alex Certify ಸೋದರ ಸಂಬಂಧಿಯಿಂದ ಪತ್ನಿ ಮೇಲೆ ಅತ್ಯಾಚಾರದ ವೇಳೆ ವಿಡಿಯೋ ಮಾಡ್ತಿದ್ದ ಪಾಪಿ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋದರ ಸಂಬಂಧಿಯಿಂದ ಪತ್ನಿ ಮೇಲೆ ಅತ್ಯಾಚಾರದ ವೇಳೆ ವಿಡಿಯೋ ಮಾಡ್ತಿದ್ದ ಪಾಪಿ ಪತಿ

ಭೋಪಾಲ್: ಗಂಡನ ಸೋದರ ಸಂಬಂಧಿಯಿಂದ ಅತ್ಯಾಚಾರಕ್ಕೊಳಗಾದ ಸಂದರ್ಭದಲ್ಲಿ ಆಕೆಯ ಪತಿ ಚಿತ್ರೀಕರಣ ಮಾಡಿದ್ದಾನೆ. ಸುಮಾರು 10 ದಿನಗಳ ಹಿಂದೆ ಮಧ್ಯಪ್ರದೇಶದ ಭೋಪಾಲ್ ನ ಗುಂಗಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

21 ವರ್ಷದ ಮಹಿಳೆಯ ಪತಿ ಮಾಟಗಾರನನ್ನು ಭೇಟಿ ಮಾಡುವ ನೆಪದಲ್ಲಿ ಆಕೆಯನ್ನು ಶಾಜಾಪುರದಿಂದ ಭೋಪಾಲ್‌ಗೆ ಕರೆದೊಯ್ದಿದ್ದ.

ಅತೀಂದ್ರಿಯ ಶಕ್ತಿ ಹೊಂದಿದ್ದ ಮಾಟಗಾರ ಆಕೆಯ ಬಂಜೆತನವನ್ನು ಗುಣಪಡಿಸುತ್ತಾನೆ ಎಂದು ಆರೋಪಿಯು ಮಹಿಳೆಗೆ ಹೇಳಿ ನಂಬಿಸಿದ್ದ. ಮಹಿಳೆ ಶಾಜಾಪುರ ಜಿಲ್ಲೆಯ ನಿವಾಸಿಯಾಗಿದ್ದು, ಆಕೆ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದಾಳೆ.

ಗುಂಗಾ ಕದಂಪುರದಲ್ಲಿರುವ ತನ್ನ ಚಿಕ್ಕಮ್ಮನನ್ನು ಭೇಟಿ ಮಾಡಲು ಜುಲೈ 21 ರಂದು ತನ್ನ ಪತಿ ಮತ್ತು ಆತನ ಸಹೋದರನೊಂದಿಗೆ ಭೋಪಾಲ್‌ಗೆ ಕರೆದುಕೊಂಡು ಹೋಗಿದ್ದಾರೆ ಎಂದು ಗುಂಗಾ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಹೆಚ್‌ಒ) ರಮೇಶ್ ರೈ ಹೇಳಿದ್ದಾರೆ. ಅಲ್ಲಿ, ಆ ಮಹಿಳೆಯ ಪತಿ ತನ್ನ ಬಂಜೆತನವನ್ನು ನಿವಾರಿಸಲು ಮಾಟಮಂತ್ರ ಮಾಡುವ ವ್ಯಕ್ತಿಯನ್ನು ಭೇಟಿಯಾಗುವುದಾಗಿ ಹೇಳಿದ್ದ.

ಎರಡು ದಿನ ಚಿಕ್ಕಮ್ಮನ ಮನೆಯಲ್ಲಿ ಉಳಿದುಕೊಂಡ ನಂತರ, ಮಹಿಳೆ ತನ್ನ ಪತಿ ಮತ್ತು ಸೋದರ ಸಂಬಂಧಿಯೊಂದಿಗೆ ಕುಳಿತಿದ್ದಾಗ ಕೊಠಡಿಯ ಬೀಗ ಹಾಕಲಾಗಿದೆ ಎಂದು ರಮೇಶ್ ರೈ ಹೇಳಿದ್ದಾರೆ. ಪತಿಯ ಸೋದರಸಂಬಂಧಿ ಅತ್ಯಾಚಾರ ಎಸಗಲು ಗಂಡನೇ ಸಹಾಯ ಮಾಡಿದ್ದಾನೆ. ಘಟನೆಯನ್ನು ಆತ ತನ್ನ ಮೊಬೈಲ್ ಫೋನ್ ನಲ್ಲಿ ದಾಖಲಿಸಿದ್ದಾನೆ.

ಸಂತ್ರಸ್ಥೆ ತನ್ನ ಚಿಕ್ಕಮ್ಮನಿಗೆ ಘಟನೆಯ ಬಗ್ಗೆ ಹೇಳಿದಾಗ, ಆಕೆಯನ್ನು ಮನೆಯಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಜುಲೈ 26 ರಂದು ಮನೆಗೆ ಹಿಂತಿರುಗಿ ಘಟನೆ ಬಗ್ಗೆ ಅತ್ತೆಗೆ ತಿಳಿಸಿದ್ದಾಳೆ. ಆಕೆಯ ಬೆದರಿಕೆ ಹಾಕಿದ್ದಾಳೆ.

ನಂತರ, ಮಹಿಳೆ ತನ್ನ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ್ದು, ಪತಿ ಕುಟುಂಬ ಸದಸ್ಯರ ವಿರುದ್ಧ ಪೋಲಿಸ್ ದೂರು ದಾಖಲಿಸಲು ಅವರು ಸಹಾಯ ಮಾಡಿದ್ದಾರೆ. ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...