alex Certify ಮನೆ ಬಾಗಿಲಲ್ಲಿದ್ದ ಅನಿರೀಕ್ಷಿತ ಅತಿಥಿ ಕಂಡು ಬೆಚ್ಚಿಬಿದ್ದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಬಾಗಿಲಲ್ಲಿದ್ದ ಅನಿರೀಕ್ಷಿತ ಅತಿಥಿ ಕಂಡು ಬೆಚ್ಚಿಬಿದ್ದ ಜನ

ಬೆಳ್ಳಂಬೆಳಗ್ಗೆ ಮನೆ ಬಾಗಿಲು ತೆರೆದಾಗ ಮೊಸಳೆಯನ್ನ ಕಂಡ ಮನೆಯವರು ಶಾಕ್​ ಆದ ಘಟನೆ ಶ್ರೀಲಂಕಾದಲ್ಲಿ ನಡೆದಿದೆ.

ಸುಮಾರು 8 ಅಡಿ ಉದ್ದದ ಮೊಸಳೆಯು ಶ್ರೀಲಂಕಾದಲ್ಲಿರುವ ಅನುರಾಧಪುರದಲ್ಲಿರುವ ಮನೆಯೊಂದರ ಎದುರುಗಡೆ ಕಾಣಿಸಿಕೊಂಡಿದೆ.

ವನ್ಯಜೀವಿ ಸಂರಕ್ಷಣಾ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಅಧಿಕಾರಿಗಳು ಮೊಸಳೆಯನ್ನ ಅಲ್ಲಿಂದ ಸ್ಥಳಾಂತರಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ ಮೊಸಳೆ ಮಾತ್ರ ಮನೆಯ ಅಂಗಳದಿಂದ ಎದ್ದು ಹೋಗಲು ಸುತಾರಾಂ ತಯಾರಿರಲಿಲ್ಲ.

ಈ ವಿಡಿಯೋವನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಲಾಗಿದೆ. ಕೋಲುಗಳನ್ನ ಬಳಸಿ ಮೊಸಳೆಯನ್ನ ಸೆರೆ ಹಿಡಿಯಲು ಯತ್ನಿಸಲಾಯ್ತು. ಆದರೆ ಮೊಸಳೆ ಬಾಯಿ ತೆರೆಯುತ್ತಿದ್ದಂತೆಯೇ ಎಲ್ಲರೂ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ . ಮೊಸಳೆಯ ಮುಖಕ್ಕೆ ಬಟ್ಟೆಯನ್ನ ಹಾಕಿದ್ದಾರೆ. ಕೊನೆಗೂ ಮೊಸಳೆಯನ್ನ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...