alex Certify ಬೆರಗು ಹುಟ್ಟಿಸುತ್ತವೆ ವಿಶಿಷ್ಟ ರೀತಿಯ ಈ ಗಗನಚುಂಬಿ ಕಟ್ಟಡಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗು ಹುಟ್ಟಿಸುತ್ತವೆ ವಿಶಿಷ್ಟ ರೀತಿಯ ಈ ಗಗನಚುಂಬಿ ಕಟ್ಟಡಗಳು

10 Surprising Facts About Ambani's 'Antilia', the World's Most Expensive  House - Celebrity, Cosmopolitan India

ಜಗತ್ತಿನಲ್ಲಿ ಅದೆಷ್ಟೋ ಅದ್ಭುತಗಳಿವೆ. ನಮ್ಮನ್ನು ನಿಬ್ಬೆರಗಾಗಿಸೋ ಸಂಗತಿಗಳಿವೆ. ವಿಶ್ವದ ವಿಚಿತ್ರವಾದ ಅಭೂತಪೂರ್ವ ಕಟ್ಟಡಗಳ ಮಾಹಿತಿ ಇಲ್ಲಿದೆ.

ಮುಂಬೈನಲ್ಲಿರೋ ಮುಖೇಶ್ ಅಂಬಾನಿ ಅವರ ಮನೆ ಸುಮಾರು ನೂರು ಕೋಟಿ ಬೆಲೆಬಾಳುವ  ಅಂಟೀಲಿಯಾ. ಈ ಗಗನಚುಂಬಿ ಕಟ್ಟಡದಲ್ಲಿ ಮೂರು ಹೆಲಿಪ್ಯಾಡ್, 160 ಕಾರ್ ಗಳಿಗಾಗುವ ಪಾರ್ಕಿಂಗ್ ಜಾಗ ಹಾಗೂ 600 ಕೆಲಸಗಾರರಿದ್ದಾರೆ.

ಬ್ಯಾಂಕಾಕ್ ನಲ್ಲಿರೋ ಎಲಿಫಂಟ್ ಬಿಲ್ಡಿಂಗ್ ಇನ್ನೊಂದು ಅದ್ಭುತ ಕಟ್ಟಡ. ಆನೆಯ ಆಕಾರದಲ್ಲಿರೋ ಈ ಕಟ್ಟಡದಲ್ಲಿ 32 ಆಫೀಸ್ ಸ್ಪೇಸ್, ಶಾಪ್ ಗಳು ಹಾಗೂ ಲಕ್ಸುರಿ ಅಪಾರ್ಟ್ ಮೆಂಟ್ ಇವೆ.

ಒಸಾಕಾದಲ್ಲಿರೋ ಉಮೇಡ ಸ್ಕೈ ಬಿಲ್ಡಿಂಗ್ ಮತ್ತೊಂದು ಅಚ್ಚರಿ. 173 ಮೀಟರ್ ಉದ್ದದ ಈ ಕಟ್ಟಡದಲ್ಲಿ ಎರಡು ಟವರ್ ಗಳು 39ನೇ ಫ್ಲೋರ್ ನಲ್ಲಿ ಕೂಡುತ್ತವೆ.

ಸೌದಿ ಅರೇಬಿಯಾದ ರಿಯದ್ ನಲ್ಲಿರೋ ಕಿಂಗ್ಡಮ್ ಸೆಂಟರ್ ಸುಮಾರು 100 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರೋ ಈ ಕಟ್ಟಡದಲ್ಲಿ ಶಾಪಿಂಗ್ ಮಾಲ್, ಹೊಟೇಲ್, ಅಪಾರ್ಟ್ ಮೆಂಟ್ ಪೂಟ್ ಸ್ಕೈಬ್ರಿಡ್ಜ್ ಗಳೂ ಇವೆ.

ಲಂಡನ್ ನಲ್ಲಿರುವ ದ ಶಾರ್ಡ್ ಕಟ್ಟಡ ವಿಶಿಷ್ಟವಾದದ್ದು. 95 ಅಂತಸ್ತಿನ ಈ ಕಟ್ಟಡವನ್ನು ಇಟಾಲಿಯನ್ ವಾಸ್ತು ಶಿಲ್ಪಿ ರೆಂಜೋ ಪಿಯಾನೋಯಿಸ್ ನಿರ್ಮಿಸಿದ್ದಾರೆ. ಇದು ಲಂಡನ್ ನಲ್ಲಿಯೇ ಅತ್ಯಂತ ಎತ್ತರದ ಕಟ್ಟಡ.

ಚಿಕಾಗೋದಲ್ಲಿರುವ ಅಕ್ವಾ ಕಟ್ಟಡ 82 ಅಂತಸ್ತಿನದಾಗಿದ್ದು ಇದನ್ನು ಡಿಸೈನ್ ಮಾಡಿದ್ದು ಜಿನ್ನೆ ಗಂಗ್ ಅನ್ನೋ ಮಹಿಳೆ.

ಅಬುಧಾಬಿಯಲ್ಲಿರೋ ಎಐಡಿಯರ್ ಹೆಡ್ಕ್ವಾಟರ್ಸ್ ಕಾಯಿನ್ ಬಿಲ್ಡಿಂಗ್ ಅಂತಲೇ ಪ್ರಸಿದ್ಧಿ. ಅಲ್ಲದೇ ಇದು ವಿಶ್ವದ ಮೊದಲ ಗೋಲಾಕಾರದ ಕಟ್ಟಡ.

ತೈವಾನ್ ನ ತೈಪಿ 101 ಕಟ್ಟಡ ಚಿತ್ತಾಕರ್ಷಕ. 1.8 ಬಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗಿರೋ ಈ ಕಟ್ಟಡ ವಿಶ್ವದಲ್ಲೇ ಅತ್ಯಂತ ವೇಗದ ಎಲಿವೇಟರ್ ಹೊಂದಿದೆ.

ಹಾಂಕಾಂಗ್ ನ ಲಿಪ್ಪೋ ಸೆಂಟರ್ ಕೂಡ ವಿಶಿಷ್ಟವಾಗಿದ್ದು, ಇದನ್ನು ಅಮೆರಿಕದ ವಾಸ್ತು ಶಿಲ್ಪಿ ಪೌಲ್ ರುಡೋಲ್ಫ್ ರಚಿಸಿದ್ದಾರೆ.

ಇನ್ನು ಪೋರ್ಸ್ಚೆ ಡಿಸೈನ್ ಟವರ್ ಮಿಯಾಮಿಯಲ್ಲಿದ್ದು, ಇದು ರೆಸಿಡೆನ್ಶಿಯಲ್ ಟವರ್. 60 ಅಂತಸ್ತಿನ ಈ ಕಟ್ಟಡ. ರೊಬೋಟಿಕ್ ಪಾರ್ಕಿಂಗ್ ಗ್ಯಾರೇಜ್ ಇದರ ವಿಶೇಷತೆ.

ಲಾಸ್ ವೆಗಾಸ್ ನಲ್ಲಿರುವ ಕಾಸ್ಮೋಪೊಲಿಟನ್ ಕಟ್ಟಡ. ಎರಡು ಟವರ್ ಹೊಂದಿರುವ ಈ ಕಟ್ಟಡ ಲಕ್ಸುರಿ ರೆಸಾರ್ಟ್ ಹಾಗೂ ಕ್ಯಾಸಿನೋ ಹೋಟೆಲ್ ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...