alex Certify ವಾಟ್ಸಾಪ್​ ಮೂಲಕ​ ʼಟೀಂ ಇಂಡಿಯಾʼ ಜೊತೆ ಸಂಪರ್ಕ ಸಾಧಿಸೋದು ಹೇಗೆ ? ಇಲ್ಲಿದೆ ಸಿಂಪಲ್​ ಟಿಪ್ಸ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್​ ಮೂಲಕ​ ʼಟೀಂ ಇಂಡಿಯಾʼ ಜೊತೆ ಸಂಪರ್ಕ ಸಾಧಿಸೋದು ಹೇಗೆ ? ಇಲ್ಲಿದೆ ಸಿಂಪಲ್​ ಟಿಪ್ಸ್​

ಇಷ್ಟು ದಿನಗಳ ಕಾಲ ಕೇವಲ ವೈಯಕ್ತಿಕ ಚಾಟ್​ಗೆ ಸೀಮಿತವಾಗಿದ್ದ ವಾಟ್ಸಾಪ್​ ಇದೀಗ ತನ್ನ ಬಳಕೆದಾರರಿಗೆ ವಾಟ್ಸಾಪ್ ಚಾನೆಲ್​ಗಳ ವೈಶಿಷ್ಟ್ಯವನ್ನು ಪರಿಚಯಗೊಳಿಸಿದೆ.

ಈ ಚಾನೆಲ್​ ಮೂಲಕ ಜನರು ತಾವು ಇಷ್ಟಪಡುವ ವ್ಯಕ್ತಿಯ ಬಗ್ಗೆ ಮಾಹಿತಿಗಳನ್ನು ವೈಯಕ್ತಿಕ ಚಾಟ್​​ನಲ್ಲಿ ಪಡೆಯಬಹುದಾಗಿದೆ. ವಾಟ್ಸಾಪ್​ ಚಾನೆಲ್​ ಮೂಲಕ ಖಾಸಗಿಯಾಗಿ ಪ್ರಚಾರ ಕಾರ್ಯವನ್ನು ನಡೆಸುವ ಗುರಿ ಹೊಂದಿದದ್ದೇವೆ ಎಂದು ವಾಟ್ಸಾಪ್​ ಮಾಲೀಕತ್ವದ ಮೆಟಾ ಕಂಪನಿ ಹೇಳಿದೆ.

ವಾಟ್ಸಾಪ್​ ಚಾನೆಲ್​ ಎಂದರೇನು..?

ಚಾನೆಲ್​ಗಳ ಮೂಲಕ ಅಡ್ಮಿನ್​ಗಳು ಫೋಟೋ, ವಿಡಿಯೋ, ಸ್ಟಿಕರ್​ ಹಾಗೂ ಸಮೀಕ್ಷೆಗಳನ್ನು ಪ್ರಸಾರ ಮಾಡಬಹುದಾಗಿದೆ. ವಾಟ್ಸಾಪ್​ ಅಪ್​ಡೇಟ್​ ಮಾಡುವ ಮೂಲಕ ನೀವು ಈ ಹೊಸ ವೈಶಿಷ್ಟ್ಯವನ್ನು ಕಾಣಬಹುದಾಗಿದೆ. ನೀವು ಸೇವ್​ ಮಾಡಿರುವ ನಂಬರ್​, ನೀವಿರುವ ವಾಟ್ಸಾಪ್​​ ಗ್ರೂಪ್​ಗಳನ್ನು ಹೊರತುಪಡಿಸಿಯೂ ನೀವು ಈ ವಾಟ್ಸಾಪ್​ ಚಾನೆಲ್​ ಮೂಲಕ ಮನರಂಜನೆಯನ್ನು ಪಡೆದುಕೊಳ್ಳಬಹುದಾಗಿದೆ.

ಭಾರತದಲ್ಲಿ ವಾಟ್ಸಾಪ್​ ಚಾನೆಲ್​ ಲಾಂಚ್​ ಆಗುತ್ತಿದ್ದಂತೆಯೇ ಮೆಟಾ ಕಂಪನಿಯು, ಬಿಸಿಸಿಐ ಕೂಡ ವಾಟ್ಸಾಪ್​ ಚಾನೆಲ್​ನಲ್ಲಿದೆ ಎಂದು ಘೋಷಣೆ ಮಾಡಿತ್ತು.

ಇಂಡಿಯನ್​ ಕ್ರಿಕೆಟ್​ ಟೀಂ ಎಂಬ ಹೆಸರಲ್ಲಿ ಬಿಸಿಸಿಐ ತನ್ನ ಹೊಸ ಚಾನೆಲ್​ ಆರಂಭಿಸಿದೆ. ನೀವು ಕೂಡ ಈ ಚಾನೆಲ್​ ಸೇರಿಕೊಳ್ಳುವ ಮೂಲಕ ಅಕ್ಟೋಬರ್​ನಲ್ಲಿ ನಡೆಯಲಿರುವ ವಿಶ್ವಕಪ್​ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೇರವಾಗಿ ಬಿಸಿಸಿಐ ಮೂಲಕವೇ ಪಡೆದುಕೊಳ್ಳಬಹುದಾಗಿದೆ.

ನೀವು ಬಿಸಿಸಿಐನ ಈ ಚಾನೆಲ್​ನ್ನು ಫಾಲೋ ಮಾಡಬೇಕು ಎಂದುಕೊಂಡಿದ್ದರೆ ಈ ಕೆಳಗಿನ ಹಂತಗಳನ್ನು ಫಾಲೋ ಮಾಡಬಹುದಾಗಿದೆ.

1. ಮೊದಲು ವಾಟ್ಸಾಪ್​ ಅಪ್​ಡೇಟ್​ ಮಾಡಿ.

2. ಅಪ್​ಡೇಟ್​ ಆದ ಬಳಿಕ ನಿಮ್ಮ ಸ್ಮಾರ್ಟ್​ಫೋನ್​​ನಲ್ಲಿ ವಾಟ್ಸಾಪ್​ ಓಪನ್​ ಮಾಡಿ.

3. ಈಗ ನಿಮಗೆ ಚಾಟ್ಸ್​ ಟ್ಯಾಬ್​ ಪಕ್ಕದಲ್ಲೇ ನಿಮಗೆ ಹೊಸ ಅಪ್​ಡೇಟ್​ ಬಂದಿರುವುದು ಕಾಣಲಿದೆ.

4. ಈಗ ಅಪ್​ಡೆಟ್​ ಟ್ಯಾಬ್​ ಕ್ಲಿಕ್​ ಮಾಡಿ.

5. ಇಷ್ಟು ದಿನ ನಿಮ್ಮ ಸ್ನೇಹಿತರ ಸ್ಟೇಟಸ್​ಗಳನ್ನು ನೋಡುತ್ತಿದ್ದ ಜಾಗದಲ್ಲಿಯೇ ನಿಮಗೆ ಚಾನೆಲ್​ ಆಯ್ಕೆ ಕೂಡ ಕಾಣಲಿದೆ.

6. ಫೈಂಡ್​ ಚಾನೆಲ್​ ಆಯ್ಕೆಯಲ್ಲಿ ನೀವು ಇಂಡಿಯನ್​ ಕ್ರಿಕೆಟ್​ ಟೀಂ ಸರ್ಚ್​ ಮಾಡಿ.

7. ಈಗ ನಿಮಗೆ ಇಂಡಿಯನ್​ ಕ್ರಿಕೆಟ್​ ಟೀಂ ವಾಟ್ಸಾಪ್​ ಚಾನೆಲ್​​ ಕಾಣಸಿಗಲಿದೆ. ಇಲ್ಲಿ ನೀವು ಫಾಲೋ ಬಟನ್​ ಕ್ಲಿಕ್​ ಮಾಡೋ ಮೂಲಕ ಬಿಸಿಸಿಐನ ಹೊಸ ಹೊಸ ಅಪ್​ಡೇಟ್​ಗಳು ನೇರವಾಗಿ ನಿಮ್ಮ ವಾಟ್ಸಾಪ್​ಗೆ ಬರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...