alex Certify ಬೆರಗಾಗಿಸುತ್ತೆ ಇನ್ಸ್ಟಾಗ್ರಾಂನ ಪ್ರತಿ ಪೋಸ್ಟಿಗೆ ಕೊಹ್ಲಿ ಪಡೆಯುವ ʼಸಂಭಾವನೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಇನ್ಸ್ಟಾಗ್ರಾಂನ ಪ್ರತಿ ಪೋಸ್ಟಿಗೆ ಕೊಹ್ಲಿ ಪಡೆಯುವ ʼಸಂಭಾವನೆʼ

ಅಭಿಮಾನಿಗಳ ಮಿತಿ ಮೀರಿದ ಹಿಂಬಾಲಿಸುವಿಕೆಯಿಂದ ಮೊದಲೇ ಕೋಟಿಗಟ್ಟಲೇ ಡಾಲರ್‌ಗಳ ಗುಡ್ಡೆ ಮೇಲೆ ಕುಳಿತಿರುವ ಸೆಲೆಬ್ರಿಟಿ ಆಟಗಾರರು ಇದೀಗ ಸಾಮಾಜಿಕ ಜಾಲತಾಣದಲ್ಲಿ ತಾವು ಮಾಡುವ ಪೋಸ್ಟ್‌ಗಳಿಂದಲೂ ದುಡ್ಡನ್ನು ಗುಡಿಸಿ ಗುಡ್ಡೆ ಹಾಕುತ್ತಿದ್ದಾರೆ.

ತಮ್ಮ ಮೆಚ್ಚಿನ ಕ್ರೀಡಾಪಟುವಿನ ವೈಯಕ್ತಿಕ ಜೀವನದ ಸಣ್ಣ-ಪುಟ್ಟ ಝಲಕ್‌ ಅನ್ನೂ ಭಾರೀ ಕಾತರದಿಂದ ನೋಡಿ ಪುನೀತರಾಗುವ ಮಂದಿಯಿಂದಾಗಿ ಕ್ರೀಡಾಪಟುಗಳು ಇನ್ಸ್ಟಾಗ್ರಾಂನಲ್ಲಿ ಮಾಡುವ ಒಂದೊಂದು ಪೋಸ್ಟಿಗೂ ಭಾರೀ ದುಡ್ಡು ಮಾಡುತ್ತಿದ್ದಾರೆ. ಈ ಪಟ್ಟಿಯಲ್ಲಿ ಪೋರ್ಚುಗಲ್‌ನ ಫುಟ್ಬಾಲ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ ಜಾಗತಿಕವಾಗಿ ಮುಂದೆ ಇದ್ದರೆ, ಭಾರತೀಯ ಆಟಗಾರರ ಪೈಕಿ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲಿಗರು. ಕೊಹ್ಲಿ ಇದೇ ಪಟ್ಟಿಯಲ್ಲಿ ಜಾಗತಿಕವಾಗಿ 19ನೇಯವರಾಗಿದ್ದಾರೆ.

ಸೋಲಿನ ನಂತರವೂ ತಂಡದ ಆಟಗಾರರನ್ನು ಹುರಿದುಂಬಿಸಿದ ವಿರಾಟ್ ಕೊಹ್ಲಿ

ಈ ವಿಚಾರದಲ್ಲಿ ಬಾಲಿವುಡ್‌ ನಟರೂ ಭಾರೀ ಕುಳಗಳಾಗಿಬಿಟ್ಟಿದ್ದಾರೆ. ವಿರಾಟ್ ಕೊಹ್ಲಿ ಬಳಿಕ ಇನ್ಸ್ಟಾಗ್ರಾಂನಲ್ಲಿ ಮಾಡುವ ಪೋಸ್ಟ್‌ನಲ್ಲಿ ಒಳ್ಳೆ ದುಡ್ಡು ಕಮಾಯಿ ಮಾಡುತ್ತಿರುವುದು ಪ್ರಿಯಾಂಕಾ ಚೋಪ್ರಾ.

ಇನ್ಸ್ಟಾಗ್ರಾಂನಲ್ಲಿ ಮಾಡುವ ಒಂದು ಪೋಸ್ಟ್‌ನಿಂದ ಕೊಹ್ಲಿ ಜೇಬಿಗೆ 5 ಕೋಟಿ ರೂಪಾಯಿ ಇಳಿದರೆ, ಪ್ರಿಯಾಂಕಾ 4 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ರೊನಾಲ್ಡೋ ಮಾಡುವ ಒಂದೊಂದು ಪೋಸ್ಟಿಗೂ 12 ಕೋಟಿ ರೂಪಾಯಿ ಅವರ ಜೇಬಿಗೆ ಬೀಳುತ್ತದೆ. ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಲಿಯೋನೆಲ್ ಮೆಸ್ಸಿ ಸಹ ಸರಿಸುಮಾರು ಅಷ್ಟೇ ದುಡ್ಡು ಪಡೆಯುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...