alex Certify ಟಾಟಾ ನೆಕ್ಸಾನ್ ಗ್ರಾಹಕರಿಗೆ ಬಂಪರ್‌; ಮಾರುಕಟ್ಟೆಗೆ ಬಂದಿವೆ 5 ಹೊಸ ರೂಪಾಂತರಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಾಟಾ ನೆಕ್ಸಾನ್ ಗ್ರಾಹಕರಿಗೆ ಬಂಪರ್‌; ಮಾರುಕಟ್ಟೆಗೆ ಬಂದಿವೆ 5 ಹೊಸ ರೂಪಾಂತರಗಳು

ಟಾಟಾ ಮೋಟಾರ್ಸ್ ಐದು ಹೊಸ ಕಾರುಗಳನ್ನು ಬಿಡುಗಡೆ ಮಾಡಿದೆ. ಟಾಟಾ ನೆಕ್ಸಾನ್ ಶ್ರೇಣಿಯ 5 ಹೊಸ ರೂಪಾಂತರಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ ಇವು ನೆಕ್ಸಾನ್‌ನ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಿಗೆ ಸೇರಿಸಲಾದ AMT ಮಾದರಿಗಳಾಗಿವೆ. ಕಳೆದ ತಿಂಗಳು ನೆಕ್ಸಾನ್ ಮಾರಾಟದಲ್ಲಿ ಕುಸಿತ ಕಂಡುಬಂದ ಕಾರಣ ಟಾಟಾ ಮೋಟಾರ್ಸ್ಗೆ ಈ ಕ್ರಮ ಅನಿವಾರ್ಯವೆನಿಸಿದೆ.

ನೆಕ್ಸಾನ್ ಪೆಟ್ರೋಲ್ ಶ್ರೇಣಿಯಲ್ಲಿ ನೆಕ್ಸಾನ್ ಸ್ಮಾರ್ಟ್+, ಪ್ಯೂರ್ ಮತ್ತು ಪ್ಯೂರ್ ಎಸ್ ಟ್ರಿಮ್‌ಗಳಿಗೆ ಹೊಸ ಸ್ವಯಂಚಾಲಿತ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಮ್‌ಟಿ) ನೀಡಲಾಗಿದೆ. ಇದು ಈ ಹಿಂದೆ ಕ್ರಿಯೇಟಿವ್ ಟ್ರಿಮ್‌ನಲ್ಲಿ ಲಭ್ಯವಿತ್ತು. ಡೀಸೆಲ್ ಶ್ರೇಣಿಯಲ್ಲಿ AMT ಗೇರ್‌ಬಾಕ್ಸ್ ಅನ್ನು ನೆಕ್ಸನ್ ಪ್ಯೂರ್ ಮತ್ತು ಪ್ಯೂರ್ ಎಸ್ ಟ್ರಿಮ್‌ನಲ್ಲಿ ನೀಡಲಾಗಿದೆ. ಈ ಆವೃತ್ತಿಯೊಂದಿಗೆ ನೆಕ್ಸಾನ್ ಐದು ಹೊಸ ರೂಪಾಂತರಗಳನ್ನು ಪಡೆದುಕೊಂಡಿದೆ.

Nexon Petrol Smart+ AMT ಬೆಲೆ 11.80 ಲಕ್ಷ ರೂಪಾಯಿಯಿಂದ ಆರಂಭವಾಗಿ 12.30 ಲಕ್ಷ ರೂಪಾಯಿವರೆಗಿದೆ. ಕೆಲವು ಟ್ರಿಮ್‌ಗಳಲ್ಲಿ AMT ಗೇರ್‌ಬಾಕ್ಸ್ ಅನ್ನು ಅಳವಡಿಕೆ ಹೊರತಾಗಿ ಟಾಟಾ ನೆಕ್ಸಾನ್‌ನಲ್ಲಿ ಯಾವುದೇ ಯಾಂತ್ರಿಕ ಬದಲಾವಣೆ ಮಾಡಿಲ್ಲ. ಎಸ್‌ಯುವಿ 1.2 -ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ.

ಇಷ್ಟೇ ಅಲ್ಲ 5 -ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ AMT ಮತ್ತು 7-ಸ್ಪೀಡ್ DCT ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಇದರ ಬೆಲೆ 8.15 ಲಕ್ಷದಿಂದ 15.60 ಲಕ್ಷ ರೂಪಾಯಿವರೆಗಿದೆ. ಇದರ ಡಾರ್ಕ್ ಆವೃತ್ತಿಯ ಬೆಲೆ 11.45 ಲಕ್ಷದಿಂದ 15.80 ಲಕ್ಷ ರೂಪಾಯಿ.

ಇದು 5 ಆಸನಗಳ SUV . 382 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ವಾಹನದ ಗ್ರೌಂಡ್ ಕ್ಲಿಯರೆನ್ಸ್ 208 ಎಂಎಂ. ಇದು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ, 10.25-ಇಂಚಿನ ಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸ್ವಯಂಚಾಲಿತ ಕ್ಲೈಮೇಟ್ ಕಂಟ್ರೋಲ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ವ್ಯವಸ್ಥೆ ಕೂಡ ಇದರಲ್ಲಿದೆ.

SUV ಕ್ರೂಸ್ ಕಂಟ್ರೋಲ್, ಪ್ಯಾಡಲ್ ಶಿಫ್ಟರ್‌ಗಳು, ಸಬ್ ವೂಫರ್‌ನೊಂದಿಗೆ 9-ಸ್ಪೀಕರ್ ಸೌಂಡ್ ಸಿಸ್ಟಮ್, ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಲ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, 360-ಡಿಗ್ರಿ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳು ಇದರಲ್ಲಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...