ್ ದೇಸಾಯಿ ಸ್ಮಾರಕ ಉಪನ್ಯಾಸದಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು. 1991 ರಲ್ಲಿ ಉತ್ತರ ಪ್ರದೇಶದಲ್ಲಿ 15 ವರ್ಷದ ಬಾಲಕಿಯನ್ನು ಆಕೆಯ ಪೋಷಕರು ಹೇಗೆ ಕೊಂದರು ಎಂಬ ಬಗ್ಗೆ ಮುಖ್ಯನ್ಯಾಯಮೂರ್ತಿಗಳು ವಿವರಿಸಿದರು.

“ಈ ಪ್ರಕರಣದಲ್ಲಿ ಗ್ರಾಮಸ್ಥರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಆದರೆ ಅವರಿಗೆ ಅವರು ತೆಗೆದುಕೊಂಡ ಕ್ರಮ ಸರಿಯಾಗಿದೆ ಎಂದು ಭಾವಿಸುತ್ತಾರೆ, ತಾವು ವಾಸಿಸುತ್ತಿದ್ದ ಆ ಸಮಾಜದ ನೀತಿ ಸಂಹಿತೆಯನ್ನು ಪಾಲಿಸಿದ್ದೇವೆ ಎಂದುಕೊಳ್ಳುತ್ತಾರೆ. ಆದರೆ, ಇದು ತರ್ಕಬದ್ಧ ವ್ಯಕ್ತಿಗಳು ಮುಂದಿಡುವ ನೀತಿ ಸಂಹಿತೆಯೇ?” ಎಂದು ಪ್ರಶ್ನಿಸಿದರು.

“ಕಟ್ಟಕಡೆಯ ಸಮುದಾಯಗಳಿಗೆ ಸೇರಿದ ಜನರಿಗೆ ತಮ್ಮ ಉಳಿವಿಗಾಗಿ ಪ್ರಬಲ ಸಂಸ್ಕೃತಿಗೆ ಶರಣಾಗುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ. ನೀತಿ ಸಂಹಿತೆ ಅಥವಾ ನೈತಿಕತೆಯನ್ನು ಯಾರು ನಿರ್ಧರಿಸುತ್ತಾರೆ? ದುರ್ಬಲರನ್ನು ಮೀರಿಸುವ ಪ್ರಬಲ ಗುಂಪುಗಳು ನಿರ್ಧರಿಸುತ್ತವೆ. ದುರ್ಬಲ ಗುಂಪುಗಳನ್ನು ಸಾಮಾಜಿಕ ರಚನೆಯ ಕೆಳಭಾಗದಲ್ಲಿ ಇರಿಸಲಾಗುತ್ತದೆ” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...