alex Certify BIG NEWS: ʼಕೊರೊನಾʼ ಬಳಿಕ ಈಗ ಮತ್ತೊಂದು ಶಾಕ್‌ ; ಹಾಂಕಾಂಗ್ ನಲ್ಲಿ ಕಾಣಿಸಿಕೊಂಡಿರುವ ಹೊಸ ರೂಪದ ಸೋಂಕಿಗೆ ಹಲವರ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ʼಕೊರೊನಾʼ ಬಳಿಕ ಈಗ ಮತ್ತೊಂದು ಶಾಕ್‌ ; ಹಾಂಕಾಂಗ್ ನಲ್ಲಿ ಕಾಣಿಸಿಕೊಂಡಿರುವ ಹೊಸ ರೂಪದ ಸೋಂಕಿಗೆ ಹಲವರ ಬಲಿ

ಕೊರೊನಾ ಕಡಿಮೆಯಾಗ್ತಿರುವ ಬೆನ್ನಲ್ಲೆ ಹಾಂಕಾಂಗ್ ನಲ್ಲಿ ಬ್ಯಾಕ್ಟೀರಿಯಲ್ ಸೋಂಕು ಹರಡಿದ ಸುದ್ದಿ ಭಯ ಹುಟ್ಟಿಸಿದೆ. ಈ ಸೋಂಕಿಗೆ ಈಗಾಗಲೇ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಲಾಗಿದೆ. ಇದಕ್ಕೆ ಸಿಹಿನೀರಿನಲ್ಲಿರುವ ಮೀನಿನ ಸೇವನೆ ಕಾರಣ ಎನ್ನಲಾಗ್ತಿದೆ.

ಅಲ್ಲಿನ ಸಮುದ್ರಾಹಾರ ತಜ್ಞರು ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಸಿಹಿ ನೀರಿನ ಮೀನನ್ನು ಮುಟ್ಟದಂತೆ ಎಚ್ಚರಿಕೆ ನೀಡಿದ್ದಾರೆ. ಗ್ರೂಪ್ ಬಿಯ ಸ್ಟ್ರೆಪ್ಟೋಕೊಕಸ್ ಬ್ಯಾಕ್ಟೀರಿಯಾ ಸೋಂಕಿನ 79 ಪ್ರಕರಣಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್ 2021 ರಲ್ಲಿ ವರದಿಯಾಗಿದ್ದವು. ಇದಾದ್ಮೇಲೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 79 ಮಂದಿಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆಂದು ವರದಿ ಮಾಡಲಾಗಿದೆ.

ಆರೋಗ್ಯ ರಕ್ಷಣಾ ಕೇಂದ್ರ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದೆ. 37 ಮಂದಿಗೆ ಎಸ್ಟಿ 283 ಸೋಂಕು ಕಾಣಿಸಿಕೊಂಡಿದೆ. ಪ್ರತಿ ತಿಂಗಳು ಸುಮಾರು 26 ಹೊಸ ಪ್ರಕರಣಗಳು ಪತ್ತೆಯಾಗ್ತಿವೆ. ವರದಿ ಪ್ರಕಾರ, ತ್ಸುಯೆನ್ ವಾನ್‌ನ ವೆಟ್ ಮಾರ್ಕೆಟ್ ಮತ್ತು ಯುಯೆನ್ ಲಾಂಗ್‌ನಲ್ಲಿರುವ ಕಂಪನಿಯಲ್ಲಿ ಹೊಸ ಪ್ರಕರಣಗಳು ಕಾಣಿಸಿಕೊಳ್ತಿವೆ. ಈ ರೋಗಿಗಳು ಸಿಹಿನೀರಿನ ಮೀನುಗಳನ್ನು ನೋಡಿಕೊಳ್ಳುವವರಾಗಿದ್ದು, ಕೆಲವರು ಅದನ್ನು ಕೈನಲ್ಲಿ ಮುಟ್ಟಿದವರಿದ್ದಾರೆ.

ಇದನ್ನು ಗ್ರೂಪ್ ಬಿ ಸ್ಟ್ರೆಪ್ಎಂದೂ ಕರೆಯುತ್ತಾರೆ. ಇದು ಸಾಮಾನ್ಯವಾಗಿ ಕರುಳು, ಮೂತ್ರ ಮತ್ತು ಸಂತಾನೋತ್ಪತ್ತಿಯಲ್ಲಿ ಕಂಡುಬರುತ್ತದೆ. ಇದು ಸಾಮಾನ್ಯವಾಗಿ ಆರೋಗ್ಯವಂತ ವಯಸ್ಕರಿಗೆ ಹಾನಿಯನ್ನುಂಟು ಮಾಡುವುದಿಲ್ಲ. ಯಾವುದೇ ರೋಗಲಕ್ಷಣ ಕಾಣಿಸುವುದಿಲ್ಲ. ಆದ್ರೆ ರಕ್ತ, ಮೂಳೆ, ಶ್ವಾಸಕೋಶಗಳಲ್ಲಿ ಸೋಂಕು ಉಂಟುಮಾಡುತ್ತದೆ.

ನವಜಾತ ಶಿಶುಗಳು, ವೃದ್ಧರು ಹಾಗೂ ಅನೇಕ ದಿನಗಳಿಂದ ರೋಗದಿಂದ ಬಳಲುತ್ತಿರುವವರಿಗೆ ಹೆಚ್ಚಿನ ಹಾನಿಯುಂಟು ಮಾಡುತ್ತದೆ.

ಈ ಸೋಂಕಿನ ನಂತ್ರ ನ್ಯುಮೋನಿಯಾ, ರಕ್ತದ ಸೋಂಕು, ಮೂತ್ರದ ಸೋಂಕು ಕಾಣಿಸಿಕೊಳ್ಳುತ್ತದೆ.

ಈ ಪ್ರಕರಣ ಹೆಚ್ಚಾಗ್ತಿದ್ದಂತೆ ಸಮುದ್ರ ಆಹಾರವನ್ನು ಹಸಿಯಾಗಿ ಸೇವನೆ ಮಾಡಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಗುರುವಾರ ಮತ್ತೆ 8 ಪ್ರಕರಣ ಕಾಣಿಸಿಕೊಂಡಿದ್ದು, ಒಟ್ಟು 88 ಮಂದಿ ಈ ರೋಗದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...