alex Certify ತಂಬಾಕು ಸೇವನೆ ಆರಂಭಿಸಿ 12,300 ವರ್ಷವಂತೆ…! ವಿಜ್ಞಾನಿಗಳ ಹೊಸ ಪುರಾವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂಬಾಕು ಸೇವನೆ ಆರಂಭಿಸಿ 12,300 ವರ್ಷವಂತೆ…! ವಿಜ್ಞಾನಿಗಳ ಹೊಸ ಪುರಾವೆ

ತಂಬಾಕನ್ನು ಸೇವಿಸಲು ಆರಂಭಿಸಿ ಅಂದಾಜು 12,300 ವರ್ಷ ಆಗಿರಬಹುದೆಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ಬಗ್ಗೆ ಪುರಾವೆಯೊಂದನ್ನು ಹುಡುಕಿದ್ದಾರೆ. ಉತ್ತರ ಅಮೇರಿಕಾದ ಒಳನಾಡಿನ ಉತಾಹ್ ನ ಸಾಲ್ಟ್ ಲೇಕ್ ಮರುಭೂಮಿಯಲ್ಲಿ ಅಲ್ಲಿನ ನಿವಾಸಿಗಳು ಇದನ್ನು ಬಳಸಿದ ಬಗ್ಗೆ ಅಧ್ಯಯನ ನಡೆಸಿದ್ದಾರೆ.

ಬೆರಗು ಹುಟ್ಟಿಸುತ್ತವೆ ವಿಶಿಷ್ಟ ರೀತಿಯ ಈ ಗಗನಚುಂಬಿ ಕಟ್ಟಡಗಳು

ಕಾಡಿನಲ್ಲಿ ತಂಬಾಕು ಗಿಡದ ಸುಟ್ಟ ಬೀಜಗಳನ್ನು ಸಂಶೋಧಕರು ಪತ್ತೆ ಮಾಡಿದ್ದು, ಇದರ ಜತೆಗೆ ಬಾತುಕೋಳಿ ಮೂಳೆ ಹಾಗೂ ಕಲ್ಲಿನ ಪಳೆಯುಳಿಕೆ ಅಲ್ಲಿ ಕಾಣಿಸಿದೆ.

ಉತಾಹ್ ನಲ್ಲಿ ಅಲೆಮಾರಿ ಬೇಟೆಗಾರರು ಇದ್ದಿರಬಹುದು. ಅವರು ನಿಕೋಟಿನ್ ಅಂಶ ಇರುವ ತಂಬಾಕು ಸಸ್ಯದ ನಾರನ್ನು ಸೇವಿಸಿರಬಹುದು ಎಂದು ಹೇಳಲಾಗುತ್ತಿದೆ. ಬಳಿಕ ಐದು ಶತಮಾನಗಳ ಹಿಂದೆ ಯುರೋಪಿಯನ್ನರು ವಿಶ್ವದಾದ್ಯಂತ ಸಂಚರಿಸಿದ್ದರಿಂದ ಈ ತಂಬಾಕು ಸೇವನೆ ಎಲ್ಲೆಡೆ ಹರಡಿಕೊಂಡಿದೆ ಎಂದು ಅಂದಾಜಿಸಲಾಗಿದೆ.

BIG BREAKING: ದೇಶದಲ್ಲಿ ತಗ್ಗಿದ ಕೊರೊನಾ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ 15,823 ಜನರಲ್ಲಿ ಸೋಂಕು ಪತ್ತೆ

ಜಾಗತಿಕವಾಗಿ ತಂಬಾಕು ಎಂದರೆ ಮಾದಕ ಸಸ್ಯಗಳ ರಾಜನಿದ್ದಂತೆ. ಇದಕ್ಕೆ ಸಾಂಸ್ಕೃತಿಕ ಸಂಪರ್ಕವೂ ಇದೆ ಎಂದು ಪುರತತ್ವ ಶಾಸ್ತ್ರಜ್ಞ ನೆವಾಡಾದ ಫಾರ್ ವೆಸ್ಟರ್ನ್ ಆಂಥ್ರೋಪೋಲಾಜಿಕ್ ರಿಸರ್ಚ್ ಗ್ರೂಪ್ ನ ಡಾರನ್ ಡ್ಯೂಕ್ ಅಭಿಪ್ರಾಯಪಟ್ಟಿದ್ದಾರೆ. ಈ ಅಂಶವನ್ನು ನೇಚರ್ ಹ್ಯೂಮನ್ ಬಿಹೇವಿಯರ್ ಜರ್ನಲ್ ನಲ್ಲಿ ಪ್ರಸ್ತಾಪಿಸಿದ್ದಾರೆ.

ನಿಕೊಟಿಯಾನಾ ಆಟೆನ್ಯುವಾಟಾ ಎಂಬ ಹೆಸರಿನ ಬೀಜಗಳು ಮರುಭೂಮಿಯಲ್ಲಿ ಬೆಳೆಯುತ್ತದೆ. ಉತ್ತರ ಅಮೇರಿಕಾದ ಒಳನಾಡಿನ ಉತಾಹ್ ನ ಸಾಲ್ಟ್ ಲೇಕ್ ಮರುಭೂಮಿಯಲ್ಲಿ ಈಗಲೂ ಬೆಳೆಯುತ್ತದೆ. ಈ ತಳಿಯನ್ನು ಯಾರೂ ಬೆಳೆಸುವುದಿಲ್ಲ. ಈ ಪ್ರದೇಶದಲ್ಲಿ ಬೆಳೆಯುತ್ತದೆ, ಜನ ಬಳಸುತ್ತಾರೆ ಎಂದು ವರದಿಯಲ್ಲಿ ದಾಖಲಿಸಲಾಗಿದೆ.

ಒಲೆಗಳ ಅವಶೇಷ, ಬೇಟೆಗಾರರ ಕುರಿತಂತೆ ಕೆಲವು ಸಂಗತಿಗಳನ್ನು ಅವರು ಉಲ್ಲೇಖಿಸಿದ್ದಾರೆ. ಮುಂದಿನ ಅನ್ವೇಷಣೆಗೆ ಹೆಚ್ಚಿನ ದಾಖಲೆಯೂ ಸಿಕ್ಕಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...