alex Certify ಬಂದಿರೋದು ಶೀತವೂ/ಕೊರೊನಾವೋ ಎಂದು ಅರಿಯುವುದು ಹೇಗೆ…? ಇಲ್ಲಿದೆ ಒಂದಷ್ಟು ಉಪಯುಕ್ತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂದಿರೋದು ಶೀತವೂ/ಕೊರೊನಾವೋ ಎಂದು ಅರಿಯುವುದು ಹೇಗೆ…? ಇಲ್ಲಿದೆ ಒಂದಷ್ಟು ಉಪಯುಕ್ತ ಮಾಹಿತಿ

ಎಲ್ಲೆಲ್ಲೂ ಕೋವಿಡ್-19 ಭೀತಿಯೇ ತುಂಬಿರುವ ಈ ಸಮಯದಲ್ಲಿ, ಜ್ವರ ಮತ್ತು ಶೀತಕ್ಕೆ ಕಾರಣವಾಗುವ ವೈರಾಣುಗಳನ್ನು ಪತ್ತೆ ಮಾಡಲು ಪರೀಕ್ಷೆ ಮಾಡುವುದು ಉತ್ತಮ ಎಂದು ತಜ್ಞರು ತಿಳಿಸಿದ್ದಾರೆ.

ಸಾಮಾನ್ಯ ಶೀತ ಮತ್ತು ಕೋವಿಡ್-19 ನಡುವಿನ ವ್ಯತ್ಯಾಸ ಕಂಡುಕೊಳ್ಳುವುದು ಹೇಗೆ…?

ಕೆಮ್ಮು, ಜ್ವರ, ಸುಸ್ತು, ಸ್ನಾಯು ನೋವು ಸಾಮಾನ್ಯ ಜ್ವರ ಹಾಗೂ ಕೋವಿಡ್‌-19ಗಳೆರಡಕ್ಕೂ ಸಾಮಾನ್ಯವಾದ ರೋಗ ಲಕ್ಷಣಗಳಾಗಿವೆ ಎಂದು ಮೇರಿಲ್ಯಾಂಡ್ ಸಾರ್ವಜನಿಕ ಆರೋಗ್ಯ ಶಾಲೆಯ ಪ್ರೊಫೆಸರ್‌ ಕರ್ಸ್ಟನ್ ಕೋಲ್ಮನ್ ತಿಳಿಸುತ್ತಾರೆ. ಕೋವಿಡ್-19ನ ರೋಗಲಕ್ಷಣಗಳಲ್ಲಿ ವಾಸನಾ ಗ್ರಹಿಕೆಯ ಶಕ್ತಿಯೇ ಕುಗ್ಗಲಿದೆ.

ಮಕ್ಕಳಿಗೆ ಮಾಡಿ ಕೊಡಿ ‘ಏಪ್ರಿಕಾಟ್ʼ ಕುಕ್ಕಿಸ್

ಇದೇ ವೇಳೆ, ಸಾಮಾನ್ಯ ಶೀತವು ಲಘುವಾದ ರೋಗ ಲಕ್ಷಣಗಳನ್ನು ಹೊಂದಿದ್ದು, ಸುರಿಯುವ ಮೂಗು ಹಾಗೂ ಗಂಟಲು ಕೆರೆತಕ್ಕೆ ಕಾರಣವಾಗುತ್ತದೆ. ಶೀತವಿದ್ದಾಗ ಜ್ವರ ಇರುವುದು ಸಾಮಾನ್ಯ.

ಕೆಲವೊಮ್ಮೆ ಸಾಮಾನ್ಯ ಶೀತ ಹಾಗೂ ಕೋವಿಡ್ ಎರಡೂ ಸಹ ಒಂದೇ ಬಾರಿಗೆ ಬರುವ ಸಾಧ್ಯತೆ ಇದ್ದು, ಈ ಪರಿಸ್ಥಿತಿಯನ್ನು ’ಫ್ಲುರೋನಾ’ ಎನ್ನಲಾಗುತ್ತದೆ. ಇಂಥ ಪರಿಸ್ಥಿತಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆ ಇದೆ.

ಇಂಥ ಗೊಂದಲಗಳ ಕಾರಣದಿಂದಾಗಿ ಸಣ್ಣ-ಪುಟ್ಟ ಶೀತ ಬಂದರೂ ಸಹ ಮೊದಲು ಪರೀಕ್ಷೆಗೆ ಬನ್ನಿ ಎನ್ನುತ್ತಾರೆ ವೈದ್ಯಕೀಯ ತಜ್ಞರು. ಕೆಲವೊಂದು ಫಾರ್ಮಸಿಗಳು ಎರಡೂ ಥರದ ವೈರಾಣುಗಳನ್ನು ಪತ್ತೆ ಮಾಡಬಲ್ಲ ಪ್ರಯೋಗಾಲಯಗಳನ್ನು ಹೊಂದಿದ್ದು, ವೈದ್ಯರಿಗೆ ಸೂಕ್ತವಾದ ಚಿಕಿತ್ಸೆ ಮಾಡಲು ಅನುವು ಮಾಡಿಕೊಡುತ್ತವಂತೆ.

ಉಸಿರಾಟ ಸಂಬಂಧಿ ವೈರಾಣುಗಳ ಸ್ಯಾಂಪಲ್‌ಗಳನ್ನು ಸ್ಕ್ರೀನ್ ಮಾಡಲು ಸಹ ಕೆಲವೊಂದು ಪ್ರಯೋಗಾಲಯಗಳು ಮುಂದೆ ಬರಬಹುದು. ಲಸಿಕೆ ಪಡೆಯುವುದರಿಂದ ಸೋಂಕುಗಳ ಹಬ್ಬುವಿಕೆ ತಡೆಗಟ್ಟಬಹುದಾಗಿದೆ ಎಂದು ಕೋಲ್ಮನ್ ತಿಳಿಸುತ್ತಾರೆ.

ಕೋವಿಡ್-19/ಶೀತದಿಂದ ನಿಮ್ಮನ್ನು ಕಾಪಾಡಿಕೊಳ್ಳಲು ಇಲ್ಲಿವೆ ಕೆಲವೊಂದು ಟಿಪ್‌‌ಗಳು

* ನಿಕಟ ಸಂಪರ್ಕವನ್ನು ತಪ್ಪಿಸಿ, ಸಾರ್ವಜನಿಕ ಸ್ಥಳದಲ್ಲಿ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಿ.

* ಮಾಸ್ಕ್ ಧರಿಸಿ, ಮಕ್ಕಳಿಗೂ ಇದನ್ನೇ ಮಾಡಲು ಪ್ರೋತ್ಸಾಹಿಸಿ.

* ನಿಮ್ಮ ಕೈಗಳನ್ನು ನಿರಂತರವಾಗಿ ತೊಳೆದುಕೊಳ್ಳುತ್ತಿರಿ, ಮಕ್ಕಳಿಗೂ ಇದನ್ನು ಕಲಿಸಿ.

* ಜನಜಂಗುಳಿಯಲ್ಲಿರುವುದನ್ನು ತಪ್ಪಿಸಿ.

* ನಿಮ್ಮ ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟಿಕೊಳ್ಳುವುದನ್ನು ತಪ್ಪಿಸಿ.

* ಬಾಗಿಲಿನ ಚಿಲಕಗಳು, ಸ್ವಿಚ್ಚುಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನು ಕೀಟಾಣು ಮುಕ್ತವಾಗಿಸಿ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...