alex Certify ಯುವತಿ ಕರೆದಳೆಂದು ಮನೆಗೆ ಹೋದ ಯುವಕನಿಗೆ ಬಿಗ್ ಶಾಕ್: ಬೆಂಗಳೂರಲ್ಲಿ ಮತ್ತೊಂದು ಹನಿಟ್ರ್ಯಾಪ್ ಬೆಳಕಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವತಿ ಕರೆದಳೆಂದು ಮನೆಗೆ ಹೋದ ಯುವಕನಿಗೆ ಬಿಗ್ ಶಾಕ್: ಬೆಂಗಳೂರಲ್ಲಿ ಮತ್ತೊಂದು ಹನಿಟ್ರ್ಯಾಪ್ ಬೆಳಕಿಗೆ

ಬೆಂಗಳೂರು: ನಗರದಲ್ಲಿ ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದೆ. ಯುವಕನ ವಿಡಿಯೋ ಚಿತ್ರೀಕರಿಸಿ ಹಣ ಸುಲಿಗೆ ಮಾಡಿದ್ದ ಗ್ಯಾಂಗ್ ಸದಸ್ಯೆ ಬಂಧಿಸಲಾಗಿದೆ.

ದಿಲೀಪ್ ಕುಮಾರ್ ಎಂಬಾತನಿಗೆ ಹನಿ ಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡಲಾಗಿದೆ. ಮೆಸೇಜ್ ಮಾಡಿ ಪರಿಚಯಿಸಿಕೊಂಡಿದ್ದ ಪ್ರಿಯಾ ಎಂಬ ಯುವತಿ ಅ. 27ರಂದು ಭೇಟಿಯಾಗಲು ಮನೆಗೆ ಕರೆಸಿಕೊಂಡಿದ್ದಳು. ಬಿಟಿಎಂ ಲೇಔಟ್ ಮೊದಲನೇ ಹಂತದಲ್ಲಿರುವ ಮನೆಗೆ ಕರೆಸಿಕೊಂಡಿದ್ದ ಯುವತಿ ನಂತರ ದಿಲೀಪ್ ಕುಮಾರ್ ಪಕ್ಕದಲ್ಲಿ ಯುವತಿ ನಿಲ್ಲಿಸಿ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಗಿತ್ತು.

ಹಣ ಕೊಡದಿದ್ದರೆ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು. 26 ಸಾವಿರ ರೂಪಾಯಿ ನಗದು, ಐಫೋನ್ ಮತ್ತು ಕಾರು ಕೀ ನೀಡಿದ್ದ ದಿಲೀಪ್ ಕುಮಾರ್ ಗೆ ಕಾರ್ ಕೀ ಬೇಕಾದರೆ 60,000 ರೂ. ಕೊಡುವಂತೆ ಗ್ಯಾಂಗ್ ಒತ್ತಾಯಿಸಿತ್ತು.

ಇದರಿಂದ ಬೇಸತ್ತು ಸದ್ದು ಗುಂಟೆಪಾಳ್ಯ ಠಾಣೆಗೆ ದಿಲೀಪ್ ಕುಮಾರ್ ದೂರು ನೀಡಿದ್ದರು. ಸದ್ಯ ಹನಿಟ್ರ್ಯಾಪ್ ಹಿಂದಿನ ಯುವತಿಯನ್ನು ಪೊಲೀಸರು ಬಂಧಿಸಿದ್ದು, ಉಳಿದ ನಾಲ್ವರು ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...