alex Certify ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದೀರಾ…? ಹಾಗಾದ್ರೆ ಈ ವಿಷಯದ ಬಗ್ಗೆ ಇರಲಿ ಗಮನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದೀರಾ…? ಹಾಗಾದ್ರೆ ಈ ವಿಷಯದ ಬಗ್ಗೆ ಇರಲಿ ಗಮನ

ಭಾರತದ ಪ್ರಮುಖ ಕಾರು ತಯಾರಕರಾದ ಮಾರುತಿ, ಕಿಯಾ, ಟಾಟಾ ಮೋಟಾರ್ಸ್, ಎಂಜಿ ಮೋಟಾರ್, ಹ್ಯುಂಡೈ ಮತ್ತು ಟೊಯೊಟಾ ಈ ವರ್ಷ ಈಗಾಗಲೇ ಎರಡು ಬಾರಿ ಕಾರುಗಳ ಬೆಲೆಯನ್ನು ಹೆಚ್ಚಿಸಿವೆ. ಬೇಡಿಕೆಯ ಹೆಚ್ಚಳದಿಂದಾಗಿ ಅನೇಕ ಕಂಪನಿಗಳು ತಮ್ಮ ವಾಹನಗಳ ವಿತರಣೆಯನ್ನು ಹಲವಾರು ತಿಂಗಳುಗಳವರೆಗೆ ವಿಳಂಬಗೊಳಿಸಿವೆ.

ಹೀಗೆ ಇತ್ತೀಚಿನ ದಿನಗಳಲ್ಲಿ ಕಾರುಗಳ ಬೆಲೆ ಏರಿಕೆ, ಬಡ್ಡಿ ದರಗಳ ಏರಿಕೆ, ಪೂರೈಕೆ ಕೊರತೆ ಮತ್ತು ಹೆಚ್ಚಿನ ಇಂಧನ ಬೆಲೆಗಳ ನಡುವೆಯೂ ಮೊಟ್ಟ ಮೊದಲ ಕಾರು ಖರೀದಿಗೆ ಮುಂದಾಗಿದ್ದೀರಾ ? ಹಾಗಾದರೆ ಕೆಲವು ವಿಚಾರಗಳಲ್ಲಿ ಎಡವಬೇಡಿ.

ಹಲವರಿಗೆ ಕಾರು ಅನಿವಾರ್ಯ. ಆದರೆ ಸಾಲ ಮಾಡಿ ಕಾರು ಖರೀದಿಸುವುದಾದರೆ ಎಚ್ಚರ ವಹಿಸಿ. ಪ್ರತಿ ತಿಂಗಳ ಇಎಂಐ, ನಿಮ್ಮ ಹಣಕಾಸಿನ ರಿಸ್ಕ್‌ ಅನ್ನು ಹೆಚ್ಚಿಸುತ್ತದೆ. ಆರು – ಏಳು ವರ್ಷ ತನಕ ಹೊಸ ಸಾಲ ತೆಗೆದುಕೊಳ್ಳುವುದು ಕಷ್ಟವಾದೀತು. ಮುಂದಿನ ವರ್ಷಗಳ ಹಣಕಾಸಿನ ಗುರಿಗಳನ್ನು ಸ್ಪಷ್ಟವಾಗಿಟ್ಟುಕೊಂಡು ಕಾರು ಲೋನ್‌ ಪಡೆಯಲು ಸಿದ್ಧತೆ ನಡೆಸಿ.

ದೇಶದ ಮೊದಲ ಡೀಲಕ್ಸ್‌ ರೈಲು ʼಡೆಕ್ಕನ್ ಕ್ವೀನ್‌ʼ ಗೆ ಈಗ 92 ವರ್ಷ

ಮಾಲೀಕತ್ವದ ವೆಚ್ಚ ಅಂದಾಜಿಸಿ: ಸುಲಭವಾಗಿ ಕಾರು ಲೋನ್‌ ಸಿಗಬಹುದು. ಆದರೆ ಮುಂದೆ ನಿರ್ವಹಣೆ ಹಲವು ಇವೆ. ಇಎಂಐ ಜತೆಗೆ, ನಿರ್ವಹಣಾ ವೆಚ್ಚ, ಇಂಧನ, ವಿಮೆ, ನೋಂದಣಿ ಮತ್ತು ತೆರಿಗೆಗಳನ್ನು ಪರಿಗಣಿಸಬೇಕು. ಅದು ವಾಹನವನ್ನು ಸ್ವಂತ ಮಾಡಿಕೊಳ್ಳುವ ವೆಚ್ಚಕ್ಕೆ ಸೇರುತ್ತದೆ.

ನಿಮ್ಮ ವಾಹನದ ಮಾಲೀಕತ್ವದ ಒಟ್ಟು ವೆಚ್ಚ, ನಿಮ್ಮ ಲೋನ್ ಪಾವತಿ ಸೇರಿದಂತೆ, ನಿಮ್ಮ ಟೇಕ್-ಹೋಮ್ ಪಾವತಿಯ 20% ಅನ್ನು ಮೀರಬಾರದು. ಕೆಲವು ವೆಚ್ಚಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಾಗದಿದ್ದರೂ, ಭವಿಷ್ಯದ ನಿರ್ವಹಣೆ, ರಿಪೇರಿ ಮತ್ತು ಇಂಧನದಂತಹ ಇತರವುಗಳನ್ನು ನೀವು ಸೂಕ್ತ ಕಾರಿನ ಆಯ್ಕೆಯೊಂದಿಗೆ ಕಡಿಮೆ ಮಾಡಬಹುದು.

ಟೆಸ್ಟ್ ಡ್ರೈವ್ ಮಾಡಿ: ಒಮ್ಮೆ ನೀವು ಕಾರಿನಲ್ಲಿ ಕುಳಿತ ನಂತರ, ಟೆಸ್ಟ್ ಡ್ರೈವ್‌ ಮಾಡಿ. ಆಸನ ಸ್ಥಾನ, ಕಿಟಕಿಗಳ ಗೋಚರತೆ ಮತ್ತು ಎಂಜಿನ್‌ನ ಸದ್ದು ಗಮನಿಸಿ.

ನಿಮ್ಮ ಅಗತ್ಯಗಳ ಅರಿವು ಇರಲಿ: ನಿಮ್ಮ ಅಗತ್ಯಗಳ ಅರಿವು ಸ್ಪಷ್ಟವಾಗಿರಬೇಕು. ಕಾರನ್ನು ನೀವು ಯಾವ ಉದ್ದೇಶಕ್ಕಾಗಿ ಬಳಸುತ್ತೀರಿ? ನೀವು ಆಗಾಗ್ಗೆ ದೀರ್ಘ ಪ್ರಯಾಣಕ್ಕೆ ಹೋಗುತ್ತೀರಾ? ನಿಮ್ಮ ಜೀವನ ಶೈಲಿಯನ್ನು ಪರೀಕ್ಷಿಸಿ ಮತ್ತು ಅದಕ್ಕೆ ಅನುಗುಣವಾಗಿ ಕಾರಿನ ಆಯ್ಕೆ ಮಾಡಿ.

ಸೆಕೆಂಡ್‌ ಹ್ಯಾಂಡ್‌ ಕಾರು: ಸೆಕೆಂಡ್‌ ಹ್ಯಾಂಡ್‌ ಕಾರು ಮಾರುಕಟ್ಟೆ ಹೆಚ್ಚು ವ್ಯವಸ್ಥಿತವಾಗಿದೆ. ಮಾರುತಿಯ ಟ್ರೂ ವ್ಯಾಲ್ಯೂ ಮತ್ತು ಮಹೀಂದ್ರ & ಮಹೀಂದ್ರದ ಫಸ್ಟ್ ಚಾಯ್ಸ್ ಎರಡು ಜನಪ್ರಿಯ ಮತ್ತು ವಿಶ್ವಾಸಾರ್ಹ ವೇದಿಕೆಗಳಾಗಿವೆ, ರೆನಾಲ್ಟ್ ಕೂಡ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...