alex Certify Google ಸರ್ಚ್ ರಿಸಲ್ಟ್ ನಿಂದ ವೈಯಕ್ತಿಕ‌ ಖಾಸಗಿ ಮಾಹಿತಿ ತೆಗೆದುಹಾಕಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Google ಸರ್ಚ್ ರಿಸಲ್ಟ್ ನಿಂದ ವೈಯಕ್ತಿಕ‌ ಖಾಸಗಿ ಮಾಹಿತಿ ತೆಗೆದುಹಾಕಲು ಇಲ್ಲಿದೆ ಟಿಪ್ಸ್

ಗುರುತಿನ ಕಳ್ಳತನ, ಆರ್ಥಿಕ ವಂಚನೆ, ಅಪಾಯಕಾರಿ ನೇರ ಸಂಪರ್ಕಗಳು ಉಂಟಾಗಲು ಸಾಧ್ಯತೆ ಇರುವ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು (PII) ತೆಗೆದುಹಾಕುವುದಾಗಿ ಗೂಗಲ್ ಘೋಷಿಸಿದೆ. ಈ ಸಂಬಂಧ ಪ್ರತಿಯೊಂದು ಮನವಿಯನ್ನು ನಿರ್ದಿಷ್ಟ ಮಾನದಂಡಗಳ ಆಧಾರದಲ್ಲಿ ಗೂಗಲ್ ಮೌಲ್ಯಮಾಪನ ಮಾಡಲಿದೆ.

ಪ್ರಕ್ರಿಯೆಯ ಭಾಗವಾಗಿ, ಕಂಪನಿಯು ಒದಗಿಸಿರುವ ಕೆಲವು URLಗಳನ್ನು ತೆಗೆದುಹಾಕಬಹುದು. PII ಗಳನ್ನು ಸರ್ಚ್ ರಿಸಲ್ಟ್ಸ್ ನಿಂದ ಮಾತ್ರ ತೆಗೆದುಹಾಕಲಾಗುತ್ತದೆ, ಇಂಟರ್ನೆಟ್‌ನಿಂದ ಅಲ್ಲ ಎಂಬುದನ್ನು ನೆನಪಿಡಿ.

• ರಹಸ್ಯ ಸರ್ಕಾರಿ ಗುರುತು (ID) ಸಂಖ್ಯೆಗಳು,

• ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್ ಸಂಖ್ಯೆಗಳು,

• ಸಹಿ, ಐಡಿ ದಾಖಲೆಗಳ ಚಿತ್ರಗಳು,

• ವೈದ್ಯಕೀಯ ದಾಖಲೆಗಳಂತಹ ತೀರಾ ವೈಯಕ್ತಿಕ, ನಿರ್ಬಂಧಿತ ಮತ್ತು ಅಧಿಕೃತ ದಾಖಲೆಗಳು.

• ವೈಯಕ್ತಿಕ ಸಂಪರ್ಕ ಮಾಹಿತಿ, ವಿಳಾಸ, ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ವಿಳಾಸಗಳು

• ಲಾಗಿನ್ ರುಜುವಾತುಗಳು

ಡಾಕ್ಸಿಂಗ್ ವಿಷಯಗಳನ್ನು ತೆಗೆಯಲು ಅಗತ್ಯಗಳು

• ನಿಮ್ಮ ಸಂಪರ್ಕ ಸಂಖ್ಯೆ ಹಾಲಿ ಇರಬೇಕು

• ಸ್ಪಷ್ಟವಾದ ಅಥವಾ ಸೂಚ್ಯವಾದ ಬೆದರಿಕೆಗಳಿರಬೇಕು

• ಅಪಾಯ ಅಥವಾ ದೌರ್ಜನ್ಯಕ್ಕೆ ಕಾರಣವಾಗುವ ಸ್ಪಷ್ಟವಾದ ಅಥವಾ ಸೂಚ್ಯವಾದ ಕರೆಗಳು ಬಂದಿರಬೇಕು.

Google Search ನಿಂದ ವೈಯಕ್ತಿಕ ಮಾಹಿತಿ ತೆಗೆಯುವಂತೆ ವ್ಯಕ್ತಿಯು ಸ್ವತಃ ಅಥವಾ ಆತನ ಅಧಿಕೃತ ಪ್ರತಿನಿಧಿ. ಮನವಿ ಮಾಡಬಹುದು

• PII or doxxing ತೆಗೆದುಹಾಕುವ ಮನವಿಯನ್ನು ಸಲ್ಲಿಸುವ ನಮೂನೆಯನ್ನು ತೆರೆಯಲು ಈ ಲಿಂಕ್ ಕ್ಲಿಕ್ ಮಾಡಿ: (https://support.google.com/websearch/troubleshooter/9685456#ts=2889054%2C2889099).

ಇಲ್ಲಿ ಮೂರು ಮುಖ್ಯ ಪ್ರಶ್ನೆಗಳನ್ನು ನೀವು ಉತ್ತರಿಸಬೇಕಾಗುವುದು

• ನೀವು ಏನು ಮಾಡಲು ಬಯಸುತ್ತೀರಿ ?

• ನೀವು ತೆಗೆಯಲು ಬಯಸುವ ಮಾಹಿತಿಯನ್ನು ಎಲ್ಲಿ ನೋಡಿದಿರಿ ?

• ನೀವು ತೆಗೆದುಹಾಕಲು ಬಯಸುವ ಮಾಹಿತಿ ಯಾವುದು ?

• ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ. ಬಳಿಕ ನಿಮ್ಮ ವೈಯಕ್ತಿಕ ಮಾಹಿತಿಯಾದ ಇಮೇಲ್ ವಿಳಾಸ, ದೂರವಾಣಿ ಸಂಖ್ಯೆ, ಪೂರ್ಣ ಹೆಸರು ನಮೂದಿಸಲು ಕೇಳಲಾಗುವುದು.

ಮನವಿ ಸಲ್ಲಿಸಿದ ಬಳಿಕ ನೀಡಲಾಗಿರುವ ಇಮೇಲ್ ವಿಳಾಸದಲ್ಲಿ ದೃಢೀಕರಣಕ್ಕಾಗಿ ಸ್ವಯಂಚಾಲಿತ ಸಂದೇಶ ಬರುವುದು. ಬಳಿಕ, ಮನವಿಯು ಮಾನದಂಡಗಳ ಅನುಸಾರವಾಗಿದೆಯೇ ಎಂದು ಗೂಗಲ್ ಮೌಲ್ಯಮಾಪನ ಮಾಡುವುದು. ಕೆಲವು ಪ್ರಕರಣಗಳಲ್ಲಿ ಇನ್ನಷ್ಟು ಮಾಹಿತಿ ಸಂಗ್ರಹಿಸುವುದು. ಎಲ್ಲವೂ ಪೂರ್ಣಗೊಂಡ ಮೇಲೆ ಒಂದು ಇಮೇಲ್ ಸಂದೇಶವನ್ನು ನೀವು ಸ್ವೀಕರಿಸುವಿರಿ. ಮಾನದಂಡಗಳನ್ನು ಪೂರೈಸದಿದ್ದರೆ ನಿಮ್ಮ ಮನವಿಯನ್ನು ಪುರಸ್ಕರಿಸಲಾಗುವುದಿಲ್ಲ. ಇದಕ್ಕಾಗಿ ವಿವರವನ್ನೂ ಒದಗಿಸಲಾಗುವುದು. ನಿಮ್ಮ ಪ್ರಕರಣವನ್ನು ಬೆಂಬಲಿಸಲು ಆಧಾರಗಳಿದ್ದರೆ, ನೀವು ವಿನಂತಿಯನ್ನು ಮರುಸಲ್ಲಿಕೆ ಮಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...