alex Certify ಪಾಕ್ ​ನ ಮತ್ತೊಂದು ದಿವಾಳಿತನ ಬಯಲು : ಭಿಕ್ಷಾಟನೆಗೆಂದೇ ವಿದೇಶಕ್ಕೆ ತೆರಳುತ್ತಿದ್ದಾರೆ ಇಲ್ಲಿನ ಪ್ರಜೆಗಳು ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್ ​ನ ಮತ್ತೊಂದು ದಿವಾಳಿತನ ಬಯಲು : ಭಿಕ್ಷಾಟನೆಗೆಂದೇ ವಿದೇಶಕ್ಕೆ ತೆರಳುತ್ತಿದ್ದಾರೆ ಇಲ್ಲಿನ ಪ್ರಜೆಗಳು !

ಮೊದಲೇ ಆರ್ಥಿಕ ದಿವಾಳಿತನದಿಂದ ಮುಜುಗರಕ್ಕೆ ಒಳಗಾಗಿರುವ ಪಾಕಿಸ್ತಾನದ ಬಗ್ಗೆ ಇದೀಗ ಮತ್ತೊಂದು ನಾಚಿಕೆಗೇಡಿನ ವಿಚಾರ ಬೆಳಕಿಗೆ ಬಂದಿದೆ. ಪಾಕಿಸ್ತಾನದ ಅನೇಕ ಭಿಕ್ಷುಕರು ಯಾತ್ರಾರ್ಥಿ ವೀಸಾ ಬಳಕೆ ಮಾಡಿಕೊಂಡು ಸೌದಿ ಅರೇಬಿಯಾ, ಇರಾನ್​ ಹಾಗೂ ಇರಾಕ್​ನಂತಹ ದೇಶಗಳಿಗೆ ತೆರಳಿ ಅಲ್ಲಿ ಭಿಕ್ಷಾಟನೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇಸ್ಲಾಮಾಬಾದ್​ನಲ್ಲಿ ಬುಧವಾರದಂದು ನಡೆದ ಸಾಗರೋತ್ತರ ಪಾಕಿಸ್ತಾನಿಗಳ ಸ್ಥಾಯಿ ಸಮಿತಿಯಲ್ಲಿ ಇದು ಬಹಿರಂಗಗೊಂಡಿದೆ ಎನ್ನಲಾಗಿದೆ. ಪಾಕಿಸ್ತಾನದ ಸಾಗರೋತ್ತರ ಸಚಿವಾಲಯದ ಕಾರ್ಯದರ್ಶಿ ಜುಲ್ಫಿಕರ್​ ಹೈದರ್​ ದೇಶವನ್ನು ತೊರೆಯುವ ಕುಶಲ ಹಾಗೂ ಕೌಶಲ್ಯರಹಿತ ಕಾರ್ಮಿಕರ ಚರ್ಚೆಯ ಸಂದರ್ಭದಲ್ಲಿ ಸೆನೆಟ್​ ಸಮಿತಿಗೆ ಈ ಮಾಹಿತಿಯನ್ನು ನೀಡಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಬಂಧಿಸಲ್ಪಟ್ಟಿರುವ 90 ಪ್ರತಿಶತ ಪಾಕ್​ನ ಪ್ರಜೆಗಳು ವೃತ್ತಿಪರ ಭಿಕ್ಷುಕರು ಎಂದು ಹೇಳಿದ್ದಾರೆ.

ಭಿಕ್ಷುಕರು ಸಾಮೂಹಿಕವಾಗಿ ಪಾಕಿಸ್ತಾನವನ್ನು ತೊರೆಯುತ್ತಿದ್ದಾರೆ. ಅವರಲ್ಲಿ ಅನೇಕರು ದೋಣಿಯಲ್ಲಿ ಪ್ರಯಾಣಿಸುತ್ತಾರೆ. ಬಳಿಕ ಉಮ್ರಾ ಮತ್ತು ವಿಸಿಟ್​ ವೀಸಾಗಳನ್ನು ದುರಪಯೋಗಪಡಿಸಿಕೊಂಡು ಭಿಕ್ಷಾಟನೆ ಮಾಡುತ್ತಿದ್ದಾರೆ. ಪವಿತ್ರ ಸ್ಥಳಗಳಲ್ಲಿ ಬಂಧಿತರಾದ ಗಮನಾರ್ಹ ಸಂಖ್ಯೆಯ ಪಿಕ್​ಪಾಕೆಟ್​ ಮಾಡುವವರು ಸಹ ಪಾಕಿಸ್ತಾನಿ ಪ್ರಜೆಗಳು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...