alex Certify ಸಲಿಂಗಿಗಳ ಮದುವೆ ಕಾನೂನುಬದ್ದಗೊಳಿಸಿದ ಬಳಿಕ ಆರ್ಥಿಕ ಲಾಭದ ನಿರೀಕ್ಷೆಯಲ್ಲಿ ಚಿಲಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಲಿಂಗಿಗಳ ಮದುವೆ ಕಾನೂನುಬದ್ದಗೊಳಿಸಿದ ಬಳಿಕ ಆರ್ಥಿಕ ಲಾಭದ ನಿರೀಕ್ಷೆಯಲ್ಲಿ ಚಿಲಿ..!

ಕೆಲ ದಶಕಗಳ ಹಿಂದೆ ಸಮಾಜದ ನಿಷಿದ್ಧ ಪದ್ಧತಿಯಾಗಿದ್ದ ಸಲಿಂಗ ಪ್ರೇಮ ಈಗ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕಾನೂನುಬದ್ಧವಾಗಿದೆ‌. ಇದೇ ಸಾಲಿಗೆ ಡಿಸೆಂಬರ್ 7ರಂದು ಚಿಲಿ ದೇಶ ಸೇರಿದ್ದು, ಸಲಿಂಗಿಗಳ ಮದುವೆಯನ್ನ ಲೀಗಲ್ ಮಾಡಿದ 30ನೇ ದೇಶವಾಗಿದೆ. ಚಿಲಿಯ ಈ ನಡೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಈ ನಿರ್ಧಾರದಿಂದ ಚಿಲಿಯ ಆರ್ಥಿಕ ವ್ಯವಸ್ಥೆಗೆ ಧನಾತ್ಮಕ ಪರಿಣಾಮ ಬೀರಿದೆ.

ಈ ನಿರ್ಧಾರದಿಂದ ಚಿಲಿಯಲ್ಲೆ ನೆಲೆಸಿರುವ ಸಾಕಷ್ಟು ಸಲಿಂಗ ಪ್ರೇಮಿಗಳು, ಆದಷ್ಟು ಬೇಗ ಮದುವೆಯಾಗುವ ಉತ್ಸಾಹದಲ್ಲಿದ್ದಾರೆ. ಇದರಿಂದ ದೇಶದ ಆರ್ಥಿಕತೆಗೆ ಸಹಾಯವಾಗುತ್ತದೆ. ಜೊತೆಗೆ ಈ ನಿರ್ಧಾರದಿಂದ ಪ್ರವಾಸಿಗರು ಚಿಲಿಯತ್ತ ಆಕರ್ಷಿತರಾಗುತ್ತಾರೆ. ಕೆಲ ಸಲಿಂಗಿಗಳಂತು, ಈ ಪದ್ಧತಿ ನಿಷೇಧವಿರುವ ದೇಶಗಳಿಗಾಗಲಿ ಪ್ರದೇಶಗಳಿಗಾಗಲಿ ಪ್ರವಾಸಕ್ಕೆ ಹೋಗಲು ಹಿಂಜರಿಯುತ್ತಾರೆ. ಆದರೆ ಚಿಲಿ ಈಗ ಇಂಥಾ ನೀತಿಯಿಂದ ಹೊರ ಬಂದಿದ್ದು, ಎಲ್ಲರನ್ನು ಸಮಾನರನ್ನಾಗಿ ನೋಡುತ್ತಿರುವುದು ಸಂತಸ ತಂದಿದೆ ಎಂದು ಈ ವರ್ಗದ ಸಾಮಾಜಿಕ ಕಾರ್ಯಕರ್ತರ ಮಾತು‌.

33 ಹೊಸ ಯೂನಿಕಾರ್ನ್‌ಗಳೊಂದಿಗೆ ಬ್ರಿಟನ್‌ ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಜಿಗಿದ ಭಾರತ

ಒಪನ್ ಫಾರ್ ಬ್ಯುಸಿನೆಸ್ ರಿಲೀಸ್ ಮಾಡಿರುವ ಜೂನ್ ರಿಪೋರ್ಟ್ ನಲ್ಲಿ, ಕೆರೆಬಿಯನ್ ಹಾಗೂ 12 ಆಂಗ್ಲ ದೇಶಗಳಲ್ಲಿರುವ ಆ್ಯಂಟಿ-ಗೇ ನಿಯಮಗಳಿಂದ ಈ ಭಾಗದವರಿಗೆ, ಟೂರಿಸಂ ಹಾಗೂ ಇಮಿಗ್ರೇಷನ್ ನಲ್ಲಿ 4.4 ಬಿಲಿಯನ್ ಡಾಲರ್ ನಷ್ಟವಾಗಿದೆ ಎಂದು ವರದಿಯಾಗಿದೆ. ಅದೇ ಈ ಪದ್ಧತಿಗಳಿಗೆ ಅವಕಾಶವಿರುವ ಪ್ರದೇಶಗಳಲ್ಲಿ ಇದೇ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ಲಾಭದಲ್ಲಿ ಹೆಚ್ಚಳವಾಗುತ್ತಿರುವುದು ಚಿಲಿಗೆ ಆರ್ಥಿಕ ಬೆಳವಣಿಗೆಯ ಭರವಸೆ ಮೂಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...