alex Certify ಬಿಕಿನಿ ತೊಟ್ಟ ಫೋಟೊ ಹಾಕಿ ಎಂಬ ಫ್ಯಾನ್ಸ್ ಒತ್ತಾಯಕ್ಕೆ ನಟಿ ಸೋನಾಕ್ಷಿಯಿಂದ ಜಾಣ ಉತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಕಿನಿ ತೊಟ್ಟ ಫೋಟೊ ಹಾಕಿ ಎಂಬ ಫ್ಯಾನ್ಸ್ ಒತ್ತಾಯಕ್ಕೆ ನಟಿ ಸೋನಾಕ್ಷಿಯಿಂದ ಜಾಣ ಉತ್ತರ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರು ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು. ಇದು ಅವರ ಸಿನಿ ಬದುಕಿನ ಕುರಿತ ಚರ್ಚೆ ಆಗಿತ್ತು. ಹಲವು ಅಭಿಮಾನಿಗಳು ಥರಾವರಿ ಪ್ರಶ್ನೆಗಳನ್ನು ಸೋನಾಕ್ಷಿ ಎದುರಿಗೆ ಇರಿಸಿದರು.

ಎಲ್ಲದಕ್ಕೂ ಸಮಾಧಾನವಾಗಿಯೇ ಉತ್ತರಿಸುತ್ತಿದ್ದ ನಟಿಯ ಎದುರು, ಅಭಿಮಾನಿಯೊಬ್ಬ ‘ಬಿಕಿನಿಯ’ ಫೋಟೊವೊಂದು ಹಾಕಿ ನೋಡೋಣ ಎಂದು ಕಣ್ಣು ಅರಳಿಸಿ ಕಾಯುತ್ತಾ ಕುಳಿತ.

ತಮ್ಮ ಸಂತಸದ ಹಿಂದಿನ ಸಿಕ್ರೇಟ್​ ರಿವೀಲ್​ ಮಾಡಿದ ನಟಿ ಸೋನಾಕ್ಷಿ ಸಿನ್ಹಾ

ಜಾಣೆಯಾದ ಸೋನಾಕ್ಷಿ, ಕೂಡಲೇ ಇಂಟರ್‍ನೆಟ್‍ನಿಂದ ಬಿಕಿನಿ ಉಡುಗೆಯ ಒಂದು ಫೋಟೊ ಎಳೆದು ಪೋಸ್ಟ್ ಮಾಡಿದರು. ಸೋನಾಕ್ಷಿಯ ಬಿಕಿನಿ ಫೋಟೊ ನಿರೀಕ್ಷೆಯಲ್ಲಿದ್ದ ತರಲೆ ಅಭಿಮಾನಿಯ ಆಸೆ ಮೇಲೆ ತಣ್ಣೀರು ಬಿದ್ದಿತು. ಮತ್ತೊಬ್ಬ ತರಲೆ ಅಭಿಮಾನಿಯು ತೂಕ ಇಳಿಸಬೇಕಿದೆ, ಏನು ತಿನ್ನಲಿ ಎಂದು ಕೇಳಿದಾಗ ನಟಿಯು ‘ಗಾಳಿಯ ಸೇವನೆ ಮಾಡುತ್ತಿರಿ ಸಾಕು’ ಎಂದು ಹಾಸ್ಯಚಟಾಕಿ ಹಾರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...