alex Certify ಬರೋಬ್ಬರಿ 157 ಪ್ರಾಚ್ಯವಸ್ತುಗಳನ್ನು ಮರಳಿ ಪಡೆದ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 157 ಪ್ರಾಚ್ಯವಸ್ತುಗಳನ್ನು ಮರಳಿ ಪಡೆದ ಭಾರತ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಅಮೆರಿಕ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ 157 ಪ್ರಾಚ್ಯ ವಸ್ತುಗಳನ್ನು ಅಲ್ಲಿನ ಸರ್ಕಾರ ಭಾರತಕ್ಕೆ ಮರಳಿಸಿದೆ.

1970ರಿಂದ 2000ನೇ ಇಸವಿವರೆಗೂ ವಿದೇಶಗಳಲ್ಲಿ ಇದ್ದ ತನ್ನದೇ ಆದ 19ರಷ್ಟು ಪ್ರಾಚ್ಯವಸ್ತುಗಳನ್ನು ಮರಳಿ ಪಡೆದ ಭಾರತ 2000-2013ರ ನಡುವಿನ ಅವಧಿಯಲ್ಲಿ ಒಂದೇ ಒಂದು ಆಂಟಿಕ್ ವಸ್ತುವನ್ನು ಪಡೆಯಲು ಸಾಧ್ಯವಾಗಿರಲಿಲ್ಲ. 2013-2021ರ ಆಗಸ್ಟ್‌ ನಡುವೆ 53ರಷ್ಟು ಪ್ರಾಚ್ಯವಸ್ತುಗಳನ್ನು ವಿದೇಶಗಳಿಂದ ಭಾರತ ಮರಳಿ ಪಡೆದಿದೆ.

ಬಸ್​ ಮೇಲೆ ದಾಳಿಗೆ ಮುಂದಾದ ಆನೆ: ಚಾಲಕನ ಸಮಯಪ್ರಜ್ಞೆಯಿಂದ ಉಳಿಯಿತು ಪ್ರಯಾಣಿಕರ ಪ್ರಾಣ

ಕಳೆದ ಒಂದೇ ವಾರದಲ್ಲಿ 157 ಆಂಟಿಕ್ ವಸ್ತುಗಳನ್ನು ಭಾರತ ಮರಳಿ ಪಡೆದಿದೆ ಎಂದು ಭಾರತೀಯ ಪಾರಂಪರಿಕ ವಸ್ತುಗಳನ್ನು ಸಂರಕ್ಷಿಸುವ ಕೆಲಸ ಮಾಡುವ ಇಂಡಿಯಾ ಪ್ರೈಡ್ ಪ್ರಾಜೆಕ್ಟ್ ತಿಳಿಸಿದೆ. ವಿದೇಶಗಳಿಗೆ ಕದ್ದೊಯ್ಯಲಾದ ಭಾರತೀಯ ಪರಂಪರೆಯ ಈ ಅತ್ಯಮೂಲ್ಯ ವಸ್ತುಗಳನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮರಳಿ ಪಡೆಯುವ ವಿಶ್ವಾಸ ಇಂಡಿಯಾ ಪ್ರೈಡ್‌ನದ್ದಾಗಿದೆ.

ಅಕ್ರಮ ಮಾರಾಟದ ಮೂಲಕ ಈ 157 ಪ್ರಾಚ್ಯವಸ್ತುಗಳನ್ನು ಪಡೆದುಕೊಂಡಿದ್ದ ಕಳ್ಳಸಾಗಾಟಗಾರರು/ಡೀಲರ್‌ಗಳು/ಕಳ್ಳರು/ವಸ್ತು ಪ್ರದರ್ಶನಕಾರರಿಂದ ಮರಳಿ ಪಡೆಯಲಾಗಿದೆ ಎನ್ನುವ ಇಂಡಿಯಾ ಪ್ರೈಡ್‌ನ ಸಹ-ಸ್ಥಾಪಕ ವಿಜಯ್ ಕುಮಾರ್‌ ಎಸ್‌, “ನಮ್ಮ ಕೆಲಸ ಹಾಗೂ ಸಹಯೋಗವು ಮುಖ್ಯವಾಗಿ ಅಮೆರಿಕದ ವಲಸೆ ಹಾಗೂ ಕಸ್ಟಮ್ಸ್‌ ಜಾರಿ ಇಲಾಖೆ, ಆಂತರಿಕ ಭದ್ರತಾ ಇಲಾಖೆ ಹಾಗೂ ಭಾರತೀಯ ಅಧಿಕಾರಿಗಳೊಂದಿಗೆ ಇದೆ. ಕಳ್ಳಸಾಗಾಟಗಾರರಿಂದ ವಶಕ್ಕೆ ಪಡೆಯಲಾದ ಚಿತ್ರಗಳನ್ನು ಅಧಿಕಾರಿಗಳು ನಮಗೆ ಕಳುಹಿಸುತ್ತಾರೆ. ಈ ಚಿತ್ರಗಳನ್ನು ಬಳಸಿಕೊಂಡು ಸುದೀರ್ಘಾವಧಿಯ ಪ್ರಕ್ರಿಯೆಗಳ ಮೂಲಕ ನಮ್ಮಲ್ಲಿರುವ ಹಳೆಯ ದಾಖಲೆಗಳೊಂದಿಗೆ ಹೋಲಿಕೆ ಮಾಡುತ್ತೇವೆ. ಪಕ್ಕಾ ಸಾಕ್ಷ್ಯಗಳನ್ನು ಹೆಕ್ಕಿ ತೆಗೆದ ಬಳಿಕ ಅಧಿಕಾರಗಳಿಗೆ ಆ ವಸ್ತುಗಳನ್ನು ಮರಳಿಸಲು ಕೋರುತ್ತೇವೆ,” ಎನ್ನುತ್ತಾರೆ.

ಕೋವಿಡ್ ಮರಣ: ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರಕ್ಕಾಗಿ ಅರ್ಜಿ ಆಹ್ವಾನ

ಮರಳಿ ಪಡೆಯಲಾದ ಈ 157 ಪ್ರಾಚ್ಯ ವಸ್ತುಗಳ ಪೈಕಿ, ಚೋಳ ಕಂಚಿನ ನಟರಾಜ ಪುತ್ಥಳಿ, ಒಡಿಶಾದ ದಕ್ಷಿಣ ಚಂಡಿ ದೇಗುಲ, ಅಳಿಂಗನ ಕಂಚಿನ ಮೂರ್ತಿ ಸೇರಿದಂತೆ ತಮಿಳುನಾಡಿನ ಅನೇಕ ಕಡೆಗಳ ಪುರಾತನ ವಸ್ತುಗಳು ಹಾಗೂ ಮಧ್ಯ ಪ್ರದೇಶಕ್ಕೆ ಸೇರಿದ ಒಂದಷ್ಟು ವಸ್ತುಗಳೂ ಸೇರಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...